*ಬಾಪೂಜಿ ಪ್ರಬಂಧ ಸ್ಪರ್ಧೆ : ವಿಜೇತರ ವಿವರ*

ಮಡಿಕೇರಿ ಸೆ.30 : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 154ನೇ ಜಯಂತಿ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ‘ಬಾಪೂಜಿ ಪ್ರಬಂಧ ಸ್ಪರ್ಧೆ’ ಆಯೋಜಿಸಲಾಗಿತ್ತು.
ಆ ದಿಸೆಯಲ್ಲಿ ಆಯಾಯ ಶಾಲಾ ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿ ಮೌಲ್ಯಮಾಪಕರಿಂದ ಜಿಲ್ಲಾ ಮಟ್ಟದಲ್ಲಿ ಮೌಲ್ಯಮಾಪನ ಮಾಡಲಾಗಿತ್ತು. ಆ ನಿಟ್ಟಿನಲ್ಲಿ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ/ಸ್ನಾತಕೋತ್ತರ ಈ ಮೂರು ವಿಭಾಗದಲ್ಲಿ ಆಯ್ಕೆಯಾದವರ ಪಟ್ಟಿ ಇಂತಿದೆ.
ಪ್ರೌಢಶಾಲಾ ವಿಭಾಗದಲ್ಲಿ ವಿರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯ 9ನೇ ತರಗತಿಯ ಅನಿರುದ್ಧ್ ಮನೋಜ್(ಪ್ರಥಮ), ಶನಿವಾರಸಂತೆಯ ಶ್ರೀ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆಯ 10ನೇ ತರಗತಿಯ ವಿನುತಾ ಎಸ್.ಪಿ.(ದ್ವಿತೀಯ), ಸೋಮವಾರಪೇಟೆಯ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯ 9ನೇ ತರಗತಿಯ ವಿನುತಾ ಡಿ.ಎಂ(ತೃತೀಯ) ಸ್ಥಾನ ಪಡೆದಿದ್ದಾರೆ.
ಪದವಿ ಪೂರ್ವ ವಿಭಾಗದಲ್ಲಿ ಮಡಿಕೇರಿಯ ಸಂತ ಮೈಕಲರ ಶಾಲೆಯ ಪ್ರಥಮ ಪಿಯುಸಿ(ಪಿಸಿಎಂಬಿ ವಿಭಾಗದ) ಹೃತ್ಪೂರ್ವಕ್ ಕೆ.ಎಸ್.(ಪ್ರಥಮ), ಮಡಿಕೇರಿಯ ಸಂತ ಮೈಕಲರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ(ಪಿಸಿಎಂಬಿ ವಿಭಾಗದ) ಮೇನಿತ ನಾಗೇಶ್(ದ್ವಿತೀಯ), ಮಡಿಕೇರಿಯ ಸಂತ ಜೋಸೆಫರ ಶಾಲೆಯ ಪ್ರಥಮ ಪಿಯುಸಿ(ಪಿಸಿಎಂಬಿ ವಿಭಾಗ) ರಿದಾ ಸುಮನ್ ಬಿ.ಆರ್(ತೃತೀಯ) ಸ್ಥಾನ ಪಡೆದಿದ್ದಾರೆ.
ಪದವಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ತೃತೀಯ ಬಿ.ಎ. ಲತಾ ಡಿ(ಪ್ರಥಮ), ವಿರಾಜಪೇಟೆ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿ.ಎ.ಯ ಕೀರ್ತನ(ದ್ವಿತೀಯ) ಹಾಗೂ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಎ.ಯ ಕುಶನ್ ಕೆ.(ತೃತೀಯ) ಸ್ಥಾನ ಪಡೆದಿದ್ದಾರೆ.
ಪ್ರೌಢಶಾಲಾ ವಿಭಾಗದಿಂದ 41 ಶಾಲೆಗಳಿಂದ 87 ಪ್ರಬಂಧ, ಪದವಿ ಪೂರ್ವ ವಿಭಾಗದಿಂದ 43 ಕಾಲೇಜಿನಿಂದ 83 ಪ್ರಬಂಧಗಳು ಹಾಗೆಯೇ ಪದವಿ/ಸ್ನಾತಕೋತ್ತರ ಪದವಿ ವಿಭಾಗದಿಂದ 7 ಕಾಲೇಜಿನಿಂದ 21 ಪ್ರಬಂಧಗಳು ಸಲ್ಲಿಕೆಯಾಗಿದ್ದವು.
