ಮಡಿಕೇರಿ ನ.15 : ಸೋಮವಾರಪೇಟೆ ಹೋಂಸ್ಟೇ ಅಸೋಸಿಯೇಷನ್ ವತಿಯಿಂದ ಸೋಮವಾರಪೇಟೆ ಬೇಳೂರು, ಕೋವರ್‌ಕೊಲ್ಲಿ ಜಂಕ್ಷನ್ ಬಳಿ ಪ್ರವಾಸೋದ್ಯಮ ಸ್ಥಳಗಳ ಮಾರ್ಗಸೂಚಿ ಫಲಕವನ್ನು ಅನಾವರಣಗೊಳಿಸಲಾಯಿತು.
ಈ ಸಂದರ್ಭ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ ರೋಹಿತ್ ಮಾತನಾಡಿ, ಪ್ರವಾಸೋದ್ಯಮ ಮಾರ್ಗನಸೂಚಿ ಫಲಕವು ಹೆಚ್ಚಿನ ಪ್ರವಾಸಿಗರಿಗೆ, ಪ್ರವಾಸೋದ್ಯಮ ಸ್ಥಳಗಳನ್ನು ತಲುಪಲು ಅನುಕೂಲವಾಗಲಿದೆ ಎಂದರು.
ಇನ್ನು ಅನೇಕ ಸ್ಥಳಗಳಲ್ಲಿ ಸೋಮವಾರಪೇಟೆ ಹೋಂಸ್ಟೇ ಅಸೋಸಿಯೇಷನ್ ವತಿಯಿಂದ ಪ್ರವಾಸೋದ್ಯಮ ಮಾರ್ಗಸೂಚಿ ಫಲಕವನ್ನು ಅಳವಡಿಸುವುದಾಗಿ ಅವರು ತಿಳಿಸಿದರು.
ಅಸೋಸಿಯೇಷನ್ ಉಪಾಧ್ಯಕ್ಷ ಯೋಗೇಶ್, ಕಾರ್ಯದರ್ಶಿ ಎಸ್.ಎಲ್. ಅಭಿನಂದ ಮತ್ತು ಖಜಾಂಚಿ ಪ್ರೀತಂ ಹಾಜರಿದ್ದರು.




































