Advertisement
9:38 AM Sunday 3-December 2023

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ದಾಖಲೆಯ 2.86 ಕೋಟಿ ರೂ. ಸಂಗ್ರಹ

08/03/2023

ಮಡಿಕೇರಿ ಮಾ.8 : ಭಕ್ತರ ಆರಾಧ್ಯ ದೇವರು ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪರ ಹುಂಡಿಯಲ್ಲಿ ಕಳೆದ 27 ದಿನಗಳಲ್ಲಿ 2.86 ಕೋಟಿ ನಗದು, ಚಿನ್ನ ಮತ್ತು ಬೆಳ್ಳಿ ಸಂಗ್ರಹವಾಗಿದೆ. 90 ಗ್ರಾಂ ಚಿನ್ನ ಮತ್ತು 2 ಕೆಜಿ 825 ಗ್ರಾಂ ಬೆಳ್ಳಿಯ ಪದಾರ್ಥಗಳನ್ನು ಕಾಣಿಕೆಯ ರೂಪದಲ್ಲಿ ಭಕ್ತರು ಮಾದಪ್ಪನಿಗೆ ಅರ್ಪಿಸಿದ್ದಾರೆ.
ಈ ಮೊತ್ತವು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಹುಂಡಿ ಎಣಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿ ದೇವಿ ತಿಳಿಸಿದ್ದಾರೆ.