ಮಡಿಕೇರಿ ಆ.16 : ಕುಶಾಲನಗರ ಮತ್ತು ಸುಂಟಿಕೊಪ್ಪ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ಆ.17 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಬೆಟ್ಟಗೇರಿ, ಹೊಸಪಟ್ಟಣ, ನಂಜರಾಯಪಟ್ಟಣ, ವಾಲ್ನೂರು ತ್ಯಾಗತೂರು, ಹೆಬ್ಬಾಲೆ, ಕಣಿವೆ, ಹಕ್ಕೆ, ತೊರೆನೂರು, ಶಿರಂಗಾಲ, ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ಹಾಗೂ ಮತ್ತಿಕಾಡು, ಗದ್ದೆಹಳ್ಳ, ಚೆಟ್ಟಳ್ಳಿ, ಪೊನ್ನತಮೊಟ್ಟೆ ಈರಳೆವಳಮುಡಿ, ಚೇರಳ ಶ್ರೀಮಂಗಲ, ಮಾದಾಪುರ, ಸಿಸಿಎಲ್ ಗರಗಂದೂರು, ಮಾದಾಪುರ, ಹರದೂರು ಗರ್ವಾಲೆ ಸೂರ್ಲಬಿ, ಹಟ್ಟಿಹೊಳ್ಳೆ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.







