Advertisement
12:47 AM Saturday 2-December 2023

*ಕೊಡಗಿನ ಕಡಿದಾದ ರಸ್ತೆಯಲ್ಲಿ ಸಾಹಸಮಯ ಕಾರು ಚಾಲನೆ : ಹರಿಕೃಷ್ಣ-ಕುನಾಲ್ ಜೋಡಿಗೆ ಚಾಂಪಿಯನ್ ಪಟ್ಟ*

21/11/2023

ಸಿದ್ದಾಪುರ ನ.21 :  ಕೊಡಗಿನ ಕಾಫಿ ತೋಟಗಳ ಕಡಿದಾದ ರಸ್ತೆಯಲ್ಲಿ ತಮ್ಮ ಕಾರುಗಳನ್ನು ಚಲಾಯಿಸಿ
ನಿಗದಿತ ಸಮಯ ಸಾಧಿಸುವ ಮೂಲಕ ದೆಹಲಿಯ ಹರಿಕೃಷ್ಣ ವಾದಿಯ- ಹಿಮಾಚಲಪ್ರದೇಶದ ಕುನಾಲ್ ಕಶ್ಯಪ್ ಜೋಡಿ ಸಮಗ್ರ ಚಾಂಪಿಯನ್‌ಶಿಪ್ ತಮ್ಮದಾಗಿಸಿಕೊಂಡಿದ್ದಾರೆ.
ಬ್ಲೂ ಬ್ಯಾಂಡ್ ಎಫ್ಎಂ ಎಸ್‌ಸಿಐ ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್‌ಶಿಪ್ ನೇತೃತ್ವದಲ್ಲಿ ರೋಬಸ್ಟಾ ಸ್ಪೋರ್ಟ್ಸ್ ಅಂಡ್ ಅಡ್ವೆಂಚರ್ ಅಕಾಡೆಮಿ ಸಹಕಾರದೊಂದಿಗೆ ನಡೆದ ರೋಬಸ್ಟಾ-2023  ರ್‍ಯಾಲಿಯ ಅಂತಿಮ ದಿನದಂದು ಹೊಸಳ್ಳಿ ಹಾಗೂ ಮಾರ್ಗೊಳ್ಳಿ ಕಾಫಿ ತೋಟಗಳ ಕಡಿದಾದ ರಸ್ತೆಯಲ್ಲಿ ರೋಮಾಂಚನಕಾರಿಯಾಗಿ ತಮ್ಮ ಕಾರುಗಳನ್ನ ಚಲಾಯಿಸಿ ಸಾಧನೆಯ ಗುರಿ ಮುಟ್ಟಿದ್ದಾರೆ.
ನಾಲ್ಕು ಚಕ್ರದ ವಾಹನಗಳಿಗೆ ಐದನೇ ಸುತ್ತಿನ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್ ಅತ್ಯಂತ ರೋಚಕವಾಗಿತ್ತು. ಪಾಲಿಬೆಟ್ಟ ವ್ಯಾಪ್ತಿಯಲ್ಲಿರುವ ಕಾಫಿ ತೋಟದ ದುರ್ಗಮ ಹಾದಿಯಲ್ಲಿ ಮೈನವಿರೇಳಿಸುವ ರ‍್ಯಾಲಿ ನಡೆಯಿತು.
ಅರೋರ ವಿಕ್ರಂ ರಾವ್- ಸೌಮ್ಯ ಜೋಡಿ ದ್ವಿತೀಯ ಹಾಗೂ ಜಾಹನ್ ಸಿಂಗ್ ಗಿಲ್- ಸೂರಜ್ ಕೇಶವ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಐಎನ್‌ಆರ್‌ಸಿ2 ವಿಭಾಗದಲ್ಲಿ ಹರಿಕೃಷ್ಣ ವಾದಿಯ- ಕುನಾಲ್ ಕಶ್ಯಪ್ ಪ್ರಥಮ, ಅರೋರ ವಿಕ್ರಂ ರಾವ್- ಎ.ಜಿ.ಸೋಮಯ್ಯ ದ್ವಿತೀಯ, ಡರಿಯೋಸ್ ಶೋಫ್- ಶಹೀದ್ ಸಲ್ದಾನ್ ತೃತೀಯ ಬಹುಮಾನ ಪಡೆದಿದ್ದಾರೆ.
ಐಎನ್‌ಆರ್‌ಸಿ3 ವಿಭಾಗದಲ್ಲಿ ಜಾಹನ್ ಸಿಂಗ್ ಗಿಲ್- ಸೂರಜ್ ಕೇಶವ ಪ್ರಸಾದ್ ಪ್ರಥಮ, ಶೇಶಾಂಕ್ ಜಾಮ್ಮೆಲ್- ಆಶೀಶ್ ಶರ್ಮಾ ದ್ವಿತೀಯ, ಡರಿಯೋಸ್ ಶೋಫ್- ಶಹೀದ್ ಸಲ್ಮಾನ್ ತೃತೀಯ ಬಹುಮಾನ ಪಡೆದಿದ್ದಾರೆ. ಐಎನ್‌ಆರ್‌ಸಿ4 ವಿಭಾಗದಲ್ಲಿ ಅಭಿನ್ ರೈ- ಅರವಿಂದ್ ಧೀರೇಂದ್ರ ಪ್ರಥಮ, ವಿವೇಕ್ ಉತ್ತುಪರ್ಣ ಅಥೇರಿಯ ಕೌಸಗಿ ದ್ವಿತೀಯ, ಸಫೀಕುದೀಲ್ – ವಿ.ಅರುಣ್ ತೃತೀಯ ಬಹುಮಾನ ಪಡೆದಿದ್ದಾರೆ.
ಜಿವೈಪಿಎವೈ ವಿಭಾಗದಲ್ಲಿ ಮಿಚು ಗಣಪತಿ- ವೇಣು ರಮೇಶ್ ಕುಮಾರ್ ಪ್ರಥಮ, ಅಭಿಷೇಕ್ ಗೌಡ- ಧೀರಜ್ ಮನೆ ದ್ವಿತೀಯ, ಜಯಂತ್ ಸೋಮನಾಥನ್ – ಆರ್.ರಾಜಶೇಖ‌ರ್ ತೃತೀಯ ಬಹುಮಾನ ಪಡೆದಿದ್ದಾರೆ.

ಮಹಿಳಾ ವಿಭಾಗದಲ್ಲಿ ಅನುಶ್ರೀಯಾ ಗುಲಟಿ- ಶೇರ್ವೇನ್ ಪ್ರಥಮ, ಶಿವಾನಿ- ಅರ್ಜುನ್ ಧೀರೇಂದ್ರ ದ್ವಿತೀಯ, ಪ್ರಗತಿ ಗೌಡ- ತ್ರಿಶಾ ಅಲ್ಲೋಕರ್ ತೃತೀಯ ಬಹುಮಾನ ಪಡೆದಿದ್ದಾರೆ. ಜೂನಿಯರ್ ಐಎನ್‌ಆರ್‌ಸಿ ವಿಭಾಗದಲ್ಲಿ ಜಾಹನ್ ಸಿಂಗ್ ಗಿಲ್ – ಸೂರಜ್ ಕೇಶವ ಪ್ರಸಾದ್ ಪ್ರಥಮ, ಅಭಿನ್ ರೈ- ಅರವಿಂದ್ ಧೀರೇಂದ್ರ ದ್ವಿತೀಯ, ವಿವೇಕ್ ರುತ್ತುಪೂರ್ಣ- ಅಥೇರಿಯಾ ಕೌಂಸಗಿ ತೃತೀಯ ಬಹುಮಾನ ಪಡೆದಿದ್ದಾರೆ.
ಕೊಡಗಿನ ಅಭಿನ್ ರೈ-ರೈಜೀಂಗ್ ಸ್ಟಾರ್ ಟ್ರೋಫಿಯಲ್ಲಿ ತನ್ನಗಿಸಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ
ಸಮರ್ಪ ಸಮಾರಂಭದಲ್ಲಿ ಪಾಲ್ಗೊಂಡು ಕಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ ರ‍್ಯಾಲಿ  ಪಟುಗಳಿಗೆ ಬಹುಮಾನ ವಿತರಣೆ ಮಾಡಿದರು.
ಈ ಸಂದರ್ಭ ಬ್ಲೂ ಬ್ಯಾಂಡ್ ನ ಪ್ರಮುಖರಾದ ಪ್ರೇಮ್ ನಾಥ್ , ಮೂಸ ಶರೀಫ್, ರೋಬಸ್ಟಾ ಸ್ಪೋರ್ಟ್ಸ್ ಅಂಡ್ ಅಡ್ವೆಂಚರ್ ಅಕಾಡೆಮಿಯ  ಉದ್ಧಪಂಡ ತಿಮ್ಮಣ್ಣ, ಅಪ್ಪಣ್ಣ, ಜಮ್ಮಂಡ ಸೋಮಣ್ಣ,  ಮಹೇಶ್ ಅಪ್ಪಯ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು.