*ನಕ್ಸಲೀಯರು ನಡೆಸಿದ ಸ್ಫೋಟದಲ್ಲಿ ಯೋಧ ಹುತಾತ್ಮ*
17/11/2023
ಗರಿಯಾಬಂದ್ ನ.17 : ನಕ್ಸಲೀಯರು ನಡೆಸಿದ ಸ್ಫೋಟದಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಯೋಧರೊಬ್ಬರು ಹುತಾತ್ಮರಾಗಿರುವ ಘಟನೆ ಛತ್ತೀಸ್ ಗಢದ ಗರಿಯಾಬಂದ್ ಜಿಲ್ಲೆಯ ಬಡೇ ಗೊಬ್ರಾ ಗ್ರಾಮದ ಬಳಿ ನಡೆದಿದೆ. ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ನಡೆದ ಗರಿಯಾಬಂದ್ ಜಿಲ್ಲೆಯಲ್ಲಿ ಇಂದು ಸ್ಫೋಟ ಸಂಭವಿಸಿತು. ಹುತಾತ್ಮ ಐಟಿಬಿಪಿ ಸಿಬ್ಬಂದಿಯನ್ನು ಹೆಡ್ ಕಾನ್‌ಸ್ಟೆಬಲ್ ಜೋಗಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಭದ್ರತಾ ಸಿಬ್ಬಂದಿಯ ಬೆಂಗಾವಲಿನಲ್ಲಿ ಬಂದಿದ್ದ ಮತಗಟ್ಟೆ ತಂಡವು ಮತದಾನ ಮುಗಿಸಿ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ.
