Advertisement
4:01 AM Friday 8-December 2023

ಹೆಜ್ಜೇನು ದಾಳಿಗೆ ವ್ಯಕ್ತಿ ಬಲಿ : ಹುಲಿತಾಳ ಗ್ರಾಮದಲ್ಲಿ ಘಟನೆ

25/02/2023

ಮಡಿಕೇರಿ ಫೆ.25 :  ಹೆಜ್ಜೇನು ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬಾತ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮಡಿಕೇರಿ ತಾಲ್ಲೂಕಿನ ಹುಲಿತಾಳ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಂಜುನಾಥ ಮಾಸ್ಟರ್ ಮತ್ತು ಭಾಗೀರಥಿ ದಂಪತಿಗಳ ಪುತ್ರ ಅಶ್ವಿನಿ ಕುಮಾರ್(48) ಸಾವನ್ನಪ್ಪಿರುವ ವ್ಯಕ್ತಿ.

ಶನಿವಾರ ಬೆಳಗ್ಗೆ ಅಶ್ವಿನಿ ಕುಮಾರ್ ಅವರು ಸಹೋದರಿ ಅಪರ್ಣ ಅವರೊಂದಿಗೆ ಗದ್ದೆಗೆ ತೆರಳಿದ್ದ ಸಂದರ್ಭ ಅವರ ಮೇಲೆ ಹೆಜ್ಜೇನು ದಾಳಿ ನಡೆದಿತ್ತು. ಈ ಸಂದರ್ಭ ಇವರಿಬ್ಬರು ಮನೆಯತ್ತ ಓಡಿ ಕದವಿಕ್ಕಿಕೊಂಡಿದ್ದರು.

ಅಷ್ಟರಲ್ಲೆ ಸಾಕಷ್ಟು ಹೆಜ್ಜೇನುಗಳ ಕಡಿತಕ್ಕೆ ಒಳಗಾಗಿ ಅಸ್ವಸ್ಥರಾಗಿದ್ದ ಅಶ್ವ್ವಿನಿ ಕುಮಾರ್ ಮತ್ತು ಅಪರ್ಣ ಅವರನ್ನು ಮಡಿಕೇರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು, ಅಷ್ಟರಲ್ಲೆ ಅಶ್ವಿನಿ ಕುಮಾರ್ ಕೊನೆಯುಸಿರೆಳೆದಿದ್ದರು. ಇವರ ಸಹೋದರಿ ಅಪರ್ಣ ಪ್ರಾಣಾಪಾಯದಿಮದ ಪಾರಾಗಿದ್ದಾರೆ.