Advertisement
9:29 AM Sunday 3-December 2023

*ನಿಧನ ಸುದ್ದಿ*

21/11/2023

ನಾಪೋಕ್ಲು ನ.21 : ಕೈಕಾಡು ಗ್ರಾಮ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದ ಪಿ.ಸಿ. ಅಪ್ಪಾಜಿ(ಪೇರಿಯಂಡ-81) ನಿಧನರಾಗಿದ್ದಾರೆ.
ಇವರು ಪ್ರಖ್ಯಾತ ಕೊಡವ ಆಂದೊಳತ ಪಾಟ್ ಅನ್ನು ಬರೆದ ಪೇರಿಯಂಡ ದಿವಂಗತ ಚೆಂಗಪ್ಪನವರ ಕಿರಿಯ ಪುತ್ರ. ಪ್ರಾರಂಭದಲ್ಲಿ ಪತ್ರಕರ್ತರಾಗಿ ಕೊಡಗು ದೈನಿಕ (ಕೊಡಗು ಪ್ರೆಸ್ಸ್) ದಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಇವರು ತದನಂತರ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ಮಾಡಿ ಅoತಿಮವಾಗಿ ದಿ. ಮೈಸೂರ್ ಪ್ರಿಂಟರ್ಸ್ ಲಿಮಿಟೆಡ್ ನ ಪ್ರಜಾವಾಣಿ ಪತ್ರಿಕೆಯ ಕ್ರೀಡಾ ವಿಭಾಗದಲ್ಲಿ, ವಿಶೇಷವಾಗಿ ಕುದುರೆ ಓಟದ ಬರವಣಿಗೆಗಾರರಾಗಿ ಜನಮನ್ನಣೆ ಗಳಿಸಿದ್ದರು. ಇವರ ಅಂತ್ಯಕ್ರಿಯು ನ.22 ರಂದು ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆಯ ಸ್ವಂತ ನಿವಾಸದಲ್ಲಿ ಜರುಗಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ವರದಿ : ದುಗ್ಗಳ ಸದಾನಂದ.