Advertisement
11:30 PM Saturday 2-December 2023

*ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ : ವಿಜೇತರ ಪಟ್ಟಿ ಪ್ರಕಟ*

21/11/2023

ಮಡಿಕೇರಿ ನ.21 : ಕೂರ್ಗ್ ಟೇಬಲ್ ಟೆನ್ನಿಸ್ ಯೂತ್ ಅಸೋಸಿಯೇಷನ್ ವತಿಯಿಂದ “ಮಲ್ಲೇಂಗಡ ಬೆಳ್ಯಪ್ಪ” ಅವರ ಸ್ಮರಣಾರ್ಥ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ “ಕೂರ್ಗ್ ಚಾಂಪಿಯನ್‍ಶಿಪ್ ಕಪ್-2023” ಪಂದ್ಯಾವಳಿಯ ವಿಜೇತರ ಪಟ್ಟಿ ಪ್ರಕಟವಾಗಿದೆ.

ನಗರದ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ 15 ವರ್ಷದೊಳಗಿನ ಬಾಲಕರ ಸಿಂಗಲ್ಸ್ ನಲ್ಲಿ ಅವಿನೇಶ್ ಪ್ರಥಮ, ಲಿತೇಶ್ ದ್ವಿತೀಯ, 18 ವರ್ಷದೊಳಗಿನ ಬಾಲಕರ ಸಿಂಗಲ್ಸ್ ನಲ್ಲಿ ಸಹದ್ ಪ್ರಥಮ, ಹೆಚ್.ಎನ್.ಪ್ರಜ್ವಲ್ ದ್ವಿತೀಯ, 25 ವರ್ಷದೊಳಗಿನ ಬಾಲಕರ ಸಿಂಗಲ್ಸ್ ನಲ್ಲಿ ಪ್ರಜ್ವಲ್ ಪ್ರಥಮ, ವಿ.ವೈ.ಚೇತನ್ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.

15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ನಲ್ಲಿ ಲೋಚನಾ ಪ್ರಥಮ, ಫಿದಾ ದ್ವಿತೀಯ, 18 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಸಿಂಚನಾ ಪ್ರಥಮ, ಜ್ಞಾನ ದ್ವಿತೀಯ, 25 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ನವ್ಯ ಪ್ರಥಮ, ದಿವ್ಯಾ ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ರಚನ್ ಪೊನ್ನಪ್ಪ ಪ್ರಥಮ, ಈಶ್ವರ್ ದ್ವಿತೀಯ, ಪುರುಷರ ಡಬಲ್ಸ್ ನಲ್ಲಿ ರಚನ್ ಪೊನ್ನಪ್ಪ ಹಾಗೂ ಡೆರಿಕ್ ಡಿಸೋಜಾ ಪ್ರಥಮ, ಪಿ.ಎಲ್.ಮಂಜುನಾಥ್ ಮತ್ತು ವರುಣ್ ಸುಧಾಕರ್ ದ್ವಿತೀಯ ಸ್ಥಾನ ಗೆದ್ದುಕೊಂಡಿದ್ದಾರೆ.

ಮಹಿಳೆಯ ವಿಭಾಗದ ಸಿಂಗಲ್ಸ್ ನಲ್ಲಿ ರೀತ್ ಗಣಪತಿ ಪ್ರಥಮ, ದಿವ್ಯಾ ದ್ವಿತೀಯ, ಮಹಿಳೆಯರ ಡಬಲ್ಸ್ ನಲ್ಲಿ ನಮಿತಾ ಹಾಗೂ ರೀನಾ ಪ್ರಥಮ, ರೀತ್ ಗಣಪತಿ ಮತ್ತು ಸ್ವಾತಿ ತಂಗಮ್ಮ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಮಿಶ್ರ ಡಬಲ್ಸ್ ನಲ್ಲಿ ಪಿ.ಎಲ್.ಮಂಜುನಾಥ್ ಮತ್ತು ರೀನಾ ಪ್ರಥಮ, ಈಶ್ವರ್ ಹಾಗೂ ನವ್ಯಾ ದ್ವಿತೀಯ ಸ್ಥಾನ ಗೆದ್ದುಕೊಂಡಿದ್ದಾರೆ.

ವೆಟರನ್ಸ್ ಪುರುಷರ ಸಿಂಗಲ್ಸ್ ನಲ್ಲಿ ಪ್ರವೀಣ್ ಶೇಟ್ ಪ್ರಥಮ, ಅಝರ್ ದ್ವಿತೀಯ, ವೆಟರನ್ಸ್ ಮಹಿಳಾ ವಿಭಾಗದಲ್ಲಿ ರೀತ್ ಗಣಪತಿ ಪ್ರಥಮ, ಸ್ವಾತಿ ತಂಗಮ್ಮ ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.