Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *2030ಕ್ಕೆ ಭಾರತವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿ: ಕೊಡಗಿಗೆ ಕೇಂದ್ರ ತನಿಖಾ ತಂಡ ಭೇಟಿ*
  • *ಶ್ರೀಮಂಗಲ-ನಾಲ್ಕೇರಿ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ*
  • *ಮಾಸ್ಟರ್ಸ್ ಅಥ್ಲೆಟಿಕ್ಸ್ ಮೀಟ್ 2026ರಲ್ಲಿ ಕೊಡಗಿನ ಕ್ರೀಡಾಪಟುಗಳ ಮಿಂಚಿನ ಸಾಧನೆ*
  • *ಮಹಿಳಾ ಸ್ವಾವಲಂಬನೆಗೆ ‘ಆತ್ಮ’ ಯೋಜನೆ ಆಸರೆ: ನಾಪೋಕ್ಲು ಮಹಿಳಾ ಸಮಾಜದಿಂದ ಅಣಬೆ ಕಟಾವು*
  • *36 ವರ್ಷ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆ ದೇವಮಾಜಿ, ಶಿಕ್ಷಕಿ ಭೋಜಮ್ಮಗೆ ಆತ್ಮೀಯ ಬೀಳ್ಕೊಡುಗೆ*
  • *ವಿರಾಜಪೇಟೆ : ಗಣೇಶ ವಿಸರ್ಜನೆ ಶೋಭಾಯಾತ್ರೆ ಸಂದರ್ಭ ವಿದ್ಯುತ್ ಅವಘಡ : ಐವರಿಗೆ ಗಾಯ : ಇಬ್ಬರ ಸ್ಥಿತಿ ಗಂಭೀರ*
  • *ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕೊಡಗಿನಲ್ಲಿ ಜನಜಾಗೃತಿ : 50 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಹನ ಜಾಥಾ*
  • *ಪ್ರತಾಪ್ ಸಿಂಹ ಹೇಳಿಕೆ ವಿರುದ್ಧ ಮಡಿಕೇರಿಯಲ್ಲಿ ಪ್ರತಿಭಟನೆ*
  • *ಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ : ಮಡಿಕೇರಿಯಲ್ಲಿ ಪ್ರತಿಭಟನೆ*
  • *ಕಡಿಯತನಾಡ್‌ನ ಕುರಿತು ಬೃಹತ್ ಅಧ್ಯಯನ ಕೃತಿ ಬಿಡುಗಡೆ : ಮೊದಲ ಬಾರಿಗೆ ನಾಡಿನ ಸಮಗ್ರ ಅಧ್ಯಯನ : ಬೆಂಗಳೂರಿನಲ್ಲಿ ಸೆ.27 ರಂದು ಲೋಕಾರ್ಪಣೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಒಂದೇ ವೇದಿಕೆಯಡಿ ಅರ್ಥಪೂರ್ಣವಾಗಿ ಸ್ವಾತಂತ್ರ್ಯೋತ್ಸವ ಆಚರಣೆಯಾಗಲಿ : ಚಮ್ಮಟೀರ ಪ್ರವೀಣ್ ಉತ್ತಪ್ಪ ಕರೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಒಂದೇ ವೇದಿಕೆಯಡಿ ಅರ್ಥಪೂರ್ಣವಾಗಿ ಸ್ವಾತಂತ್ರ್ಯೋತ್ಸವ ಆಚರಣೆಯಾಗಲಿ : ಚಮ್ಮಟೀರ ಪ್ರವೀಣ್ ಉತ್ತಪ್ಪ ಕರೆ*

ಆಗಷ್ಟ್ 16, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
ಮಡಿಕೇರಿ ಆ.16 : ಪೊನ್ನಂಪೇಟೆ ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜುಗಳು ಒಂದೇ ವೇದಿಕೆಯಡಿ ಅರ್ಥಪೂರ್ಣವಾಗಿ ಸ್ವಾತಂತ್ರ್ಯೋತ್ಸವ ಆಚರಣೆ ಮಾಡುವಂತೆ ಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಕರೆ ನೀಡಿದರು.
ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು “ನಿನಾದ” ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು,  ಜಿಲ್ಲೆಯ ಆಯಾಯ ತಾಲೂಕಿನ ಶಾಲಾ ಕಾಲೇಜುಗಳು ಒಂದೇ ವೇದಿಕೆಯಡಿಯಲ್ಲಿ ಸೇರಿ ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ವಿವಿಧ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವಂತಾಗಬೇಕು, ಇದರಿಂದ ವಿದ್ಯಾರ್ಥಿಗಳ ಪ್ರತಿಭೆಯನ್ನು ಇತರರಿಗೂ ಪಸರಿಸಲು ಸಹಕಾರಿಯಾಗುತ್ತದೆ ಹಾಗೂ ಸ್ವಾತಂತ್ರ್ಯ ದಿನಾಚರಣೆಗೂ ಒಂದು ಅರ್ಥ ಬರುತ್ತದೆ ಎಂದರು.
ಪೊನ್ನಂಪೇಟೆ ತಾಲೂಕಿನಲ್ಲಿರುವ ಶಾಲಾ ಕಾಲೇಜುಗಳು ಬೇರೆ ಬೇರೆ ಕಾರ್ಯಕ್ರಮ ಮಾಡುವ ಬದಲು ತಾಲೂಕು ಆಡಳಿತದ ಸಹಕಾರದಲ್ಲಿ ಒಂದೇ ವೇದಿಕೆಯಡಿಯಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸುವ ಮೂಲಕ ಅದ್ದೂರಿಯ ಹಾಗೂ ಅರ್ಥಪೂರ್ಣ ಕಾರ್ಯಕ್ರಮ ನೀಡಬೇಕಿದೆ ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ನಮ್ಮ ಸ್ಥಳೀಯ ಜನಪ್ರತಿನಿಧಿಗಳು ಗಮನಹರಿಸಬೇಕಿದೆ ಎಂದರು.
ಹಿರಿಯರು ತಂದುಕೊಟ್ಟ ಸ್ವಾತಂತ್ರ್ಯವನ್ನು ನಾವು ದುರ್ಬಳಕೆ ಮಾಡಿಕೊಳ್ಳದೆ ಸಮಾಜ ನಮಗೇನು ನೀಡಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನೂ ನೀಡುತ್ತಿದ್ದೇವೆ ಎಂದು ಯೋಚಿಸಿ ಹೆಜ್ಜೆ ಹಾಕಬೇಕಿದೆ. ವಿಧ್ಯಾರ್ಥಿಗಳಿಗೆ ದೇಶದ ವಿವಿಧ ಸ್ವಾತಂತ್ರ್ಯ ಹೋರಾಟಗಾರರ ಪರಿಚಯದ ಜೊತೆ ಜೊತೆಗೆ ಆಯಾಯ ಪ್ರದೇಶದ ಸ್ಥಳೀಯ ಹೋರಾಟಗಾರರ ಪರಿಚಯ ಮಾಡಿಕೊಡಬೇಕಾಗಿದೆ, ಕೊಡಗಿನಲ್ಲಿ ಸ್ವಾತಂತ್ರ್ಯ ಕಿಚ್ಚನ್ನು ಹಚ್ಚಿದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಇದ್ದರು ಆದರೆ ಇವರು ಯಾರು ರಾಷ್ಟ್ರ ಮಟ್ಟದಲ್ಲಿ ದಾಖಲೆಯಾಗಿ ಉಳಿಯಲಿಲ್ಲ. ಮಡಿಕೇರಿ ಕೋಟೆ ಆವರಣದಲ್ಲಿ ಹಾರಾಡುತ್ತಿದ್ದ ಬ್ರಿಟಿಷ್ ಧ್ವಜವನ್ನು ಕಿತ್ತೆಸೆದು ನಮ್ಮ ದೇಶದ ತ್ರಿವರ್ಣ ಧ್ವಜವನ್ನು ಹಾರಿಸಿದ ಕೀರ್ತಿ ಸ್ವಾತಂತ್ರ್ಯ ವೀರ ಮಲ್ಲೇಂಗಡ ಚೆಂಗಪ್ಪ ಮತ್ತು ಸಂಗಡಿಗರಿಗೆ ಸೇರುತ್ತದೆ. ಅಂದು ನ್ಯಾಯಾಧೀಶರ ಕುರ್ಚಿಯಲ್ಲಿಯೇ ಕುಳಿತು ನ್ಯಾಯಾಧೀಶರ ವಿರುದ್ಧವಾಗಿಯೇ ತೀರ್ಪನ್ನು ನೀಡಿದವರು ಮಲ್ಲೇಂಗಡ ಚೆಂಗಪ್ಪನವರು. ಇವರ ಸಾಹಸದ ಕಥೆಗಳು ಒಂದೇ ಎರಡೇ, ಕಲ್ಪನೆಗೆ ಸಿಗದಷ್ಟು ಸಾಹಸಗಳನ್ನು ಹೋರಾಟಗಳನ್ನು ಮಾಡಿದ್ದಾರೆ. ಹಾಗೇ ಹುಬ್ಬಳ್ಳಿ ಹುಲಿ ಎಂದು ಕರೆಸಿಕೊಳ್ಳುತ್ತಿದ್ದ ಚಕ್ಕೇರ ಮೊಣ್ಣಯ್ಯನವರ ಹೆಸರು ಕೇಳಿದರೆ ಬ್ರಿಟಿಷರಿಗೆ ನಡುಕ ಪ್ರಾರಂಭವಾಗುತಿತ್ತು, ಇವರ ಹೋರಾಟದ ಕಿಚ್ಚನ್ನು ಅರಿತ ಅಂದಿನ ಬ್ರಿಟಿಷ್ ಸರ್ಕಾರ ಇವರಿಗೆ ತಮಿಳುನಾಡಿನ ಸೇಲಂ ಕಾರ್ಖಾನೆಯಲ್ಲಿ 90ರೂಪಾಯಿಗೆ ಉನ್ನತ ಹುದ್ದೆಯನ್ನು ನೀಡಿದ್ದರೂ ಅಂದು ಒಬ್ಬ ಸ್ಕೂಲ್ ಹೆಡ್ ಮಾಸ್ಟರ್’ಗೆ ಕೇವಲ 18 ರೂಪಾಯಿ ಸಂಬಳವಿತ್ತು ಆದರೆ 90 ರೂಪಾಯಿ ದುಬಾರಿ ವೇತನವನ್ನು ತಿರಸ್ಕರಿಸಿ ಹೋರಾಟಕ್ಕೆ ಧುಮುಕಿದವರು ಚಕ್ಕೇರ ಮೊಣ್ಣಯ್ಯ, ಇದರಿಂದಲೇ ಅವರನ್ನು ಸುಧೀರ್ಘ ಅವಧಿಯವರೆಗೆ ಗಡಿಪಾರು ಮಾಡಿದ್ದರು ಕೂಡ ಮಾರುವೇಷದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮೊಣ್ಣಯ್ಯನವರ ಸಾಹಸವನ್ನು ಮೆಚ್ಚಿ ಹುಬ್ಬಳಿಯ ಜನರೇ ಹುಬ್ಬಳ್ಳಿ ಹುಲಿ ಎಂದು ಕರೆದರು ಆದರೆ ಇದ್ಯಾವುದೂ ಪಠ್ಯದಲ್ಲಿ ದಾಖಲಾಗಲಿಲ್ಲ. ಇನ್ನೂ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಸ್ವಾತಂತ್ರ್ಯದ ಕಿಚ್ಚನ್ನು ಮೈಗೂಡಿಸಿಕೊಂಡ ಕೊಳೇರ ಕಾವೇರಿಯ ಬಲಿದಾನ ಜಿಲ್ಲೆಯ ಮೊದಲ ಬಲಿದಾನ ಎಂದರೆ ತಪ್ಪಲ್ಲ. ಇಂತಹ ಅನೇಕ ಸ್ವಾತಂತ್ರ್ಯ ಹೋರಾಟಗಾರರು ನಮ್ಮ ಕಣ್ಣಿನ ಮುಂದೆ ಇದ್ದು ಹೋದರು ಅವರ ಹೆಸರು ಕೇವಲ ಕೆಲವೇ ಮಂದಿಯ ಬಾಯಿಯಲ್ಲಿ ಹಾಗೂ ಜನಾಂಗಕ್ಕೆ ಸೀಮಿತವಾಯಿತು ಹೊರತು ದಾಖಲೆಯಾಗಿ ಉಳಿಯಲಿಲ್ಲ.
 ಕೊಡಗಿನಲ್ಲಿ ಸ್ವಾತಂತ್ರ್ಯದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪದ್ಯಂಡ ಬೆಳ್ಳಿಯಪ್ಪ, ಕೊಳ್ಳಿಮಾಡ ಕರುಂಬಯ್ಯ, ಮಂಡೇಪಂಡ ಕಾರ್ಯಪ್ಪ, ಪಡೆಬೀರ ಮಾತಂಡ ಅಪ್ಪಚ್ಚು, ಅಬ್ದುಲ್ ಗಫರ್ ಖಾನ್, ಎಂ.ಎಂ ಸಿದ್ದಿಕ್, ಪಾರುವಂಗಡ ಕುಶಾಲಪ್ಪ, ಪುತ್ತಮನೆ ಗಣಪಮಯ್ಯ, ಮಂಡೀರ ಉತ್ತಯ್ಯ ಹೀಗೆ ಹೆಸರು ಹೇಳುತ್ತಾ ಹೋದರೆ ಕೊಡಗಿನಲ್ಲಿ ಸ್ವಾತಂತ್ರ್ಯದ ಕಿಚ್ಚು ಹೆಚ್ಚಾಗಿಯೇ ಇತ್ತು ಎಂದರೆ ತಪ್ಪಲ್ಲ. ಆದರೆ ಇದು ಒಂದು ಜನಾಂಗಕ್ಕೆ ಹಾಗೂ ಒಂದು ಪ್ರದೇಶಕ್ಕೆ ಸೀಮಿತವಾಯಿತು ಹೊರತು ವಿದ್ಯಾರ್ಥಿಗಳಿಗೆ ಸೇರಿದಂತೆ ಇತರರಿಗೆ ಪರಿಚಯ ಮಾಡುವ ಕೆಲಸವಾಗಲಿಲ್ಲ. ಇನ್ನಾದರೂ ಈ ನಿಟ್ಟಿನಲ್ಲಿ ಜಿಲ್ಲೆಯ ಶಾಲಾ ಕಾಲೇಜುಗಳು ಸ್ಥಳೀಯ ಹೊರಾಟಗಾರರ ಪರಿಚಯ ಮಾಡಿಕೊಡುವ ಮೂಲಕ ಅವರಿಗೆ ಗೌರವ ನೀಡಬೇಕಿದೆ ಹಾಗೂ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೂಡಿಸಬೇಕಿದೆ ಎಂದು ಚಮ್ಮಟೀರ ಪ್ರವೀಣ್ ಉತ್ತಪ್ಪ ಹೇಳಿದ್ದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನಿನಾದ ಶಾಲೆಯ ಆಡಳಿತಾಧಿಕಾರಿ ನಾಗೇಶ್ ಹಾಗೂ ಪ್ರಾಂಶುಪಾಲರಾದ ಅಮ್ಮತೀರ ಶಿಲ್ಪ ದೀಪಕ್ ಮಾತನಾಡಿದ್ದರು, ಶಿಕ್ಷಕಿ ಮತ್ರಂಡ ನೇತ್ರಾ ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕಿ ದೀಪಿಕಾ ವಂದಿಸಿದ್ದರು. ಧ್ವಜಾರೋಹಣ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ದೆಶಭಕ್ತಿ ಗೀತೆ ಸೇರಿದಂತೆ ದೇಶಭಕ್ತಿಯ ವಿವಿಧ ಕಾರ್ಯಕ್ರಮಗಳು, ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಷ ಗಮನ ಸೆಳೆಯಿತು.
Follow us Follow us
Share. WhatsApp Facebook Twitter Email Telegram Copy Link

Related Posts

*2030ಕ್ಕೆ ಭಾರತವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿ: ಕೊಡಗಿಗೆ ಕೇಂದ್ರ ತನಿಖಾ ತಂಡ ಭೇಟಿ*

ಸೆಪ್ಟೆಂಬರ್ 26, 2026

*ಶ್ರೀಮಂಗಲ-ನಾಲ್ಕೇರಿ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ*

ಸೆಪ್ಟೆಂಬರ್ 26, 2026

*ಮಾಸ್ಟರ್ಸ್ ಅಥ್ಲೆಟಿಕ್ಸ್ ಮೀಟ್ 2026ರಲ್ಲಿ ಕೊಡಗಿನ ಕ್ರೀಡಾಪಟುಗಳ ಮಿಂಚಿನ ಸಾಧನೆ*

ಸೆಪ್ಟೆಂಬರ್ 26, 2026

*ಶ್ರೀಮಂಗಲ-ನಾಲ್ಕೇರಿ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ*

ಸೆಪ್ಟೆಂಬರ್ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಪೊನ್ನಂಪೇಟೆ, NEWS DESK ಸೆ.26: ತಾಲೂಕಿನ ಶ್ರೀಮಂಗಲ-ನಾಲ್ಕೇರಿ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಗೆ ₹1 ಕೋಟಿ ವೆಚ್ಚದ ಕಾಮಗಾರಿಗೆ ವಿರಾಜಪೇಟೆ ವಿಧಾನಸಭಾ…

*ಮಾಸ್ಟರ್ಸ್ ಅಥ್ಲೆಟಿಕ್ಸ್ ಮೀಟ್ 2026ರಲ್ಲಿ ಕೊಡಗಿನ ಕ್ರೀಡಾಪಟುಗಳ ಮಿಂಚಿನ ಸಾಧನೆ*

ಸೆಪ್ಟೆಂಬರ್ 26, 2026

*ಮಹಿಳಾ ಸ್ವಾವಲಂಬನೆಗೆ ‘ಆತ್ಮ’ ಯೋಜನೆ ಆಸರೆ: ನಾಪೋಕ್ಲು ಮಹಿಳಾ ಸಮಾಜದಿಂದ ಅಣಬೆ ಕಟಾವು*

ಸೆಪ್ಟೆಂಬರ್ 26, 2026

*36 ವರ್ಷ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆ ದೇವಮಾಜಿ, ಶಿಕ್ಷಕಿ ಭೋಜಮ್ಮಗೆ ಆತ್ಮೀಯ ಬೀಳ್ಕೊಡುಗೆ*

ಸೆಪ್ಟೆಂಬರ್ 26, 2026

*ವಿರಾಜಪೇಟೆ : ಗಣೇಶ ವಿಸರ್ಜನೆ ಶೋಭಾಯಾತ್ರೆ ಸಂದರ್ಭ ವಿದ್ಯುತ್ ಅವಘಡ : ಐವರಿಗೆ ಗಾಯ : ಇಬ್ಬರ ಸ್ಥಿತಿ ಗಂಭೀರ*

ಸೆಪ್ಟೆಂಬರ್ 26, 2026

*ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕೊಡಗಿನಲ್ಲಿ ಜನಜಾಗೃತಿ : 50 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಹನ ಜಾಥಾ*

ಸೆಪ್ಟೆಂಬರ್ 25, 2026

*ಪ್ರತಾಪ್ ಸಿಂಹ ಹೇಳಿಕೆ ವಿರುದ್ಧ ಮಡಿಕೇರಿಯಲ್ಲಿ ಪ್ರತಿಭಟನೆ*

ಸೆಪ್ಟೆಂಬರ್ 25, 2026

*ಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ : ಮಡಿಕೇರಿಯಲ್ಲಿ ಪ್ರತಿಭಟನೆ*

ಸೆಪ್ಟೆಂಬರ್ 25, 2026

*ಕಡಿಯತನಾಡ್‌ನ ಕುರಿತು ಬೃಹತ್ ಅಧ್ಯಯನ ಕೃತಿ ಬಿಡುಗಡೆ : ಮೊದಲ ಬಾರಿಗೆ ನಾಡಿನ ಸಮಗ್ರ ಅಧ್ಯಯನ : ಬೆಂಗಳೂರಿನಲ್ಲಿ ಸೆ.27 ರಂದು ಲೋಕಾರ್ಪಣೆ*

ಸೆಪ್ಟೆಂಬರ್ 25, 2026

*ಸೆ.27ರಂದು ಸ್ವಚ್ಛತಾ ಕಾರ್ಯಕ್ರಮ*

ಸೆಪ್ಟೆಂಬರ್ 25, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.