ಮಡಿಕೇರಿ ಆ.15 : ಮಡಿಕೇರಿ ಆಕಾಶವಾಣಿ ಕೇಂದ್ರದಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ನಿಲಯದ ಸಹಾಯಕ ಇಂಜಿನಿಯರ್ ಆರ್.ಶ್ರೀನಿವಾಸನ್ ಧ್ವಜಾರೋಹಣ ನೆರವೇರಿಸಿ, ದಿನದ ಮಹತ್ವದ ಕುರಿತು ತಿಳಿಸಿದರು.
ನಮ್ಮ ದೇಶದ ಹಲವಾರು ಮಹಾನ್ ನಾಯಕರ ಅವಿರತ ಹೋರಾಟದ ಫಲವಾಗಿ ಬ್ರಿಟಿಷರಿಂದ ಸ್ವಾತಂತ್ರ್ಯ ಗಳಿಸಿದ್ದೇವೆ. ಇಂದು ಭಾರತ ‘ಮಹಾ ಭಾರತ’ವಾಗಿ ಬೆಳೆದಿದೆ. ಪ್ರತಿಯೊಬ್ಬರೂ ಶ್ರದ್ಧೆ ಹಾಗೂ ದೇಶಭಕ್ತಿಯಿಂದ ಕರ್ತವ್ಯ ನಿರ್ವಹಿಸಿದರೆ ಅದುವೇ ನಮ್ಮ ದೇಶಕ್ಕೆ ನಾವು ಸಲ್ಲಿಸುವ ನಿಜವಾದ ಕೊಡುಗೆ ಎಂದು ಅಭಿಪ್ರಾಯಪಟ್ಟರು.
ನಿಲಯದ ಕಾರ್ಯಕ್ರಮ ಮುಖ್ಯಸ್ಥ ಪಿ.ಎಂ.ಜಗದೀಶ್, ಹಿರಿಯ ಉದ್ಘೋಷಕ ಸುಬ್ರಾಯ ಸಂಪಾಜೆ, ತಾಂತ್ರಿಕ ವಿಭಾಗದ ಅಸಿಸ್ಟೆಂಟ್ ಇಂಜಿನಿಯರ್ ಪಿ.ಆನಂದನ್, ತಾಂತ್ರಿಕ ವಿಭಾಗದ ಇ.ಶಿವಾನಂದ ಸ್ವಾಮಿ, ಲೆಕ್ಕಾಧಿಕಾರಿ ಹೆಚ್.ವೈ.ನಾರಾಯಣ, ಗ್ರಂಥಪಾಲಕ ಪಂಕಜ್ ಕುಡ್ತರ್ಕರ್ ಹಾಗೂ ಮತ್ತಿತರ ಸಿಬ್ಬಂದಿಗಳು ಹಾಜರಿದ್ದರು.







