Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಡೊನಾಲ್ಡ್ ಟ್ರಂಪ್ ಮೆಚ್ಚಿದ ಆ ‘ಒಂದು’ ನಿರ್ಧಾರ ಯಾವುದು? ಭಾರತಕ್ಕೆ ಸಿಗಲಿದೆ ಅತಿದೊಡ್ಡ ಆರ್ಥಿಕ ಲಾಭ!*
  • *ಜಾಹ್ನವಿ ಕಂದುಲಾ ಜೀವಕ್ಕೆ ‘ಬೆಲೆ’ ಕಟ್ಟಿದ ಅಮೆರಿಕಾ! ಸಿಯಾಟಲ್ ನಗರದಿಂದ ಬರಲಿದೆಯೇ ₹262 ಕೋಟಿ ಪರಿಹಾರ?*
  • *ಬಿಸಾಡಿದ ಬಾಟಲಿಗಳಿಂದ ಮತ್ತೆ ಗ್ಲಾಸಿಗೆ? ದೆಹಲಿ ಸ್ಟೇಡಿಯಂ ಸಿಬ್ಬಂದಿಯ ಈ ಕರ್ಮಕಾಂಡ ನೋಡಿ ನೀವೂ ವಾಕರಿಕೆ ಮಾಡ್ಕೊತೀರಾ!*
  • *ಚಿನ್ನಸ್ವಾಮಿಯಲ್ಲಿ ಮತ್ತೆ ಮೊಳಗಲಿದೆ RCB.. RCB.. ಸದ್ದು! ಸರ್ಕಾರದ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಹೇಗೆ? ಅಭಿಮಾನಿಗಳೇ ಈಗಲೇ ರೆಡಿಯಾಗಿ!*
  • *ಕರೆಂಟ್ ಬಿಲ್ ನೋಡಿ ಬೆಚ್ಚಿಬೀಳಬೇಡಿ! ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಗೆ ಕ್ಷಣಗಣನೆ; ಯಾರಿಗೆ ಎಷ್ಟು ಹೊರೆ?*
  • *ಶಾಲೆ ಪ್ರವಾಸಕ್ಕೆ ಟ್ರಕ್ ಬಳಕೆ: ಪೋಷಕರು ಫುಲ್ ಗರಂ! ಹೆಡ್‌ಮಾಸ್ಟರ್ ಅಮಾನತು ಹಿಂದಿನ ಅಸಲಿ ಕಥೆ ಇಲ್ಲಿದೆ*
  • *ಕೊಡಗಿಗೆ ಭೇಟಿ ನೀಡಿದ ಪೊಲೀಸ್ ಮಹಾ ನಿರೀಕ್ಷಕರು*
  • *ಕುಶಾಲನಗರದಲ್ಲಿ ಒಣ ಕಸ ಸಂಗ್ರಹ ಘಟಕ ಉದ್ಘಾಟನೆ*
  • *ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗಿದೆ : ಗುತ್ತಿಗೆದಾರರ ಸಂಘ ಗಂಭೀರ ಆರೋಪ*
  • *ಕೇಂದ್ರ ಸರಕಾರದ ವಿರುದ್ಧ ಮಡಿಕೇರಿಯಲ್ಲಿ ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ಬಾರದ ಮಳೆ : ಬರಿದಾದ ಹಾರಂಗಿ : ಕೃಷಿಕರು, ಪ್ರವಾಸಿಗರಿಗೆ ನಿರಾಶೆ*
ಇತ್ತೀಚಿನ ಸುದ್ದಿಗಳು

*ಬಾರದ ಮಳೆ : ಬರಿದಾದ ಹಾರಂಗಿ : ಕೃಷಿಕರು, ಪ್ರವಾಸಿಗರಿಗೆ ನಿರಾಶೆ*

June 25, 20232 Mins Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

ಮಡಿಕೇರಿ ಜೂ.25 : ಮುಂಗಾರು ಕ್ಷೀಣವಾಗಿ ಜೀವನದಿ ಕಾವೇರಿಯ ಒಡಲು ಬತ್ತಿದ್ದು, ಜಿಲ್ಲೆಯ ಏಕೈಕ ಪ್ರಮುಖ ಜಲಾಶಯ ಬರಡಾಗಿದೆ. ಡೆಡ್ ಸ್ಟೋರೆಜ್ ನ ಆತಂಕಕಾರಿ ಸ್ಥಿತಿ ಹಾರಂಗಿಯಲ್ಲಿದ್ದು, ಈ ಭಾಗದ ಕೃಷಿಕ ವರ್ಗ ಕಂಗಾಲಾಗಿದೆ.
ಲಕ್ಷಾಂತರ ಕೃಷಿಕರಿಗೆ ನೀರುಣಿಸುವ ಕೃಷ್ಣರಾಜ ಸಾಗರ ಜಲಾಶಯ ಭರ್ತಿಯಾಗಿ, ನಾಡಿನಲ್ಲಿ ಸುಭಿಕ್ಷೆ ಮೂಡಬೇಕಾದರೆ ಕಾವೇರಿಯ ಒಡಲು ತುಂಬಿ, ಹಾರಂಗಿ ಭರ್ತಿಯಾಗುವುದು ಅನಿವಾರ್ಯ. ಮುಂಗಾರು ಮಳೆೆಯ ನಿರೀಕ್ಷೆಯಲ್ಲಿಯೇ ಜೂನ್ ತಿಂಗಳ ನಾಲ್ಕನೇ ವಾರ ಸರಿದು ಹೋಗುತ್ತಿದ್ದು, ಕಳೆದ ಒಂದೆರಡು ದಿನಗಳಿಂದ ಜಿಲ್ಲೆಯಲ್ಲಿ ಹನಿ ಮಳೆಯಷ್ಟೇ ಆಗುತ್ತಿದೆ.
ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಹಾಗೂ ಮಡಿಕೇರಿ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಸುರಿಯುವ ಮಳೆ ಕಾವೇರಿಯ ಒಡಲು ತುಂಬುತ್ತದೆ. ವಿರಾಜಪೇಟೆ ವಿಭಾಗದ ಮಳೆ ಲಕ್ಷ್ಮಣ ತೀರ್ಥವನ್ನು ಸೇರಿ ಕಾವೇರಿಯನ್ನು ಸಂಧಿಸುತ್ತದೆ. ಇತ್ತ ಸೋಮವಾರಪೇಟೆಯ ಮಾದಾಪುರ ವಿಭಾಗದಲ್ಲಿ ಸುರಿಯುವ ಮಳೆ ಹಾರಂಗಿ ಹೊಳೆಯನ್ನು ಉಕ್ಕಿಸಿ, ಹಾರಂಗಿ ಜಲಾಶಯವನ್ನು ಭರ್ತಿ ಮಾಡುತ್ತದೆ.
ಪ್ರಸ್ತುತ ಜಿಲ್ಲೆಯಲ್ಲಿ ಹರಡಿದಂತೆ ಅಲ್ಲಲ್ಲಿ ಕೊಂಚ ಮಳೆಯಾಗುತ್ತಿದೆ. ಕೆಆರ್‌ಎಸ್ ಭರ್ತಿಯಾಗಬೇಕಾದರೆ ಕೊಡಗಿನಲ್ಲಿ ಉತ್ತಮ ಮುಂಗಾರು ಇರಬೇಕು. ಪ್ರತಿ ವರ್ಷದಂತೆ ಜೂನ್ ತಿಂಗಳಿನಲ್ಲೇ ಮಳೆ ಆರಂಭಗೊಂಡಿದ್ದರೆ ಕಾವೇರಿ ನದಿ ನೀರಿನ ಮಟ್ಟ ಹೆಚ್ಚುವುದರೊಂದಿಗೆ, ಹಾರಂಗಿ ಜಲಾಶಯವೂ ಸಾಕಷ್ಟು ತುಂಬಿಕೊಳ್ಳುತ್ತಿತ್ತು. ಕೆಆರ್‌ಎಸ್‌ನತ್ತ ದೊಡ್ಡ ಪ್ರಮಾಣದ ನೀರು ಹರಿದು ಹೋಗುತಿತ್ತು. ಆದರೆ, ಈ ಬಾರಿ ಪ್ರಕೃತಿ ಮುನಿಸಿಕೊಂಡಿದೆ.
ಕುಶಾಲನಗರ ಸಮೀಪದ ಹಾರಂಗಿ ಜಲಾಶಯ 8.5 ಟಿಎಂಸಿ ಗರಿಷ್ಠ ಜಲಧಾರಣಾ ಸಾಮರ್ಥ್ಯ ಹೊಂದಿದೆ. 2859 ಅಡಿಗಳ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 2819.05 ಅಡಿಗಳಷ್ಟೆ ಇದ್ದು, ನೀರಿನ ಪ್ರಮಾಣ ಕೇವಲ 2.58 ಟಿಎಂಸಿಗೆ ತಲುಪಿದ್ದು, ಇದು ಬಹುತೇಕ ‘ಡೆಡ್ ಸ್ಟೋರೇಜ್’ ಹಂತಕ್ಕೆ ತಲುಪಿದೆ. ಕಳೆದ 2022 ನೇ ಸಾಲಿನಲ್ಲಿ ಇದೇ ಸಮಯ ಜಲಾಶಯದ ಮಟ್ಟ 2852.07 ಅಡಿಗಳಾಗಿತ್ತು ಮತ್ತು 6.37 ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ಅಂಕಿ ಅಂಶ ಪ್ರಸ್ತುತ ಕೊಡಗಿನ ಮುಂಗಾರಿನ ಪರಿಸ್ಥಿತಿಗಳನ್ನು ನಿಚ್ಚಳವಾಗಿ ತೋರಿಸಿಕೊಡುತ್ತಿದೆ.
ಮಳೆಯ ಅಭಾವದಿಂದ ಹಾರಂಗಿ ಜಲಾಶಯದ ಒಳ ಹರಿವು ಕೇವಲ 168 ಕ್ಯುಸೆಕ್ ಇದೆ. ನೀರಿಲ್ಲದೆ ಬರಿದಾಗಿರುವ ಜಲಾಶಯದಲ್ಲಿ ಸದಾ ನೀರಿನಲ್ಲಿ ಮುಳುಗಿರುತ್ತಿದ್ದ ಬಂಡೆಗಳ ದರ್ಶನವಾಗುತ್ತಿದೆ. ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಮಳೆಗಾಲದ ಈ ಸಮಯದಲ್ಲಿ ಜಲಾಶಯ ಬಹುತೇಕ ಭರ್ತಿಯಾಗಿ, ಜುಲೈನಲ್ಲಿ ಜಲಾಶಯ ಭರ್ತಿಯೊಂದಿಗೆ 5 ರಿಂದ 10 ಸಾವಿರ ಕ್ಯುಸೆಕ್ ನೀರು ಕೆಆರ್‌ಎಸ್‌ನತ್ತ ಹರಿದು ಹೋಗುತಿತ್ತು.
ಜಲಾಶಯದ ಕ್ರೆಸ್ಟ್ ಗೇಟಿನ ಮಟ್ಟಕ್ಕಿಂತಲೂ ನೀರು ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಈ ನೀರು ರೈತರಿಗಾಗಲೀ ಅಥವಾ ಸೋಮವಾರಪೇಟೆ ಪಟ್ಟಣಕ್ಕೆ ನೀರು ಪೂರೈಕೆ ಮಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
::: ಉಪಯುಕ್ತ ಜಲಾಶಯ :::
ಹಾರಂಗಿ ಜಲಾಶಯದ ನೀರನ್ನು ಕೊಡಗಿನ ಹೆಬ್ಬಾಲೆ, ಶಿರಂಗಾಲ, ತೊರೆನೂರು ವಿಭಾಗಗಳ ರೈತರಷ್ಟೆ ಬಳಕೆ ಮಾಡುತ್ತಾರೆ. ಉಳಿದಂತೆ ಹೆಚ್ಚಿನ ನೀರು ಎಡ ಮತ್ತು ಬಲದಂಡೆ ಕಾಲುವೆಗಳ ಮೂಲಕ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕು ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಗ್ರಾಮಿಣ ಭಾಗಗಳಲ್ಲಿ ಬಳಕೆಯಾಗುತ್ತದೆ. ಉತಮ್ತ ಮಳೆಯಾಗಿ ಹಾರಂಗಿ ಭರ್ತಿಯಾದರೆ ಕೊಡಗಿನವರಿಗಿಂತಲೂ ಹೊರ ಜಿಲ್ಲೆಯವರಿಗೇ ಹೆಚ್ಚು ಲಾಭ. ಆದ್ದರಿಂದ ಕೊಡಗಿನಲ್ಲಿ ಮಳೆಯಾಗಲಿ ಎಂದು ಅಕ್ಕಪಕ್ಕದ ಜಿಲ್ಲೆಯವರೂ ಬಯಸುತ್ತಾರೆ.
::: ಪ್ರವಾಸಿಗರಿಗೆ ನಿರಾಶೆ :::
ಪ್ರಕೃತಿದತ್ತವಾದ ಪ್ರವಾಸಿತಾಣಗಳಿಂದಲೇ ಪ್ರಸಿದ್ಧಿ ಪಡೆದಿರುವ ಕೊಡಗು ಮಾನ್ಸೂನ್ ಪ್ರವಾಸೋದ್ಯಮದ ಮೂಲಕವೂ ಖ್ಯಾತಿ ಗಳಿಸಿದೆ. ಮಳೆಗಾಲದಲ್ಲಿ ನದಿ ತೊರೆಗಳು, ಜಲಪಾತಗಳು ಮತ್ತು ಜಲಾಶಯಗಳು ತುಂಬಿ ಹರಿಯುವ ದೃಶ್ಯ ಮನಮೋಹಕವಾಗಿರುತ್ತದೆ. ಇದು ಪ್ರವಾಸಿಗರಿಗೆ ಹೆಚ್ಚು ಅಚ್ಚುಮೆಚ್ಚು, ಇದೇ ಕಾರಣಕ್ಕೆ ಜೂನ್ ತಿಂಗಳಿನಲ್ಲೂ ಪ್ರವಾಸಿಗರ ಸಂಖ್ಯೆ ಹೆಚ್ಚು ಇರುತ್ತದೆ. ಆದರೆ ಪ್ರಸ್ತುತ ವರ್ಷ ಮಳೆ ಕ್ಷೀಣಿಸಿರುವುದರಿಂದ ಪ್ರವಾಸಿತಾಣಗಳು ಕೂಡ ಸೊರಗಿದಂತ್ತಿದ್ದು, ಪ್ರವಾಸಿಗರು ನಿರಾಶೆಯಿಂದ ಮರಳುತ್ತಿದ್ದಾರೆ.

Share. Facebook Twitter Pinterest LinkedIn Tumblr Email WhatsApp
Previous Article*ಮನೆಯಂಗಳಕ್ಕೆ ಬಿದ್ದ ಮಂಗಳೂರು ಇನ್ನೋವ : ಸಿಂಕೋನ ಬಳಿ ಘಟನೆ*
Next Article *ವ್ಯಾಂಡಮ್ ಎಂಟರ್ ಪ್ರೈಸಸ್ ಲಕ್ಕಿ ಡ್ರಾ ಫಲಿತಾಂಶ*

Recommended: Website design development company services in Mangalore Forex Trading Teacher in India

Related Posts

*ಡೊನಾಲ್ಡ್ ಟ್ರಂಪ್ ಮೆಚ್ಚಿದ ಆ ‘ಒಂದು’ ನಿರ್ಧಾರ ಯಾವುದು? ಭಾರತಕ್ಕೆ ಸಿಗಲಿದೆ ಅತಿದೊಡ್ಡ ಆರ್ಥಿಕ ಲಾಭ!*

February 12, 2026

*ಜಾಹ್ನವಿ ಕಂದುಲಾ ಜೀವಕ್ಕೆ ‘ಬೆಲೆ’ ಕಟ್ಟಿದ ಅಮೆರಿಕಾ! ಸಿಯಾಟಲ್ ನಗರದಿಂದ ಬರಲಿದೆಯೇ ₹262 ಕೋಟಿ ಪರಿಹಾರ?*

February 12, 2026

*ಬಿಸಾಡಿದ ಬಾಟಲಿಗಳಿಂದ ಮತ್ತೆ ಗ್ಲಾಸಿಗೆ? ದೆಹಲಿ ಸ್ಟೇಡಿಯಂ ಸಿಬ್ಬಂದಿಯ ಈ ಕರ್ಮಕಾಂಡ ನೋಡಿ ನೀವೂ ವಾಕರಿಕೆ ಮಾಡ್ಕೊತೀರಾ!*

February 12, 2026

*ಜಾಹ್ನವಿ ಕಂದುಲಾ ಜೀವಕ್ಕೆ ‘ಬೆಲೆ’ ಕಟ್ಟಿದ ಅಮೆರಿಕಾ! ಸಿಯಾಟಲ್ ನಗರದಿಂದ ಬರಲಿದೆಯೇ ₹262 ಕೋಟಿ ಪರಿಹಾರ?*

February 12, 2026

ಸಿಯಾಟಲ್ (ಅಮೆರಿಕಾ): ಕಳೆದ ಎರಡು ವರ್ಷಗಳಿಂದ ಇಡೀ ಜಗತ್ತಿನ ಗಮನ ಸೆಳೆದಿದ್ದ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಅವರ ಸಾವಿನ…

*ಬಿಸಾಡಿದ ಬಾಟಲಿಗಳಿಂದ ಮತ್ತೆ ಗ್ಲಾಸಿಗೆ? ದೆಹಲಿ ಸ್ಟೇಡಿಯಂ ಸಿಬ್ಬಂದಿಯ ಈ ಕರ್ಮಕಾಂಡ ನೋಡಿ ನೀವೂ ವಾಕರಿಕೆ ಮಾಡ್ಕೊತೀರಾ!*

February 12, 2026

*ಚಿನ್ನಸ್ವಾಮಿಯಲ್ಲಿ ಮತ್ತೆ ಮೊಳಗಲಿದೆ RCB.. RCB.. ಸದ್ದು! ಸರ್ಕಾರದ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಹೇಗೆ? ಅಭಿಮಾನಿಗಳೇ ಈಗಲೇ ರೆಡಿಯಾಗಿ!*

February 12, 2026

*ಕರೆಂಟ್ ಬಿಲ್ ನೋಡಿ ಬೆಚ್ಚಿಬೀಳಬೇಡಿ! ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಗೆ ಕ್ಷಣಗಣನೆ; ಯಾರಿಗೆ ಎಷ್ಟು ಹೊರೆ?*

February 12, 2026

*ಶಾಲೆ ಪ್ರವಾಸಕ್ಕೆ ಟ್ರಕ್ ಬಳಕೆ: ಪೋಷಕರು ಫುಲ್ ಗರಂ! ಹೆಡ್‌ಮಾಸ್ಟರ್ ಅಮಾನತು ಹಿಂದಿನ ಅಸಲಿ ಕಥೆ ಇಲ್ಲಿದೆ*

February 12, 2026

*ಕೊಡಗಿಗೆ ಭೇಟಿ ನೀಡಿದ ಪೊಲೀಸ್ ಮಹಾ ನಿರೀಕ್ಷಕರು*

February 12, 2026

*ಕುಶಾಲನಗರದಲ್ಲಿ ಒಣ ಕಸ ಸಂಗ್ರಹ ಘಟಕ ಉದ್ಘಾಟನೆ*

February 12, 2026

*ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗಿದೆ : ಗುತ್ತಿಗೆದಾರರ ಸಂಘ ಗಂಭೀರ ಆರೋಪ*

February 12, 2026

*ಕೇಂದ್ರ ಸರಕಾರದ ವಿರುದ್ಧ ಮಡಿಕೇರಿಯಲ್ಲಿ ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ*

February 12, 2026

*ಮಾಂದಲ್ ಪಟ್ಟಿ; ಸಾರ್ವಜನಿಕರು ಮತ್ತು ಪ್ರವಾಸಿಗರ ಗಮನಕ್ಕೆ*

February 12, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.