ಮಡಿಕೇರಿ ಆ.21 : ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಹಬ್ಬ ಆಚರಣಾ ಸಮಿತಿ ವತಿಯಿಂದ ‘ರೀಲ್ಸ್’ ಸ್ಪರ್ಧೆ ಆಯೋಜಿಸಿತ್ತು. ಸಾರ್ವಜನಿಕರಿಗಾಗಿ ಆಯೋಜಿಸಿದ್ದ ರೀಲ್ಸ್ ಸ್ಪರ್ಧೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು.
ಕಾರ್ಕಳದ ಸೌರಭ್ ಪ್ರಥಮ ಸ್ಥಾನ ಪಡೆದುಕೊಂಡರು. ಉಡುಪಿಯ ಸಚಿನ್ ದ್ವಿತೀಯ, ವೀರಾಜಪೇಟೆಯ ವಿಷ್ಣು ತೃತೀಯ ಸ್ಥಾನ ಗಳಿಸಿಕೊಂಡರು. ಮಂಗಳೂರಿನ ಶಶಾಂಕ್ ಶೆಟ್ಟಿಗಾರ್, ಭಾಗಮಂಡಲದ ದೇವಿಪ್ರಸಾದ್, ಕುಶಾನಗರದ ಜಯಪ್ರಸಾದ್, ಸುಂಟಿಕೊಪ್ಪದ ಪ್ರಶಾಂತ್, ಮಡಿಕೇರಿಯ ಸುಹೇಬ್ ಸಮಾಧಾನಕರ ಬಹುಮಾನ ಪಡೆದುಕೊಂಡರೆ, ಮಾಯಮುಡಿಯ ದಿಶಾ ದೇಚಮ್ಮ, ಗೋಣಿಕೊಪ್ಪದ ಲಾಸ್ಯ, ತಾನ್ಯ, ವೀರಾಜಪೇಟೆಯ ದಿಂಶಾ ದೇಚಮ್ಮ ವಿಶೇಷ ಬಹುಮಾನ ತನ್ನದಾಗಿಸಿಕೊಂಡರು.
ಪತ್ರಕರ್ತರ ವಿಭಾಗದಲ್ಲಿ ವಿಶ್ವ ಕುಂಬೂರು ಬಹುಮಾನ ಪಡೆದುಕೊಂಡರು. ಐಮಂಡ ರೂಪೇಶ್ ನಾಣಯ್ಯ, ಬಲ್ಲಚಂಡ ಭಜನ್ ಬೋಪಣ್ಣ, ಹರ್ಷಿತ್ ತೀರ್ಪುಗಾರಿಕೆ ನೆರವೇರಿಸಿದರು. ಕಂಬೆಯoಡ ಪುಷ್ಪ ಹಾಗೂ ದೇವಯ್ಯ ಬಹುಮಾನ ಪ್ರಯೋಜಿಸಿದ್ದರು.






