ಮಡಿಕೇರಿ ಆ.23 : ಸ್ಯಾಂಡಲ್ ವುಡ್ ನಟ ಮಡಿಕೇರಿಯ ಉಳ್ಳಿಯಡ ಭುವನ್ ಪೊನ್ನಣ್ಣ ಮತ್ತು ನಟಿ ಅಮ್ಮತ್ತಿಯ ಉದ್ದಪಂಡ ಹರ್ಷಿಕಾ ಪೂಣಚ್ಚ ಅವರುಗಳು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ನಟ-ನಟಿಯ ವಿವಾಹ ಸಮಾರಂಭ ಅಮ್ಮತ್ತಿ ಕೊಡವ ಸಮಾಜದಲ್ಲಿ ನಡೆಯುತ್ತಿದ್ದು, ಕೊಡವ ಸಮಾಜವನ್ನು ಅದ್ದೂರಿಯಾಗಿ ಶೃಂಗರಿಸಲಾಗಿದೆ.
ಮಡಿಕೇರಿ ನಿವಾಸಿ ಬ್ರಹ್ಮಗಿರಿ ಕೊಡವ ವಾರ ಪತ್ರಿಕೆಯ ಸಂಪಾದಕರಾದ ಉಳ್ಳಿಯಡ ಪೂವಯ್ಯ ಮತ್ತು ಡಾಟಿ ದಂಪತಿಗಳ ಪುತ್ರರಾಗಿರುವ ಭುವನ್ ಪೊನ್ನಣ್ಣ, ಅಮ್ಮತ್ತಿ ನಿವಾಸಿ ಉದ್ದಪಂಡ ದಿ. ಪೂಣಚ್ಚ ಮತ್ತು ಶಾಂಭವಿ ದಂಪತಿಗಳ ಪುತ್ರಿ ಹರ್ಷಿಕಾ ಪೂಣಚ್ಚ ಅವರನ್ನು ವಿವಾಹವಾಗುತ್ತಿದ್ದಾರೆ. ಈ ದಂಪತಿಗಳ ವಿವಾಹಕ್ಕೆ ಸ್ಯಾಂಡಲ್ ವುಡ್ ತಾರೆಯರು ಸಾಕ್ಷಿಯಾಗಲಿದ್ದಾರೆ. ಕೊಡಗಿನ ಶ್ರೀಮಂತ ಪದ್ದತಿ, ಪರಂಪರೆ ಮತ್ತು ಕೊಡವ ಸಮುದಾಯದ ಸಂಪ್ರದಾಯದಂತೆ ಮಧುವೆ ಕಾರ್ಯ ಶಾಸ್ತ್ರೋಕ್ತ್ರವಾಗಿ ನಡೆಯಲಿದೆ.
ಅಂದಾಜು 3 ಸಾವಿರ ಮಂದಿ ಮಧುವೆಗೆ ಆಗಮಿಸಿ ವಧು ವರನಿಗೆ ಆಶೀರ್ವಾದಿಸಲಿದ್ದು, ಕೊಡಗಿನ ವಿಶೇಷ ಖಾದ್ಯಗಳನ್ನು ಮಧುವೆಗಾಗಿ ತಯಾರು ಮಾಡಲಾಗುತ್ತಿದೆ. ಮಡಿಕೇರಿಯ ಗಿರೀಶ್ ಮತ್ತವರ ತಂಡಕ್ಕೆ ಮಧುವೆಗೆ ಬೇಕಾದ ಉಪಹಾರ, ಮಧ್ಯಾಹ್ನದ ಊಟೋಪಚಾರ ಸಹಿತ ತಿಂಡಿ, ತಿನಿಸುಗಳ ಜವಾಬ್ದಾರಿ ವಹಿಸಲಾಗಿದೆ. ವಿವಿಧ ಬಗೆಯ ಮಾಂಸಹಾರಿ ಹಾಗೂ ಸಸ್ಯಹಾರಿ ಖಾದ್ಯಗಳ ತಯಾರಿಕೆಯಲ್ಲಿ ಬಾಣಸಿಗರು ತೊಡಗಿಕೊಂಡಿದ್ದಾರೆ.







