ಮಡಿಕೇರಿ ಆ.15 : ದಾರುಲ್ ಹುದಾ ಅರಬ್ಬಿ ಮದ್ರಸದಲ್ಲಿ 77ನೇ ಸ್ವಾತಂತ್ರ್ಯ ದಿನಾಚಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಅಧ್ಯಾಪಕರಾದ ಮಹಮೂದ್ ಸಅದಿ ವಿಶೇಷ ಪ್ರಾರ್ಥನೆ ಮಾಡಿ, ಧ್ವಜಾರೋಹಣ ನೆರವೇರಿಸಿದರು.
ಪ್ರಾಸ್ತಾವಿಕ ಮಾತನಾಡಿದ ದಾರುಲ್ ಹುದಾ ಅರಬ್ಬಿ ಮದ್ರಸ ಸಮಿತಿಯ ಅಧ್ಯಕ್ಷ ಎಂ.ಎಂ.ಯಾಕುಬ್ ಭಾರತ ಸ್ವಾತಂತ್ರ್ಯ ಚಳವಳಿಯ ಬಗ್ಗೆ ವಿವರಿಸಿದರು.
ಭಾರತೀಯ ಸ್ವಾತಂತ್ರ್ಯ ಚಳುವಳಿಯು ಐತಿಹಾಸಿಕ ಘಟನೆಗಳ ಸರಣಿಯಾಗಿದ್ದು, 1857 ರಿಂದ 1947 ರವರೆಗೆ ಸ್ವಾತಂತ್ರ್ಯ ಹೋರಾಟ ನಡೆಯಿತು. 1918 ರಿಂದ 1922 ಗಡುವಿನ ಅವಧಿಯಲ್ಲಿ ಮೋಹನದಾಸ ಗಾಂಧಿಯವರ ನೇತೃತ್ವದಲ್ಲಿ ಅಹಿಂಸಾತ್ಮಕವಾದ ಅಸಹಕಾರ ಚಳುವಳಿಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾರಂಭಿಸಿದೊಡನೆ ಸ್ವತಂತ್ರ್ಯ ಸಂಗ್ರಾಮಕ್ಕೆ ಮಹತ್ವದ ದಿಕ್ಕು ದೊರೆಯಿತು.
ಗಾಂಧಿಜೀ ಅವರ ನೇತೃತ್ವದಲ್ಲಿ ಅಸಹಾರ ಚಳುವಳಿ, ಉಪ್ಪಿನ ಸತ್ಯಾಗ್ರಹ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಚಳವಳಿಯ ಮೂಲಕ ಭಾರತದ ಪ್ರಜೆಗಳು ಒಗ್ಗೂಡಿ ಹೋರಾಟ ನಡೆಸಿದ ದಿನಗಳನ್ನು ನೆನಪಿಸಿ ಎಲ್ಲಾ ಹೋರಾಟಗಾರರಿಗೂ ಗೌರವ ಸಲ್ಲಿಸಿದರು.
ಈ ಸಂದರ್ಭ ಗೌರವಾಧ್ಯಕ್ಷ ಎಂ.ಡಿ.ಸಲೀಂ, ಕಾರ್ಯದರ್ಶಿ ಮೊಹಮ್ಮದ್ ಗೌಸ್, ಯುವ ಸಮಿತಿ ಅಧ್ಯಕ್ಷ ಸುಹೈಲ್, ಸದಸ್ಯರಾದ ಜಲೀಲ್, ಶಬೀರ್ ಹಾಗೂ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಿವಾಸಿಗಳು ಹಾಜರಿದ್ದರು.








