Advertisement
11:16 AM Monday 4-December 2023

ಗಾಂಜಾ ವ್ಯಸನಿಗಳ ವಿರುದ್ಧವೂ ಕ್ರಿಮಿನಲ್ ಪ್ರಕರಣ : 1 ತಿಂಗಳೊಳಗೆ ಕೊಡಗು ಗಾಂಜಾ ಮುಕ್ತ

24/02/2023

ಮಡಿಕೇರಿ ಫೆ.24 : ಕೊಡಗಿನಲ್ಲಿ ಗಾಂಜಾ ಮಾರಾಟ ಮಿತಿ ಮೀರುತ್ತಿರುವ ಮತ್ತು ಗಾಂಜಾ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿರುವ ಹಿನ್ನೆಲೆ ಪೆಡ್ಲರ್‌ಗಳನ್ನು ಟಾರ್ಗೆಟ್ ಮಾಡಿ ಬಂಧಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಗಾಂಜಾ ವ್ಯಸನಿಗಳ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುತ್ತದೆ. ಒಂದು ತಿಂಗಳ ಒಳಗೆ ಕೊಡಗನ್ನು ಗಾಂಜಾ ಮುಕ್ತ ಜಿಲ್ಲೆಯನ್ನಾಗಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.