Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»”ಮರ್‍ಂಜ ಪಾಳೆ” ಕೊಡವ ಪುಸ್ತಕ ಬಿಡುಗಡೆ : ಅಪಾರ ಜ್ಞಾನ ಹೊಂದಿದವರು ಮಾತ್ರ ನೈಜ ಸಾಹಿತಿಗಳು : ಡಾ.ಉಳ್ಳಿಯಡ ಎಂ.ಪೂವಯ್ಯ ಅಭಿಪ್ರಾಯ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

”ಮರ್‍ಂಜ ಪಾಳೆ” ಕೊಡವ ಪುಸ್ತಕ ಬಿಡುಗಡೆ : ಅಪಾರ ಜ್ಞಾನ ಹೊಂದಿದವರು ಮಾತ್ರ ನೈಜ ಸಾಹಿತಿಗಳು : ಡಾ.ಉಳ್ಳಿಯಡ ಎಂ.ಪೂವಯ್ಯ ಅಭಿಪ್ರಾಯ

ನವೆಂಬರ್ 2, 20233 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ನ.2 : ಕಥೆ, ಕವನ, ಬರೆಯುವವರು, ಒಂದು ಪುಸ್ತಕ ಬರೆದವರು ಸಾಹಿತಿಗಳಾಗಲು ಸಾಧ್ಯವಿಲ್ಲ. ಅವರು ಕೇವಲ ಬರಹಗಾರರಷ್ಟೆ, ಹಲವು ಪುಸ್ತಕ ಬರೆದು, ಅಪಾರ ಜ್ಞಾನ ಹೊಂದಿದವರು ಮಾತ್ರ ನಿಜವಾದ ಸಾಹಿತಿಗಳು ಎಂದು ಬ್ರಹ್ಮಗಿರಿ ವಾರಪತ್ರಿಕೆಯ ಸಂಪಾದಕ ಡಾ.ಉಳ್ಳಿಯಡ ಎಂ.ಪೂವಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ಪತ್ರಿಕಾಭವನದ ಸಭಾಂಗಣದಲ್ಲಿ ಕೊಡವ ಮಕ್ಕಡ ಕೂಟದ ವತಿಯಿಂದ ಲೇಖಕಿ ತೆನ್ನಿರ ಟೀನಾ ಚಂಗಪ್ಪ ಬರೆದಿರುವ “ಮರ್‍ಂಜ ಪಾಳೆ” ಕೊಡವ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪುಸ್ತಕ ಪ್ರಕಟಿಸುವವರಿಗೆ ತಾಳ್ಮೆ, ಮುಂದಾಲೋಚನೆ, ತ್ಯಾಗಮನೋಭಾವ ಮತ್ತು ವಿಮರ್ಶಾ ಶಕ್ತಿ ಇರಬೇಕು. ಆಗ ಮಾತ್ರ ಪುಸ್ತಕ ಪ್ರಕಟಣೆಗೆ ಅರ್ಹತೆ ಪಡೆದುಕೊಳ್ಳುತ್ತದೆ. ಕನ್ನಡ ಭಾಷೆಯಲ್ಲಿ ಲಕ್ಷೋಪ ಲಕ್ಷ ಪುಸ್ತಕಗಳು ಇದ್ದು, ಅದನ್ನು ಯಾರಿಗೂ ಎಣಿಕೆ ಮಾಡಲು ಸಾಧ್ಯವಿಲ್ಲ. ಆದರೆ ಕೊಡವ ಭಾಷಾ ಪುಸ್ತಕ ಅಂದಾಜು 700 ರಷ್ಟು ಇದ್ದು, ಅದರ ಬೆಳವಣಿಗೆಗೆ ಎಲ್ಲರೂ ಮುಂದಾಗಬೇಕು ಎಂದರು.
1900ರಲ್ಲಿ ಆದಿಕವಿ ಹರಿದಾಸ ಅಪ್ಪಚ್ಚ ಕವಿ ಕೊಡವ ಭಾಷೆಯ ಪ್ರಥಮ ಮುದ್ರಣವನ್ನು ಹೊರತಂದಿದ್ದು, ಅಂದಿನಿಂದ ಕೊಡವ ಭಾಷೆಯಲ್ಲಿ ಅಕ್ಷರ ರೂಪದ ಸಾಹಿತ್ಯ ಬೆಳವಣಿಗೆ ಕಾಣುತ್ತಿದೆ. ಪ್ರಾದೇಶಿಕ ಭಾಷೆಯಾದ ಕೊಡವ ಭಾಷೆಯನ್ನು ಬೆಳೆಸುವುದು ನಮ್ಮ ಕೈಯಲ್ಲಿದೆ ಎಂದರು.
ಭಾಷೆ ಬೆಳವಣಿಗೆಗೆ ಪುಸ್ತಕ ಹಾಗೂ ಸಹಭಾಗಿತ್ವ ಮುಖ್ಯ, ಪ್ರತಿಯೊಬ್ಬರಿಗೂ ಮಾತೃ ಭಾಷೆಯನ್ನು ಬೆಳೆಸಲು ಅವಕಾಶವಿದೆ. ಕೀಳರಿಮೆಯಿಂದ ಭಾಷೆ ಬೆಳೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಭಾಷೆ ದೊಡ್ಡಮಟ್ಟದಲ್ಲಿ ಬೆಳವಣಿಗೆ ಕಂಡಿದ್ದು, ಅದೇ ಮಾದರಿ ಕೊಡಗಿನಲ್ಲಿ ಕೊಡವ ಭಾಷೆಯನ್ನು ಭಾಷಭಿಮಾನಿಗಳು ಬೆಳೆಸುವಂತಾಗಬೇಕು. ಇಂಗ್ಲಿಷ್ ಬಳಕೆಯಿಂದ ಮೂಲ ಭಾಷೆಗಳು ಕುಂಟಿತಗೊಳ್ಳುತ್ತಿದೆ. ಭಾಷೆ ಬೆಳವಣಿಗೆಗೆ ಆಸಕ್ತಿ ಹಾಗೂ ಮುತುವರ್ಜಿ ಇರಬೇಕು. ಹೆಚ್ಚು ಜನಸಂಖ್ಯೆ ಇದ್ದಾಗ ಮಾತ್ರ ಪ್ರಾದೇಶಿಕ ಭಾಷೆ ಬೆಳವಣಿಗೆಗೆ ಸಹಕಾರಿಯಾಗಲಿದೆ. ಭಾಷೆ ಬೆಳವಣಿಗೆಗೆ ನಮ್ಮ ಕೊಡುಗೆ ಏನು ಎಂಬುವುದನ್ನು ಅರಿತಿರಬೇಕು. ಅಲ್ಲದೆ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿ ವಿಮರ್ಶೆ ಮಾಡಿದಾಗ ಮಾತ್ರ ಭಾಷೆ ಬೆಳೆಯಲು ಸಾಧ್ಯ ಎಂದರು.
ಸಾಹಿತ್ಯದಲ್ಲಿ ಮೌಖಿಕ ಹಾಗೂ ಅಕ್ಷರ ರೂಪದ ಪ್ರಕಾರಗಳಿದ್ದು, ಅಕ್ಷರ ರೂಪದಲ್ಲಿ ಸಾಹಿತ್ಯ ರಚಿಸುವವರು ಬಹಳ ಎಚ್ಚರದಿಂದ ಹಾಗೂ ಮುಂದಾಲೋಚನೆಯನ್ನು ಹೊಂದಿರಬೇಕು. ಗ್ರಾಂಥಿಕ ಸಾಹಿತ್ಯ, ಸಾಹಿತ್ಯ ಬೆಳವಣಿಗೆಗೆ ಬಲ ನೀಡುತ್ತದೆ ಎಂದು ಪೂವಯ್ಯ ತಿಳಿಸಿದರು.
ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರು ಮೊಬೈಲ್ ಬಳಕೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಬರಹಗಾರರಿಗೆ ಮೊಬೈಲ್ ಅಡ್ಡಿಬರುವುದಿಲ್ಲ. ಕಥೆ, ಕವನ, ಲೇಖನವನ್ನು ಬರೆಯಲು ಎಲ್ಲರಿಗೂ ಸಾಧ್ಯವಿಲ್ಲ. ಅದು ಹೃದಯದ ವಿಚಾರವಾಗಿದ್ದು, ಹೃದಯದಲ್ಲಿ ಮೂಡುವ ಯಾವುದೇ ಭಾವನೆಯನ್ನು ಬರಹಗಾರರಿಂದ ಮಾತ್ರ ವ್ಯಕ್ತಪಡಿಸಲು ಸಾಧ್ಯ ಎಂದರು.
ಪುಸ್ತಕ ಪ್ರೇಮಿಗಳ ಲೋಕವೇ ಬೇರೆ, ಅದು ನಿಜವಾದ ಜೀವನ ಎಂದ ಅವರು, ವೃತ್ತಿಯೊಂದಿಗೆ ಪ್ರವೃತ್ತಿಯನ್ನು ಬೆಳೆಸಿಕೊಂಡು ಹೋಗುವುದು ಶ್ಲಾಘನೀಯವೆಂದು ತಿಳಿಸಿದರು.
ಬದುಕು ಸಾಹಿತ್ಯಕ್ಕೆ ಸಂಬಂಧಿಸಿದ್ದು, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಪ್ರೀತಿಸಿದಾಗ ಕಾವ್ಯ ಉದ್ಭವಿಸುತ್ತದೆ. ಕಾವ್ಯದ ಭಾವ, ಅರ್ಥ ಚೆನ್ನಾಗಿದ್ದರೆ ಮಾತ್ರ ಓದುಗರು ಅದರ ಒಳಗೆ ಇಳಿಯುತ್ತಾರೆ, ಆಗ ಮಾತ್ರ ಸಾರ್ಥಕತೆ ದೊರೆಯಲು ಸಾಧ್ಯ ಎಂದು ಅನಂತಶಯನ ಹೇಳಿದರು.
ಸಾಹಿತಿ ಉಳ್ಳಿಯಡ ಡಾಟಿ ಪೂವಯ್ಯ ಅವರು ಮಾತನಾಡಿ, ಸಾಹಿತ್ಯ ಚಿರಾಯುವಾಗಿರಬೇಕು, ಸನ್ಮಾನ, ಪ್ರಶಸ್ತಿಗಳಿಗಾಗಿ ಸೀಮಿತಗೊಳಿಸಬಾರದು. ಇದು ಉತ್ತಮ ಲೇಖಕರನ್ನು ನಾಶಪಡಿಸುತ್ತದೆ. ಸಾಹಿತ್ಯ ಇಂದಿಗೂ, ಮುಂದೆಯೂ ಪ್ರಸ್ತುತವಾಗಿರಬೇಕು ಎಂದರು.
ಪುರುಷರು ಮಹಿಳೆಯರ ಬೆಳವಣಿಗೆಗೆ ಬೆಂಬಲ ನೀಡುತ್ತಿದ್ದು, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಹೆಚ್ಚು ಸಾಧನೆ ಮಾಡುತ್ತಿರುವುದು ಶ್ಲಾಘನೀಯ, ಮಹಿಳೆಯರಲ್ಲಿ ಸಾಹಿತ್ಯಸಕ್ತಿ ಹೆಚ್ಚಾಗಬೇಕು. ಬೇರೆಯವರ ಜೀವನದೊಂದಿಗೆ ನಮ್ಮ ಜೀವನವನ್ನು ಹೋಲಿಕೆ ಮಾಡಿಕೊಂಡು ಜೀವನವನ್ನು ಹಾಳು ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಕೊಡವ ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಹೆಚ್ಚು ಶ್ರಮ ವಹಿಸುತ್ತಿದ್ದು, ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ ಅವಕಾಶ ಕಲ್ಪಿಸಿದರೆ ಜನಪದ ಕಲೆ, ಸಂಸ್ಕøತಿಯ ಉಳಿವಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು, ಕೊಡವ ಮಕ್ಕಡ ಕೂಟದ ವತಿಯಿಂದ ಕೊಡವ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಅಲ್ಲದೆ ತನ್ನ ಸಂಪಾದಕೀಯದ ಚಂಗೀರ (ಸಂಶೋಧನಾ ಕೃತಿ), ಒತ್ತಜೋಡಿ (ಅಭಿನಂದನಾ ಗ್ರಂಥ) ಹಾಗೂ ಆಟ್‍ಪಾಟ್ ಪಡಿಪು ಪುಸ್ತಕ(ಸಂಗ್ರಹ ಪುಸ್ತಕ) ಎನ್ನುವ ಐದು ಪುಸ್ತಕ ಪ್ರಕಟ ಮಾಡಲಾಗಿದೆ. ಕಳೆದ 7 ವರ್ಷದಿಂದ ಮಕ್ಕಳಿಗೆ ಆಟ್‍ಪಾಟ್ ಪಡಿಪು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಲ್ಲದೆ ದಾಖಲೀಕರಣ ಸಾಹಿತ್ಯದ ಹಾಗೂ ಕೊಡಗಿಗೆ ಸಂಬಂಧಿಸಿದ 75 ಪುಸ್ತಕವನ್ನು ಪ್ರಕಟಣೆ ಮಾಡಲಾಗಿದೆ ಎಂದರು.
ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ (ಮಹಾವೀರ ಚಕ್ರ ಪುರಸ್ಕೃತ) ಇವರ ಪ್ರತಿಮೆ ಅನಾವರಣ ಮಾಡಲಾಗಿದ್ದು, ಪ್ರತಿವರ್ಷ ಜನ್ಮದಿನ, ಪುಣ್ಯ ಸ್ಮರಣೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಕೊಂಗಂಡ ಗಣಪತಿ, ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ, ಕೊಡಗ್‍ರ ಗಾಂಧಿ ಸ್ವಾತಂತ್ರ್ಯ ಹೋರಾಟಗಾರ ಪಂದ್ಯಂಡ ಬೆಳ್ಯಪ್ಪ, ಕೊರವಂಡ ನಂಜಪ್ಪ ಇವರ ಹೆಸರನ್ನು ರಸ್ತೆಗೆ ಇಡುವ ಕಾರ್ಯ ಮಾಡಲಾಗಿದ್ದು, 5 ವರ್ಷ ಮಕ್ಕಳ ಕೊಡವ ಸಾಂಸ್ಕೃತಿಕ ನಮ್ಮೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗುವುದೆಂದರು.
ಲೇಖಕಿ ತೆನ್ನಿರ ಟೀನಾ ಚಂಗಪ್ಪ ಮಾತನಾಡಿ, ಪುಸ್ತಕದ ಬಗ್ಗೆ ವಿವರಿಸಿದರು.
ಸಮಾಜ ಸೇವಕರಾದ ಚಿಲ್ಲವಂಡ ಕಾವೇರಪ್ಪ, ಕುಳುವಂಡ ಮಣಿ ಜೋಯಪ್ಪ, ಮುಕೋಡ್ಲು ವ್ಯಾಲಿ ಡ್ಯೂನ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ಉಪಸ್ಥಿತರಿದ್ದರು.
ಪಾಲೆಯಂಡ ಕಾವ್ಯ ಪ್ರಾರ್ಥಿಸಿ, ಕೂಪದಿರ ಜೂನ ವಿಜಯ್ ಸ್ವಾಗತಿಸಿ, ಬೊಳ್ಳಜಿರ ಯಮುನಾ ಅಯ್ಯಪ್ಪ ನಿರೂಪಿಸಿ, ಕೊಚ್ಚೇರ ರಿನ್ಸಿ ಕವನ್ ವಂದಿಸಿದರು. ಮುಕ್ಕಾಟ್ಟಿರ ಅಂಜು ಸುಬ್ರಮಣಿ ಅವರು ಲೇಖಕಿ ತೆನ್ನಿರ ಟೀನಾ ಅವರ ಪರಿಚಯ ಮಾಡಿದರು.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಗಗನಕ್ಕೇರಿದ ಬೇಳೆಕಾಳುಗಳ ಬೆಲೆ; ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬರೆ!

ಅಕ್ಟೋಬರ್ 17, 2026

ಬೇಟೋಳಿ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ; ವನದುರ್ಗೆಗೆ ವಿಶೇಷ ಪೂಜೆ

ಅಕ್ಟೋಬರ್ 17, 2026

ಮೈಸೂರು ದಸರಾ ಕಂಬಳಕ್ಕೆ ತೆರಳುವ ಕೋಣಗಳಿಗೆ ಮಡಿಕೇರಿಯಲ್ಲಿ ಸ್ವಾಗತ

ಅಕ್ಟೋಬರ್ 17, 2026

ಬೇಟೋಳಿ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ; ವನದುರ್ಗೆಗೆ ವಿಶೇಷ ಪೂಜೆ

ಅಕ್ಟೋಬರ್ 17, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ, NEWS DESK ಅ.17: ಸಮೀಪದ ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ…

ಮೈಸೂರು ದಸರಾ ಕಂಬಳಕ್ಕೆ ತೆರಳುವ ಕೋಣಗಳಿಗೆ ಮಡಿಕೇರಿಯಲ್ಲಿ ಸ್ವಾಗತ

ಅಕ್ಟೋಬರ್ 17, 2026

ಮಡಿಕೇರಿಯಲ್ಲಿ ಮಕ್ಕಳ ದಸರಾ ಸಂಭ್ರಮ : ವಿದ್ಯಾರ್ಥಿಗಳ ಪ್ರತಿಭೆಗೆ ಪೋಷಕರ ಪ್ರೋತ್ಸಾಹ ಅಗತ್ಯ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್

ಅಕ್ಟೋಬರ್ 16, 2026

ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ : ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ

ಅಕ್ಟೋಬರ್ 16, 2026

ಶಿರಂಗಾಲದಲ್ಲಿ ಎಸ್.ವಿ. ನಂಜುಂಡಪ್ಪ ಅವರಿಗೆ ನುಡಿನಮನ; ನಿಸ್ವಾರ್ಥ ಸಾಮಾಜಿಕ ಸೇವೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಮಾಜ ಮನ್ನಣೆ ನೀಡಲಿ: ಅರಮೇರಿ ಸ್ವಾಮೀಜಿ

ಅಕ್ಟೋಬರ್ 16, 2026

ರೋಟರಿ ಮಿಸ್ಟಿ ಹಿಲ್ಸ್‌ನ 13ನೇ ವರ್ಷದ ಮಕ್ಕಳ ದಸರಾ ಯಶಸ್ವಿ; ಮಂಟಪ ನಿರ್ಮಾಣ ಸ್ಪರ್ಧೆಯಲ್ಲಿ ಟೀಮ್ ಅಗ್ನಿಗೆ ಪ್ರಥಮ ಬಹುಮಾನ; ಸತತ ಮೂರು ವರ್ಷಗಳ ಹ್ಯಾಟ್ರಿಕ್ ಸಾಧನೆ

ಅಕ್ಟೋಬರ್ 16, 2026

ಅ.17 ರಂದು ಕೊಡಗು ಜಿಲ್ಲೆಯಲ್ಲಿ ಕಾವೇರಿ ತುಲಾ ಸಂಕ್ರಮಣದ ರಜೆ

ಅಕ್ಟೋಬರ್ 16, 2026

ಅ.17ಕ್ಕೆ ಕೊಡಗು ಜಿಲ್ಲೆಯಲ್ಲಿ ತುಲಾ ಸಂಕ್ರಮಣದ ರಜೆ

ಅಕ್ಟೋಬರ್ 16, 2026

ಕಡಗದಾಳಿನಲ್ಲಿ ಎನ್‌ಎಸ್‌ಎಸ್ ಶಿಬಿರದ ಸಮಾರೋಪ : ಸಮಾಜದ ಅಭಿವೃದ್ಧಿಗೆ ವಿದ್ಯಾರ್ಥಿಗಳು ಕೊಡುಗೆ ನೀಡಲಿ : ಮೇಜರ್ ಪ್ರೊ. ರಾಘವ ಬಿ.

ಅಕ್ಟೋಬರ್ 15, 2026

ಅ.17 ರಂದು ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಕೊಡಗಿಗೆ ಭೇಟಿ

ಅಕ್ಟೋಬರ್ 15, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.