ಕುಂಜಿಲ ಆ.16 : ಕುಂಜಿಲ ಕಕ್ಕಬ್ಬೆ ಸಮೀಪದ ವಯಕೋಲ್ ರೌಳತುಲ್ ಉಲೂಂ ಮದ್ರಸದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಯಕೋಲ್ ಸಮಿತಿ ಅಧ್ಯಕ್ಷರಾದ ಅಹ್ಮದ್ ಹಾಜಿ ಅವರು ಧ್ವಜಾರೋಹಣದೊಂದೀಗೆ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಮದ್ರಸ ಅಧ್ಯಾಪಕರಾದ ರಫೀಖ್ ಸಖಾಫಿ ಪ್ರಾಸ್ತಾವಿಕವಾಗಿ ಭಾಷಣ ನೆರವೇರಿಸಿ ವಿದ್ಯಾರ್ಥಿಗಳು ನೈಜ ಜೀವನದಲ್ಲಿ ಶಾಂತಿ ಮತ್ತು ಶಿಸ್ತು ಕ್ರಮ ಬದ್ಧವಾಗಿ ಅಳವಡಿಸೂದರೊಂದೀಗೆ ದೇಶ ಪ್ರೇಮವನ್ನು ಸಾರುವವರಾಗಬೇಕೆಂಬ ಸಂದೇಶವನ್ನು ನೀಡಿದರು.
ಕಾರ್ಯಕ್ರಮದಲ್ಲಿ ವಯಕೋಲ್ ಸಮಿತಿ ಕಾರ್ಯದರ್ಶಿ ಅಬು, ಕೋಶಾಧಿಕಾರಿ ಉಸ್ಮಾನ್ ಸಮಿತಿ ಸದಸ್ಯರುಗಳು ಮದ್ರಸ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.









