Advertisement
3:36 AM Friday 8-December 2023

ಕಳೆದು ಹೋಗಿದ್ದ 2 ಮೊಬೈಲ್‌ ಫೋನ್ CEIR Portal ಸಹಾಯದಿಂದ ಪತ್ತೆ

08/03/2023

ಮಡಿಕೇರಿ ಮಾ.8 : ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳೆದು ಹೋಗಿದ್ದ 2 ಮೊಬೈಲ್‌ ಫೋನ್ ಗಳನ್ನು CEIR Portal ಸಹಾಯದಿಂದ ಪತ್ತೆಹಚ್ಚಿರುವ ಪೊಲೀಸರು ವಾರಸುದಾರರಿಗೆ ಹಿಂತಿರುಗಿಸಿದರು.  ಕಳವಾದ/ಕಳೆದುಹೋದ/ಸುಲಿಗೆಯಾದ ಮೊಬೈಲ್ ಫೋನ್ ಗಳ ದುರ್ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನೂತನವಾಗಿ ಅನುಷ್ಠಾನಗೊಂಡ CEIR Portal ಇದೀಗ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರಿಗೆ ಹೆಚ್ಚು ಸಹಕಾರಿಯಾಗಿದೆ.