Advertisement
4:03 AM Saturday 2-December 2023

ಕೊಡಗು ಪೊಲೀಸರ ಕಾರ್ಯಕ್ಷಮತೆ : ವಿವಿಧ ಠಾಣೆಗಳ ಸಿಬ್ಬಂದಿಗಳಿಗೆ ನಗದು ಬಹುಮಾನ ನೀಡಿ ಬೇಷ್ ಎಂದ SP

24/02/2023

ಮಡಿಕೇರಿ ಫೆ.24 : ಕೊಡಗು ಜಿಲ್ಲೆಯ ಮಡಿಕೇರಿ ನಗರ ಠಾಣೆ, ವಿರಾಜಪೇಟೆ ನಗರ ಠಾಣೆ, ವಿರಾಜಪೇಟೆ ಗ್ರಾಮಾಂತರ ಠಾಣೆ ಹಾಗೂ ಸಿದ್ದಾಪುರ ಠಾಣೆಗಳಲ್ಲಿ ನಾಲ್ಕು ಪ್ರತ್ಯೇಕ ಅಕ್ರಮ ಗಾಂಜಾ ಪ್ರಕರಣಗಳನ್ನು ಪತ್ತೆ ಮಾಡಿ ಒಟ್ಟು 3.8 ಕೆ.ಜಿ ಗಾಂಜಾ ವಶಪಡಿಸಿಕೊಂಡಿರುವ ಹಾಗೂ ಮಡಿಕೇರಿ ನಗರ ಠಾಣೆಯ 1, ಕುಶಾಲನಗರ ಪಟ್ಟಣ ಠಾಣೆಯ 2 ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ
ಪತ್ತೆ ಮಾಡಿ ಕಳುವಾಗಿದ್ದ ಒಟ್ಟು 400 ಗ್ರಾಂ ಚಿನ್ನಾಭರಣ ಮತ್ತು ನಗದನ್ನು ವಶಪಡಿಸಿಕೊಂಡು ಉತ್ತಮ ಅಪರಾಧ ಪತ್ತೆ ಕರ್ತವ್ಯ ನಿರ್ವಹಿಸಿರುವ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ್ತು ಶ್ವಾನದಳದ ಸಿಬ್ಬಂದಿಯವರಿಗೆ ಇಂದು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕವಾಯತು ಸಂದರ್ಭದಲ್ಲಿ ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಪೊಲೀಸರ ಕಾರ್ಯಕ್ಷಮತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.