ಮಡಿಕೇರಿ ಮಾ.17 : ಬಹುಭಾಷಾ ಚಿತ್ರನಟಿ ಕೊಡಗಿನ ಹರ್ಷಿಕಾ ಪೂಣಚ್ಚ ಅವರಿಗೆ ಭೋಜ್‍ಪುರಿ ಭಾಷೆಯಲ್ಲಿನ ಚಿತ್ರದ ಅಭಿನಯಕ್ಕಾಗಿ ಪ್ರಶಸ್ತಿ ದೊರೆತಿದೆ.
ಭೋಜ್‍ಪುರಿ ಭಾಷಾ ಸಿನಿಮಾ ‘ಹಮ್ ಹೆ ರಾಜಿ ಪ್ಯಾರ್ ಕೆ’ ಚಿತ್ರದಲ್ಲಿ ಇವರು 2012ರಲ್ಲಿ ಮೊದಲ ಬಾರಿಗೆ ನಟಿಸಿದ್ದರು.
ಮೊದಲ ಚಿತ್ರದಲ್ಲೇ ನೀಡಿರುವ ಉತ್ತಮ ಅಭಿನಯಕ್ಕಾಗಿ ‘ಬೆಸ್ಟ್ ಡೆಬ್ಯೂ ಆಕ್ಟ್ರೆಸ್’ ಪ್ರಶಸ್ತಿ ನೀಡಲಾಗಿದೆ.
ದುಬಾಯಿಯಲ್ಲಿ ಇಂಟರ್ ನ್ಯಾಷನಲ್ ಭೋಜ್‍ಪುರಿ ಫಿಲಂ ಅವಾರ್ಡ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹರ್ಷಿಕಾ ಐ.ಬಿ.ಎಫ್.ಎ.ಪ್ರಶಸ್ತಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಭೋಜ್‍ಪುರಿ ಭಾಷಾ ಚಿತ್ರ ತಂಡದ ಬಹುತೇಕ ಪ್ರಮುಖ ನಟ-ನಟಿಯರು, ಬಾಲಿವುಡ್ ನಟ ಗೋವಿಂದ್ ಸೇರಿದಂತೆ ಬಾಲಿವುಡ್‍ನ ತಾರೆಯರು ಪಾಲ್ಗೊಂಡಿದ್ದರು.


















