*ಗೋಣಿಕೊಪ್ಪಲು ದಸರಾ ಸಮಿತಿಯಿಂದ ಶಾಸಕ ಎ.ಎಸ್.ಪೊನ್ನಣ್ಣ ಗೆ ಸಾಂಪ್ರದಾಯಿಕ ಆಹ್ವಾನ*
30/09/2023

ಗೋಣಿಕೊಪ್ಪಲು ಸೆ.30 : ಗೋಣಿಕೊಪ್ಪಲು ದಸರಾ ಸಮಿತಿಯಿಂದ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರನ್ನು ಸಾಂಪ್ರದಾಯಿಕ ವಾಗಿ ಆಹ್ವಾನಿಸಲಾಯಿತು.
ದಸರಾ ಸಮಿತಿಯ ಅಧ್ಯಕ್ಷ ಪ್ರಮೋದ್ ಗಣಪತಿ ನೇತೃತ್ವದಲ್ಲಿ ಖಜಾಂಚಿ ಧ್ಯಾನ್ ಸುಬ್ಬಯ್ಯ, ಉಪಾಧ್ಯಕ್ಷ ಶಿವಾಜಿ, ಪ್ರಧಾನ ಕಾರ್ಯದರ್ಶಿ ಕಂದಾ ದೇವಯ್ಯ, ಸನತ್ ದೇವಯ್ಯ ಸೇರಿದಂತೆ ಪದಾಧಿಕಾರಿಗಳು ವಿರಾಜಪೇಟೆಯಲ್ಲಿರುವ ಶಾಸಕರ ಕಛೇರಿಯಲ್ಲಿ ಫಲತಾಂಬೂಲದೊಂದಿಗೆ ಸಾಂಪ್ರದಾಯಿಕವಾಗಿ ಆಹ್ವಾನಿಸಿದರು.
