ಮಡಿಕೇರಿ ಆ.23 : ಕಾರ್ಯ ನಿರ್ವಾಹಕ ಎಂಜಿನಿಯರ್ (ವಿದ್ಯುತ್) ಕೊಡಗು ಬೃಹತ್ ಕಾಮಗಾರಿ ವಿಭಾಗ ಕೆಪಿಟಿಸಿಎಲ್ ಮೈಸೂರು ನಿಗಮದ ವತಿಯಿಂದ ನಡೆಸಲಾಗುವ 66 ಕೆ.ವಿ. ಮಡಿಕೇರಿ-ವಿರಾಜಪೇಟೆ ಸಂಪರ್ಕ ಮಾರ್ಗದಲ್ಲಿ ಬರುವ ಹಾಕತ್ತೂರು ಗ್ರಾಮದ ಟವರ್ ಸಂಖ್ಯೆ 115 ರಿಂದ 118 ರವರೆಗೆ ಸ.ನಂ. 112/2, 112/7, ಮತ್ತು 112/6, 112/4 ರ ರೈತರ ಜಮೀನುಗಳಲ್ಲಿ ಬರುವ 92 ವಿವಿಧ ಜಾತಿಯ ಮರಗಳನ್ನು ಇಲಾಖಾ ವತಿಯಿಂದ ಕಡಿದು ತೆರವುಗೊಳಿಸಲು ಕೋರಿರುತ್ತಾರೆ.
ಆದ್ದರಿಂದ ಸಾರ್ವಜನಿಕರು ಈ ಬಗ್ಗೆ ಯಾವುದೇ ಆಕ್ಷೇಪಣೆ ಇದ್ದಲ್ಲಿ ಆಗಸ್ಟ್ 28 ರೊಳಗೆ ಕಚೇರಿಗೆ ಸಲ್ಲಿಸಬೇಕಿದೆ. ಜೊತೆಗೆ ನಿಗಧಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಬಾರದಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.







