Advertisement
3:31 AM Saturday 2-December 2023

10 ಎಕರೆ ಪ್ರದೇಶದ ನೆಲಹುಲ್ಲು, ಗಿಡಗಳು ನಾಶ

08/03/2023

ಮಡಿಕೇರಿ ಮಾ.8 : ನಾಗರಹೊಳೆ ಉದ್ಯಾನದ ಆನೆಚೌಕೂರು ವಲಯದಲ್ಲಿ ಕಾಣಿಸಿಕೊಂಡ ಬೆಂಕಿಯಿAದ ಸುಮಾರು ಹತ್ತು ಎಕರೆಯಷ್ಟು ಪ್ರದೇಶದ ನೆಲಹುಲ್ಲು ಮತ್ತು ಗಿಡಗಳು ಬೆಂಕಿಗಾಹುತಿಯಾಗಿದೆ.
150ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳು ಸತತ ಕಾರ್ಯಾಚರಣೆ ನಡೆಸಿ ಬೆಂಕಿ ಇತರೆಡೆಗೆ ಹರಡದಂತೆ ತಡೆಯುವಲ್ಲಿ ಯಶಸ್ವಿಯಾದರು.
ಕಾಡಿಗೆ ಬೆಂಕಿ ಹಚ್ಚುವ ಮತ್ತು ಅತಿಕ್ರಮ ಪ್ರವೇಶ ಮಾಡುವ ಕಿಡಿಗೇಡಿಗಳ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ (082222 252041)ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ಮನವಿ ಮಾಡಿದ್ದಾರೆ.