Advertisement
10:20 AM Sunday 3-December 2023

*ಕಡಂಗ : ಜಾಬಿರ್ ನಿಝಾಮಿ ಗೆ ಸನ್ಮಾನ*

21/11/2023

ಕಡಂಗ ನ.21 :  ಕರ್ನಾಟಕ ಹಾಗೂ ಕೇರಳದ ನಾನಾ ಭಾಗಗಳಲ್ಲಿ ಹಲವಾರು ರೋಗಿಗಳಿಗೆ ಹಾಗೂ ಬಡ ಅನಾಥ ಕುಟುಂಬಕ್ಕೆ ಸಹಾಯಕ್ಕಾಗಿ ಜಾಲತಾಣಗಳ ಮೂಲಕ ವಿಡಿಯೋ ಮಾಡಿ ಜನ ಮನ ಗೆದ್ದ ಚಾರೀಟಿ ಕಾರ್ಯಕರ್ತ ನಾಪೋಕ್ಲು ಸಮೀಪದ ಚೆರಿಯಪರಂಬು ನಿವಾಸಿ ಜಾಬಿರ್ ನಿಝಾಮಿ (ಸೇವ್ ದಿ ಡ್ರಿಮ್ಸ್ ಟ್ರಸ್ಟ್) ಅವರನ್ನು ಕಡಂಗ  ಕೆಡಿಎಸ್ ಮುಸ್ಲಿಂ ಯೂತ್ ಚಾರೀಟಿ ವತಿಯಿಂದ ಸನ್ಮಾನಿಸಲಾಯಿತು.

ಶಾದಿಮಹಲ್ ಸಭಾಂಗಣದಲ್ಲಿ  ನಡೆದ ಸರಳ ಕಾರ್ಯಕ್ರಮದಲ್ಲಿ  ಕೆಡಿಎಸ್ ಮುಸ್ಲಿಂ ಯೂತ್ ಚಾರೀಟಿ  ಪದಾಧಿಕಾರಿಗಳು ನಸ್ಮಾನಿಸಿ ಗೌರವಿಸಿದರು.

ಕೆಡಿಎಸ್ ಮುಸ್ಲಿಂ ಯೂತ್ ಚಾರಿಟಿಯ ಅಧ್ಯಕ್ಷ ಸಿ.ಎ.ಜುನೈದ್  ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ
ಸೇವ್ ದಿ ಡ್ರಿಮ್ಸ್ ನ ನಿರ್ದೇಶಕರಾದ ಮೈಸಿ ಕತ್ತಣಿರ, ಆರಫಾತ್, ಅಹ್ಮದ್ ನಾಪೋಕ್ಲು, ಹೋದ್ದೂರು ಗ್ರಾ.ಪಂ. ಸದಸ್ಯ ಮೊಯ್ದು, ಮೊಯ್ಯದ್ದೀನ್ ಮಸೀದಿಯ ಮಾಜಿ ಅಧ್ಯಕ್ಷ ಇಬ್ರಾಹಿಂ,ಮೊಯ್ದು ಮುಸ್ಲಿಯಾರ್, ಕೆಡಿಎಸ್ ನಿರ್ದೇಶಕರಾದ ಫತಾಯಿ, ಅಬ್ದುಲ್ ರಹ್ಮನ್, ಉಸ್ಮಾನ್,ಸುಬೈರ್,ರಝಾಕ್ ಪಿ.ಇ, ಕೆಡಿಎಸ್ ಆಡಳಿತ ಮಂಡಳಿಯ ಮಮ್ಮು,ರಝಾಕ್ ಸಿ.ಎ,ಸೌಕತ್, ಶರೀಫ್, ಎ.ಎ.ರಝಿಕ್,  ಮುಜೀಬ್, ಮತಿತ್ತರರು ಇದ್ದರು.

ಸ್ವಾಗತವನ್ನು ಕೆಡಿಎಸ್ ಚಾರೀಟಿ ಯ ಆಡಳಿತ ಮಂಡಳಿಯ ಸದಸ್ಯ ಹಾಗೂ ಪತ್ರಕರ್ತ ಅಶ್ರಫ್  ಸ್ವಾಗತಿಸಿದರು.  ಅಬ್ದುಲ್ ರಹ್ಮಾನ್ ವಂದಿಸಿದರು.

ವರದಿ :  ನೌಫಲ್