Advertisement
4:54 PM Sunday 3-December 2023

*ಫೋರ್ ಸ್ಟಾರ್ ಎಡಪಲ ತಂಡಕ್ಕೆ ದುಬಾಯಿ ವಾಲಿಬಾಲ್ ಕಪ್*

30/06/2023

ಕಡಂಗ ಜೂ.30 :  ಮೀತಲ್ತಂಡ ಅಕ್ಬರ್ ಅವರು ದುಬಾಯಿಯಲ್ಲಿರುವ ಕೊಡಗಿನ ಕ್ರೀಡಾಪಟುಗಳಿಗಾಗಿ ಆಯೋಜಿಸಿರುವ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಫೋರ್ ಸ್ಟಾಲ್ ಎಡಪಲ ತಂಡವು ಬಲಿಷ್ಠ ಆರ್ ವೈ ಸಿ ಎಮ್ಮೆಮಾಡು ತಂಡವನ್ನು ಮಣಿಸುವುದರ ಮೂಲಕ ದುಬಾಯಿ ವಾಲಿಬಾಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಇದಕ್ಕೂ ಮುನ್ನ ನಡೆದ ಪ್ರಥಮ ಸೆಮಿಫೈನಲ್ ಪಂದ್ಯದಲ್ಲಿ ಫೋರ್ ಎಡಪಲ ತಂಡವು ಬಲಿಷ್ಠ ಗುಂಡಿಕೆರೆ ತಂಡವನ್ನು ಮಣಿಸಿ ಪೈನಲ್ ಹಂತ ಪ್ರವೇಶಿಸಿದರೆ ಆರ್ ವೈ ಸಿ ಎಮ್ಮೆಮಾಡು. ತಂಡವು ಹೊದವಾಡ ತಂಡವನ್ನು ಮಣಿಸಿ ಫೈನಲ್ ಗೆ ಪ್ರವೇಶಿಸಿದವು.

ಉತ್ತಮ ಹೊಡೆತಗಾರ ಪ್ರಶಸ್ತಿಯನ್ನು ಎಡಪಲ ತಂಡದ ಯಹ್ಯಾ ಅವರು ಪಡೆದರೆ ಆಲ್ ರೌಂಡರಾಗಿ ಎಮ್ಮೆಮಾಡುವಿನ ಆಶಿಕ್  ಆಯ್ಕೆಯಾದರು.

ಪಂದ್ಯಾವಳಿಯಲ್ಲಿ ಕೊಡಗು ಸುನ್ನಿ ವೆಲ್ಪೇರ್ ಅಸೋಶಿಯೇಷನ್ ಸಾರಥಿಗಳಾದ ರಿಯಾಝ್ ಕೊಂಡಂಗೇರಿ, ಹಂಝ ಪೊನ್ನಂಪೇಟೆ, ಸಲೀಂ ಗುಂಡಿಕೆರೆ, ಹಮೀದ್ ಚಾಮಿಯಾಲ, ಹಸನ್ ಹಾಜಿ ಚಾಮಿಯಾಲ, ಹಾಗೂ ಟ್ರೋಪಿ ಧಾನಿಗಳಾದ ಮಾರ್ಷಲ್ ಪಿಟ್ನೆಸ್ ನೌಶಾದ್ ಕೊಂಡಂಗೇರಿ ,ಜೀಮೇಕ್ ಗಪೂರ್ ಎಮ್ಮೆಮಾಡು,ಮಿಡೆಕ್ಸ್ ಹಮೀದ್ ಚಾಮಿಯಾಲ, ಮುತಾದವರು ಹಾಜರಿದ್ದರು.
ವೀಕ್ಷಣೆ ವಿವರಣೆಗಾರರಾಗಿ ಮೀತಲ್ತಂಡ ಅಕ್ಬರ್  ಕಾರ್ಯನಿರ್ವಹಿಸಿದರು.

ಎಡಪಲ ಲತೀಪ್  ಜೀಹೋ ಲೈವ್ ನೀಡುವುದರ ಮೂಲಕ ಸಹಕರಿಸಿದರು.

ವರದಿ : ನೌಫಲ್ ಕಡಂಗ