ಮಡಿಕೇರಿ ಜೂ.29 : ಸೋಮವಾರಪೇಟೆಯ ಶ್ರೀ ಗಣಪತಿ ಬಟ್ಟೆ ಅಂಗಡಿ ಮಾಲೀಕ ಕುಮಾರ್ ಅವರು ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಟೀ ಶರ್ಟ್ ವಿತರಿಸಿದರು.
ಸುಮಾರು 75 ವಿದ್ಯಾರ್ಥಿಗಳಿಗೆ ಶಾಲೆ ಮುಖ್ಯ ಉಪಾಧ್ಯಾಯ ಸಿ.ಕೆ.ಶಿವಕುಮಾರ್ ಅವರಿಗೆ ಟೀ ಶರ್ಟ್ ಹಸ್ತಾಂತರಿಸಿದರು.
ಈ ಸಂದರ್ಭ ಜಿಲ್ಲಾಧ್ಯಕ್ಷರಾದ ಮಂಜುನಾಥ ಮತ್ತು ತಾಲೂಕ ಅಧ್ಯಕ್ಷ ಬಸವರಾಜ ಹಾಜರಿದ್ದು, ಕುಮಾರ್ ಅವರ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿಯೂ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು. ಕುಮಾರ್ ಅವರ ತಂದೆ ಸಾಕ್ಷಿಭೂತರಾದರು.







