Advertisement
4:41 PM Sunday 3-December 2023

*ಸುಂಟಿಕೊಪ್ಪದಲ್ಲಿ ಜೆಡಿಎಸ್ ರೋಡ್ ಶೋ*

30/04/2023

ಸುಂಟಿಕೊಪ್ಪ ಏ.30 : ಮಡಿಕೇರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಜೆಡಿಎಸ್‌ಗೆ ಮತ ನೀಡಿ ಎಂದು ಜೆಡಿಎಸ್ ಆಭ್ಯರ್ಥಿ ನಾಪಂಡ ಮುತ್ತಪ್ಪ ಮನವಿ ಮಾಡಿದ್ದಾರೆ.
ಸುಂಟಿಕೊಪ್ಪದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಪ್ರಾದೇಶಿಕ ಪಕ್ಷದಿಂದ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೂಲಭೂತ ಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿದೆ ಎಂದರು. ಜಿಲ್ಲಾ ಜೆಡಿಎಸ್ ಪಕ್ಷದ ಕೆ.ಎಂ.ಗಣೇಶ್ ಮಾತನಾಡಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ಮುಖದ 2 ನಾಣ್ಯಗಳು ಎಂದು ಟೀಕಿಸಿದರು.
ಪ್ರಮುಖರಾದ ಇಸಾಕ್ ಖಾನ್, ಕೆ.ಇ.ಕರೀಂ ಮತ್ತಿತರರು ಇದ್ದರು. ನಂತರ ನಾಪಂಡ ಮುತ್ತಪ್ಪ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.