*“ಕರ್ನಾಟಕ ಸಾಧಕ ರತ್ನ” ರಾಜ್ಯೋತ್ಸವ ಪ್ರಶಸ್ತಿಗೆ ಆರ್.ಕೆ.ಬಾಲಚಂದ್ರ ಆಯ್ಕೆ*
21/11/2023

ಮಡಿಕೇರಿ ನ.21 : ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಳ್ಳಾರಿಯ ಸ್ಮಿಯಾಕ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕೊಡಮಾಡುವ “ಕರ್ನಾಟಕ ಸಾಧಕ ರತ್ನ” ರಾಜ್ಯೋತ್ಸವ ಪ್ರಶಸ್ತಿಗೆ ಆರ್.ಕೆ.ಬಾಲಚಂದ್ರ ಆಯ್ಕೆಯಾಗಿದ್ದಾರೆ.
ಆರ್.ಕೆ.ಬಾಲಚಂದ್ರ ಅವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ , ಅನ್ಯ ರಾಜ್ಯದ ಕನ್ನಡೇತರರಿಗೆ ಕನ್ಮಡ ಕಲಿಸುವಿಕೆ, ರಾಜ್ಯಾದ್ಯಂತ ಉಚಿತವಾಗಿ ಬ್ಯಾಂಕಿಂಗ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗೆ ನೀಡಿದ ತರಬೇತಿಯ ಸೇವೆ ಮತ್ತು ಶಿಕ್ಷಣ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಗೌರವಿಸಲಾಗುವುದು. ನ.26 ರಂದು ನಡೆಯಲಿರುವ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
