Advertisement
9:32 PM Saturday 9-December 2023

*ಸುಂಟಿಕೊಪ್ಪದಲ್ಲಿ ಸಮಸ್ತ ಕೊಡಗು ಜಿಲ್ಲಾ ಉಲಮಾ ಸಮ್ಮೇಳನ*

20/11/2023

ಮಡಿಕೇರಿ ನ.20 : ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ ನೂರನೇ ವಾರ್ಷಿಕೋತ್ಸವದ ಅಂಗವಾಗಿ ನ.21 ರಂದು ಸುಂಟಿಕೊಪ್ಪದಲ್ಲಿ ಸಮಸ್ತ ಕೊಡಗು ಜಿಲ್ಲಾ ಉಲಮಾ ಸಮ್ಮೇಳನ ನಡೆಯಲಿದೆ ಎಂದು ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಕೊಡಗು ಜಿಲ್ಲಾ ಸಮಿತಿಯ ಸದಸ್ಯ ಎಂ.ತಮ್ಲೀಖ್ ದಾರಿಮಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಂಟಿಕೊಪ್ಪದ ಜಾಮಿಅಃ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ಬೆಳಿಗ್ಗೆ 8.30 ಗಂಟೆಗೆ ಪಿ.ಬಿ.ಇಸ್ಮಾಯಿಲ್ ಮುಸ್ಲಿಯಾರ್ ನೇತೃತ್ವದಲ್ಲಿ ಕಂಬಿಬಾಣೆಯ ವಲಿಯುಲ್ಲಾಹಿ ಕಾಕು ಉಪ್ಪಾಪ ದರ್ಗಾ ಝಿಯಾರಿತಿನೊಂದಿಗೆ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ ಎಂದು ಮಾಹಿತಿ ನೀಡಿದರು.
ಬೆಳಿಗ್ಗೆ 9.30ಕ್ಕೆ ಎಸ್‍ಕೆಜೆಯು ಕೊಡಗು ಜಿಲ್ಲಾ ಸಮಿತಿ ಉಪಾಧ್ಯಕ್ಷ ಕೆ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಧ್ವಜಾರೋಹಣ ನೆರವೇರಿಸಲಿದ್ದು, 10 ಗಂಟೆಗೆ ಸಮಸ್ತ ಕೇಂದ್ರ ಮುಶಾವರ ಮುಶಾವರ ಸದಸ್ಯರು ಹಾಗೂ ಎಸ್ ಕೆಜೆಯು ಜಿಲ್ಲಾಧ್ಯಕ್ಷ ಎಂ.ಎಂ.ಅಬ್ದುಲ್ಲಾ ಫೈಝಿ ಅವರ ಪ್ರಾರ್ಥನೆಯೊಂದಿಗೆ ಸಮ್ಮೇಳನ ಆರಂಭಗೊಳ್ಳಲಿದ್ದು, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯ ಮೂಸ ಮುಸ್ಲಿಯಾರ್ ವಯನಾಡು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಎಸ್‍ಕೆಜೆಎಂಸಿಸಿ ಕಾರ್ಯದರ್ಶಿ ಅಬ್ದುರಹ್ಮಾನ್ ಮುಸ್ಲಿಯಾರ್ ದಿಕ್ಕೂಚಿ ಭಾಷಣ ಮಾಡಲಿದ್ದು, ನಂತರ ನಡೆಯುವ ತರಬೇತಿ ಶಿಬಿರದಲ್ಲಿ ಇಸ್ತಿಖಾಮ ನಾಯಕ ಎಂ.ಟಿ.ಅಬೂಬಕ್ಕರ್ ದಾರಿಮಿ ತವಸ್ಸುಲ್ ಇಸ್ತಿಗಾಸ ಎಂಬ ವಿಷಯವನ್ನು ಮಂಡಿಸಲಿದ್ದಾರೆ. ಕೇರಳದ ಪ್ರಖ್ಯಾತ ವಾಗ್ಮಿ ಜೆಸೀಲ್ ಕಮಾಲಿ ಫೈಝಿ ಅಹ್ಲು ಸುನ್ನತ್ ವಲ್ ಜಮಾಅಃ ಎಂಬ ವಿಷಯ ಮಂಡಿಸಲಿದ್ದಾರೆ.
ಕೊಡಗು ಜಿಲ್ಲೆಯ ಪ್ರಖ್ಯಾತ ಮುದರ್ರಿಸರಾದ ಬಹು ಅಬ್ದುಲ್ ಸಲಾಂ ಫೈಝಿ ಎಡಪಾಲ ತಬ್ಲೀಗ್ ಜಮಾಅತ್ ಎಂಬ ವಿಷಯವನ್ನು ಮಂಡಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ಪ್ರಮುಖ ವಿದ್ವಾಂಸರುಗಳಾದ ಮೊಯಿದು ಫೈಝಿ ಇಸ್ಮಾಯಿಲ್ ಉಸ್ತಾದ್, ಉಮ್ಮರ್ ಫೈಝಿ ಘನಿ ಉಸ್ತಾದ್ ಜಾಮಿಅಃ ಜೂನಿಯರ್ ಕಾಲೇಜು ಪ್ರಾಂಶುಪಾಲ ಝೈನುದ್ದೀನ್ ಫೈಝಿ ಸೇರಿದಂತೆ ಜಿಲ್ಲೆಯ ಹಲವಾರು ಉಲಮಾ ಉಮರಾ ನೇತಾರರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಲಾಮದ ಪ್ರಧಾನ ಕಾರ್ಯದರ್ಶಿ ಎ.ಸಿ.ಉಸ್ಮಾನ್ ಫೈಝಿ, ಸದಸ್ಯರಾದ ಎಂ ಅಬ್ದುಲ್ಲ ಫೈಝಿ, ಪಿ.ಬಿ.ಇಸ್ಮಾಯಿಲ್, ಕೆ.ಪಿ.ಅಬೂಬಕ್ಕರ್, ಅಬ್ದುಲ್ ಘನಿ ಉಪಸ್ಥಿತರಿದ್ದರು.