ಮಡಿಕೇರಿ ಆ.15 : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಮಿಕ ಘಟಕದ ವತಿಯಿಂದ ನಗರದ ಡೈರಿಫಾರಂ ಅಂಗನವಾಡಿಯಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಕೆ.ಆರ್.ದಿನೇಶ್ ಹಾಗೂ ಉಪಾಧ್ಯಕ್ಷ ಶಶಿ ಅವರುಗಳು ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಕೆ.ಆರ್.ದಿನೇಶ್, ವಿದ್ಯಾರ್ಥಿಗಳಲ್ಲಿ ಮಹಾತ್ಮಗಾಂಧಿ, ಸುಭಾಷ್ ಚಂದ್ರ ಬೋಸ್ ಅವರಂತಹ ಮಹಾತ್ಮರ ಬಗ್ಗೆ ಅರಿವು ಮೂಡಿಸಬೇಕು. ಆ ಮೂಲಕ ದೇಶಪ್ರೇಮ ಬೆಳೆಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭ ಘಟಕದ ಜಿಲ್ಲಾ ಉಪಾಧ್ಯಕ್ಷ ಕವನ್ ಕೊತ್ತೋಳಿ, ಪ್ರಧಾನ ಕಾರ್ಯದರ್ಶಿ ಕೆ.ಶರಣ್, ಕಾರ್ಯದರ್ಶಿ ಅರ್ಜುನ್, ನಗರಾಧ್ಯಕ್ಷ ನಿರಂಜನ್, ಉಪಾಧ್ಯಕ್ಷ ಫಯಾಜ್, ಸದಸ್ಯರಾದ ಪ್ರೇಮ, ಉದಯ ಚಂದ್ರಿಕ, ಅನು, ಬೇಬಿ, ವೀರನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಹರೀಶ್ ಆಚಾರ್ಯ, ಅಗ್ನಿ ಶಾಮಕ ದಳದ ಠಾಣಾಧಿಕಾರಿ ನಾಗರಾಜು, ಸಿಬ್ಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತೆ ನಾಗರತ್ನ, ಸಹಾಯಕಿ ಚಂದನ, ಪುಟಾಣಿಗಳು, ಪೋಷಕರು ಸೇರಿದಂತೆ ಸ್ಥಳೀಯ ನಿವಾಸಿಗಳು ಹಾಜರಿದ್ದು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.









