Advertisement
12:58 AM Thursday 7-December 2023

ಚಾಕುವಿನಿಂದ ಇರಿದು ವ್ಯಕ್ತಿಯ ಹತ್ಯೆ : ಹರಿಹರ ಗ್ರಾಮದಲ್ಲಿ ಘಟನೆ 

02/03/2023

ಮಡಿಕೇರಿ ಮಾ.2 :  ಕ್ಷುಲ್ಲಕ ಕಾರಣಕ್ಕೆ  ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ  ಪೊನ್ನಂಪೇಟೆ  ತಾಲೂಕಿನ ಹರಿಹರ ಗ್ರಾಮದಲ್ಲಿ ನಡೆದಿದೆ.

ಸಂತು ಸುಬ್ಬಯ್ಯ (39) ಸಾವಿಗೀಡಾದ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಳಪ್ಪ ಹಾಗೂ ಸಂಪತ್  ಎಂಬಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು,  ಸ್ಥಳಕ್ಕೆ ಶ್ರೀಮಂಗಲ ಪೋಲಿಸರು ಭೇಟಿ ನೀಡಿ  ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.