Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೊಡಗಿನಲ್ಲಿ ಮೊದಲ ಬಾರಿಗೆ ವಿಶೇಷ ಚೇತನರಿಗಾಗಿ ರಾಜ್ಯಮಟ್ಟದ ಕ್ರೀಡಾಕೂಟ* 
  • *ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ* 
  • *ಮಾ.16 ರಂದು “ಸ್ವಚ್ಛ ಕೊಡಗು, ಸುಂದರ ಕೊಡಗು” ಉದ್ಘಾಟನಾ ಕಾರ್ಯಕ್ರಮ*
  • *ಕುಶಾಲನಗರ ಸಂಚಾರ ಠಾಣೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ*
  • *ಮಡಿಕೇರಿ ಘಟಕದ ನೂತನ ಡಿಪೋ ವ್ಯವಸ್ಥಾಪಕರನ್ನು ಭೇಟಿಯಾದ ಎಐಟಿಯುಸಿ ಸಂಘಟನೆ*
  • *ಅಂತರಾಷ್ಟ್ರೀಯ ಥೈಲ್ಯಾಂಡ್ ಮಾಸ್ಟರ್ಸ್ ಅಥ್ಲೆಟಿಕ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಗೆದ್ದ ಬಂಗಾಡುಮನೆ ವಸಂತಿ*
  • *ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಮಹಿಳಾ ದಿನಾಚರಣೆ : ಸಾಧಕರಿಗೆ ಸನ್ಮಾನ*
  • *ಸೋಮವಾರಪೇಟೆ : ಮಹಿಳೆಯರು ಶಿಕ್ಷಣ ಪಡೆಯಲು ಕೆ.ಹೆಚ್.ಧನಲಕ್ಷ್ಮೀ ಸಲಹೆ*
  • *ಅಖಿಲ ಅಮ್ಮ ಕೊಡವ ಸಮಾಜದ ಅಭಿವೃದ್ಧಿಗೆ ಶಾಸಕ ಎ.ಎಸ್.ಪೊನ್ನಣ್ಣರಿಂದ ಚೆಕ್ ವಿತರಣೆ*
  • *ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ : ಆಧುನಿಕತೆಯ ಭರದಲ್ಲಿ ಸಂಸ್ಕಾರಗಳು ಕಣ್ಮರೆಯಾಗುತ್ತಿರುವುದು ವಿಷಾದನೀಯ : ವಿನೋದ್ ಮೂಡಗದ್ದೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡವ ರೈಡರ್ಸ್ ಕ್ಲಬ್ ತಂಡದಿಂದ ಕೋಣಂಗೇರಿಯಲ್ಲಿ ವನಮಹೋತ್ಸವ : ಕೊಡವರು ಜಾಗ ಮಾರಾಟ ಮಾಡದಂತೆ ಕರೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡವ ರೈಡರ್ಸ್ ಕ್ಲಬ್ ತಂಡದಿಂದ ಕೋಣಂಗೇರಿಯಲ್ಲಿ ವನಮಹೋತ್ಸವ : ಕೊಡವರು ಜಾಗ ಮಾರಾಟ ಮಾಡದಂತೆ ಕರೆ*

ಜೂನ್ 25, 20233 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
ಮಡಿಕೇರಿ ಜೂ.25 : ಕೊಡಗು ಜಿಲ್ಲೆಯ ಶ್ರೀಮಂತ ಸಂಸ್ಕೃತಿಯ ಮೇಲೆ ಅತ್ಯಾಚಾರ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಸಾಮಾಜಿಕ ಅಭದ್ರತೆ ಕಾಡುತ್ತಿದೆ. ಯಾವುದೇ ಕಾರಣಕ್ಕೂ ಕೊಡವರು ತಮ್ಮ ಜಾಗವನ್ನು ಹೊರಗಿನವರಿಗೆ ಮಾರಾಟ ಮಾಡಬಾರದು ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಕರೆ ನೀಡಿದರು.
ಕೊಡವ ರೈಡರ್ಸ್ ಕ್ಲಬ್ ಮುಂದಾಳತ್ವದಲ್ಲಿ ಬಾಂಡಿಂಗ್ ಬ್ಲೂಮ್ಸ್ ಕೊಡಗು ಸಂಸ್ಥೆ ಹಾಗೂ ಗೋಣಿಕೊಪ್ಪ ಕಾವೇರಿ ಕಾಲೇಜು ಸಹಯೋಗದಲ್ಲಿ ಕೋಣಂಗೇರಿ ತುಪ್ಪನಾಣಿ ಭಗವತಿ ದೇವಸ್ಥಾನದ ಅವರಣದಲ್ಲಿ ನಡೆದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಜಿಲ್ಲೆಯ ಪರಿಸ್ಥಿತಿ ಹಿಂದಿನಂತಿಲ್ಲ ಎಂದರು.
ಜಿಲ್ಲೆಯಲ್ಲಿ ಸಾಮಾಜಿಕ ಅಭದ್ರತೆ ಕಾಡುವುದರ ಜೊತೆಗೆ ಪ್ರಾಕೃತಿಕ ಅಸಮತೋಲನ ಎದುರಾಗಿದೆ, ಒಂದೆಡೆ ಗಿಡ ನೆಡುವ ಕೆಲಸವಾಗುತ್ತಿದ್ದರೆ ಮತ್ತೊಂದೆಡೆ ಕಾಡಿನಲ್ಲಿ ಮಾತ್ರವಲ್ಲ ನಾಡಿನಲ್ಲಿ ಕೂಡ ಮರಗಳ ಹನನವಾಗುತ್ತಿದೆ. ಸ್ಥಳೀಯರಿಂದ ಅರಣ್ಯವನ್ನು ಕಾಪಾಡುವ ಕೆಲಸವಾದರೆ, ಹೊರಗಿನ ಮರಗಳ್ಳರಿಂದ ಅರಣ್ಯ ನಾಶವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮತ್ತೋರ್ವ ಮುಖ್ಯ ಅತಿಥಿ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಾತನಾಡಿ ಒಂದು ಸಮಯದಲ್ಲಿ ಭತ್ತದ ಕಣಜವಾಗಿದ್ದ ಕೊಡಗಿನಲ್ಲಿ ಭತ್ತ ಬೆಳೆಯುವ ಪ್ರದೇಶಗಳು ಮಾಯವಾಗಿದೆ, ಇದಕ್ಕೆ ಮೂಲ ಕಾರಣ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿರುವುದು ರೈತರ ಭತ್ತ ಬೆಳೆಯುವ ಪ್ರದೇಶಕ್ಕೆ ಇಂತಿಷ್ಟು ಸಹಾಯಧನ ನೀಡಬೇಕಿದೆ  ಎಂದು ಅಭಿಪ್ರಾಯಪಟ್ಟ ಅವರು ನಮ್ಮ ಪೂರ್ವಿಕರ ತಿಳುವಳಿಕೆ ಜ್ಞಾನ ಇಂದಿನ ಯಾವುದೇ ವಿಜ್ಞಾನಿಗಳಿಗೂ ಕಡಿಮೆ ಇಲ್ಲ, ಭತ್ತದ ಗದ್ದೆಗಳಿಗೆ ನೀರುಣಿಸುವ ಬರೆಕಾಡ್ ಹಾಗೂ ದೇವರಕಾಡು ಹೀಗೆ ಒಂದೊಂದು ಅರಣ್ಯಕ್ಕೂ ಒಂದೊಂದು ಹೆಸರಿಟ್ಟು ಅರಣ್ಯ ರಕ್ಷಣೆ ಮಾಡುವ ಜೊತೆಗೆ ನೀರಿನ ಸೆಲೆಯನ್ನು ಕಾಪಾಡಿದ ವಿಜ್ಞಾನಿಗಳು ನಮ್ಮ ಹಿರಿಯರು. ಇದನ್ನು ನಮ್ಮ ಇಂದಿನ ಪೀಳಿಗೆ ನಾವು ಮಾಡಿದೆ, ಆದರೆ ನಂತರದ ದಿನಗಳಲ್ಲಿ ಕಾಡಿನ ಬಗ್ಗೆ ಮಾಹಿತಿ ಇಲ್ಲದವರು ಕೂಡ ಅರಣ್ಯ ಮಂತ್ರಿಗಳಾಗಿ ಆಯ್ಕೆಯಾಗುತ್ತಿರುವುದು ನಮ್ಮ ದುರ್ದೈವ, ಅವರಿಗೆ ಕಾಡಿನ ಬಗ್ಗೆ ಜ್ಞಾನ ಎಲ್ಲಿರಬೇಕು, ಬೆಂಗಳೂರಿನ ಹವಾ ನಿಯಂತ್ರಣ ಕೊಠಡಿಯಲ್ಲಿ ಕುಳಿತು ಅರಣ್ಯದ ಬಗ್ಗೆ ಕಾನೂನು ರೂಪಿಸುವ ಮಂದಿಯಿಂದ ಇಂದು ಅರಣ್ಯ ನಾಶವಾಗಿದೆ, ಇದರಿಂದಲೇ ಒಂದು ಕಾಲದಲ್ಲಿ ಸಮೃದ್ಧವಾಗಿದ್ದ ಕಾಡನ್ನು ಕುಡಿದು ತೇಗ, ಬೀಟಿ ಹಾಗೂ ನೀಲಗಿರಿ ತೋಪುಗಳಾಗಿ ಪರಿವರ್ತನೆ ಮಾಡಿರುವುದರ ಫಲ ಇವತ್ತು ವನ್ಯಮೃಗಗಳು ಆಹಾರ ಹರಿಸಿ ನಾಡಿಗೆ ಬರುವಂತಾಗಿದೆ ಎನ್ನುತ್ತಾ ಇವುಗಳನ್ನು ನಮ್ಮ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ಸರಿಪಡಿಸಬೇಕಿದೆ, ಭವ್ಯ ಭಾರತದ ಭವಿಷ್ಯ ಯುವಕ ಯುವತಿಯರ ಹೆಗಲ ಮೇಲಿದೆ ಎಂದರು.
ಮತ್ತೋರ್ವ ಅತಿಥಿ ಹಾಗೂ ಸಾಮಾಜ ಸೇವಕರಾದ ಅಜ್ಜಿಕುಟ್ಟೀರ ಕಮಲ ಪೂಣಚ್ಚ ಮಾತನಾಡಿ ಕಾಡು ಪ್ರಾಣಿಗಳಿಗೆ ಕಾಡಿನಲ್ಲಿ ಸರಿಯಾದ ಆಹಾರ ದೊರಕದೆ ಅವು ನಾಡಿಗೆ ಲಗ್ಗೆ ಇಡುತ್ತಿದ್ದು, ಕಾಡಿನಲ್ಲಿ ಸರಿಯಾದ ನೀರಿನ ವ್ಯವಸ್ಥೆ ಹಾಗೂ ಆಹಾರ ದೊರೆತರೆ ಅವು ಖಂಡಿತಾ ನಾಡಿಗೆ ಬರುವುದಿಲ್ಲ. ಕಾಡಿನೊಳಗೆ ಇವುಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆಯನ್ನು ಮಾಡಬೇಕಿದೆ ಎನ್ನುತ್ತಾ, ಬಹುತೇಕ ಅರಣ್ಯ ನಾಶವಾಗಿದ್ದೆ ವನ್ಯಮೃಗಗಳು ನಾಡಿಗೆ ಬರಲು ಕಾರಣವಾಗಿದೆ ಎಂದರು. ನಾವು ತಿಂದು ಬಿಸಾಡುವ ಹಣ್ಣಿನ ಬೀಜಗಳನ್ನು ಕಾಡಿಗೆ ಬಿಸಾಡುವುದರ ಮೂಲಕ ಮತ್ತೆ ಕಾಡನ್ನು ಸೃಷ್ಟಿಸಬಹುದು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ರೈಡರ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ಕ್ಲಬ್ ಬೆಳೆದು ಬಂದಿರುವ ಹಾದಿಯ ಬಗ್ಗೆ ತಿಳಿಸಿ, ಗಿಡನೆಡುವ ಉದ್ದೇಶಗಳನ್ನು ಹಾಗೂ ಪ್ರತಿವರ್ಷ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಕೊರೋನ ಸಮಯದಲ್ಲಿ ಕೂಡ ಮನೆಯಲ್ಲಿಯೇ ಕುಳಿತು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು, ಇದರಿಂದ ಸಾವಿರಾರು ಪರಿಸರ ಪ್ರೇಮಿಗಳು ಗಿಡನೆಟ್ಟು ವಿಡಿಯೋ ಹಂಚಿಕೊಂಡರು ಎಂದು ಸಂತೋಷ ವ್ಯಕ್ತಪಡಿಸಿದರು.
ಈ ಸಂದರ್ಭ ದಾನಿಗಳು ಹಾಗೂ ಸಮಾಜ ಸೇವಕ ಅಜ್ಜಿಕುಟ್ಟೀರ ಶಾಂತು ಪೂಣಚ್ಚ, ಬಾಂಡಿಂಗ್ ಬ್ಲೂಮ್ಸ್ ಕೊಡಗು ಅಧ್ಯಕ್ಷೆ ಬಾಚಮಾಡ ಲಿಜೇಟ್ ಭವಿ ಕುಮಾರ್, ತುಪ್ಪನಾಣಿ ಭಗವತಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕುಪ್ಪಣಮಾಡ ಗಣೇಶ್, ಅಂಜಿಕೇರಿ ನಾಡ್ ಜೋಡಿ ತಕ್ಕರಲ್ಲಿ ಒಬ್ಬರಾದ ಚಕ್ಕೇರ ರಾಜೇಶ್, ಕಾವೇರಿ ಕಾಲೇಜು ಎನ್, ಎಸ್,ಎಸ್ ವಿಭಾಗದ ಅಧಿಕಾರಿ ಮಂದೆಯಂಡ ವನಿತ್ ಕುಮಾರ್ ಉಪಸ್ಥಿತರಿದ್ದು ಮಾತನಾಡಿದರು. ದೇವಸ್ಥಾನ ಅವರಣದಲ್ಲಿ ಗಿಡ ನೆಡುವುದರ ಬಳಿಕ ಹುದಿಕೇರಿ ಸಮುದಾಯ ಆರೋಗ್ಯ ಕೇಂದ್ರ ಅವರಣದಲ್ಲಿ ಗಿಡ ನೆಡಲಾಯಿತು ಕೊಡವ ರೈಡರ್ಸ್ ಕ್ಲಬ್ ಸದಸ್ಯರು, ಬಾಂಬಿಂಗ್ ಬ್ಲೂಮ್ಸ್ ಸದಸ್ಯರು ಸೇರಿದಂತೆ ಊರಿನವರು ಹಾಗೂ ಗೋಣಿಕೊಪ್ಪ ಕಾವೇರಿ ಕಾಲೇಜು ಎನ್ ಎಸ್ ಎಸ್ ವಿಭಾಗದ ವಿದ್ಯಾರ್ಥಿಗಳು, ವಿರಾಜಪೇಟೆ ತ್ರೀವೇಣಿ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಚೆನ್ನಪಂಡ ಕಲ್ಪನ ತಿಮ್ಮಯ್ಯ ನಿರೂಪಿಸಿದರು. ಕೊಡವ ಜನಾಂಗದ ಕಾರೋಣ ಹಿಡಿಯುವ ಗೆಜ್ಜೆತಂಡ್ ಬಳಕೆಯ ಕರಿಮರ ಸೇರಿದಂತೆ, ಹಣ್ಣಿನ ಗಿಡಗಳು, ಕಾಡು ಜಾತಿಯ ಗಿಡಗಳನ್ನು ನೆಡಲಾಯಿತು.
Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕೊಡಗಿನಲ್ಲಿ ಮೊದಲ ಬಾರಿಗೆ ವಿಶೇಷ ಚೇತನರಿಗಾಗಿ ರಾಜ್ಯಮಟ್ಟದ ಕ್ರೀಡಾಕೂಟ* 

ಮಾರ್ಚ್ 15, 2026

*ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ* 

ಮಾರ್ಚ್ 15, 2026

*ಮಾ.16 ರಂದು “ಸ್ವಚ್ಛ ಕೊಡಗು, ಸುಂದರ ಕೊಡಗು” ಉದ್ಘಾಟನಾ ಕಾರ್ಯಕ್ರಮ*

ಮಾರ್ಚ್ 15, 2026

*ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ* 

ಮಾರ್ಚ್ 15, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಮಡಿಕೇರಿ NEWS DESK ಮಾ.15 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ…

*ಮಾ.16 ರಂದು “ಸ್ವಚ್ಛ ಕೊಡಗು, ಸುಂದರ ಕೊಡಗು” ಉದ್ಘಾಟನಾ ಕಾರ್ಯಕ್ರಮ*

ಮಾರ್ಚ್ 15, 2026

*ಕುಶಾಲನಗರ ಸಂಚಾರ ಠಾಣೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ*

ಮಾರ್ಚ್ 15, 2026

*ಮಡಿಕೇರಿ ಘಟಕದ ನೂತನ ಡಿಪೋ ವ್ಯವಸ್ಥಾಪಕರನ್ನು ಭೇಟಿಯಾದ ಎಐಟಿಯುಸಿ ಸಂಘಟನೆ*

ಮಾರ್ಚ್ 15, 2026

*ಅಂತರಾಷ್ಟ್ರೀಯ ಥೈಲ್ಯಾಂಡ್ ಮಾಸ್ಟರ್ಸ್ ಅಥ್ಲೆಟಿಕ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಗೆದ್ದ ಬಂಗಾಡುಮನೆ ವಸಂತಿ*

ಮಾರ್ಚ್ 15, 2026

*ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಮಹಿಳಾ ದಿನಾಚರಣೆ : ಸಾಧಕರಿಗೆ ಸನ್ಮಾನ*

ಮಾರ್ಚ್ 13, 2026

*ಸೋಮವಾರಪೇಟೆ : ಮಹಿಳೆಯರು ಶಿಕ್ಷಣ ಪಡೆಯಲು ಕೆ.ಹೆಚ್.ಧನಲಕ್ಷ್ಮೀ ಸಲಹೆ*

ಮಾರ್ಚ್ 13, 2026

*ಅಖಿಲ ಅಮ್ಮ ಕೊಡವ ಸಮಾಜದ ಅಭಿವೃದ್ಧಿಗೆ ಶಾಸಕ ಎ.ಎಸ್.ಪೊನ್ನಣ್ಣರಿಂದ ಚೆಕ್ ವಿತರಣೆ*

ಮಾರ್ಚ್ 13, 2026

*ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ : ಆಧುನಿಕತೆಯ ಭರದಲ್ಲಿ ಸಂಸ್ಕಾರಗಳು ಕಣ್ಮರೆಯಾಗುತ್ತಿರುವುದು ವಿಷಾದನೀಯ : ವಿನೋದ್ ಮೂಡಗದ್ದೆ*

ಮಾರ್ಚ್ 13, 2026

*ಗೋಣಿಕೊಪ್ಪ : ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಿ : ಜಗದೀಶ್ ಜೋಡುಬೀಟಿ*

ಮಾರ್ಚ್ 13, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.