Advertisement
4:41 AM Friday 8-December 2023

ಗಾಯಗೊಂಡ ಕಾಡಾನೆಗೆ ಚಿಕಿತ್ಸೆ

01/03/2023

ಮಡಿಕೇರಿ ಮಾ.1 : ಮಾಕುಟ್ಟ ಬ್ರಹ್ಮಗಿರಿ ವನ್ಯಜೀವಿ ಅರಣ್ಯ ವ್ಯಾಪ್ತಿಯಲ್ಲಿ ಗಾಯಗೊಂಡು ಗೀಳಿಡುತ್ತಿದ್ದ ಕಾಡಾನೆಗೆ ಅರಣ್ಯ ಇಲಾಖೆ ಚಿಕಿತ್ಸೆ ನೀಡಿದೆ. ಚೇತರಿಸಿಕೊಂಡಿರುವ ಕಾಡಾನೆ ಇದೀಗ ಮತ್ತೆ ಕಾಡು ಸೇರಿಕೊಂಡಿದೆ.
ಒAಟಿ ಸಲಗ ಗೀಳಿಡುತ್ತಿದ್ದ ಪ್ರದೇಶಕ್ಕೆ ಭೇಟಿ ನೀಡಿದ ಅರಣ್ಯ ಅಧಿಕಾರಿಗಳ ತಂಡ ಡಿಎಫ್‌ಒ ಎ.ಟಿ.ಪೂವಯ್ಯ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದರು. ವನ್ಯಜೀವಿ ವೈದ್ಯರಾದ ಡಾ.ಚಿಟ್ಟಿಯಪ್ಪ, ಡಾ.ಪ್ರಶಾಂತ್, ಶಾರ್ಪ್ ಶೂಟರ್ ರಂಜನ್ ಹಾಗೂ ಮಾಕುಟ್ಟ ವಲಯದ ಅರಣ್ಯ ಸಿಬ್ಬಂದಿಗಳು ಮತ್ತಿಗೋಡಿನಿಂದ ಸಾಕಾನೆಗಳ ನೆರವು ಪಡೆದು ಗಾಯಾಳು ಸಲಗಕ್ಕೆ ಸೂಕ್ತ ಚಿಕಿತ್ಸೆ ನೀಡಿದರು. ಚಿಕಿತ್ಸೆಯ ನಂತರ ಚೇತರಿಸಿಕೊಂಡ ಕಾಡಾನೆ ಕಾಡಿಗೆ ಮರಳಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.