Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಚಿನ್ನಾಭರಣ ಪ್ರಿಯರಿಗೆ ಸುವರ್ಣಾವಕಾಶ : ಕುಶಾಲನಗರದ ಜಿ.ಎಲ್‌.ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ‘ಓಲ್ಡ್ ಗೋಲ್ಡ್ ಎಕ್ಸ್‌ ಚೇಂಜ್ ಮೇಳ’*
  • *ಡೊನಾಲ್ಡ್ ಟ್ರಂಪ್ ಮೆಚ್ಚಿದ ಆ ‘ಒಂದು’ ನಿರ್ಧಾರ ಯಾವುದು? ಭಾರತಕ್ಕೆ ಸಿಗಲಿದೆ ಅತಿದೊಡ್ಡ ಆರ್ಥಿಕ ಲಾಭ!*
  • *ಜಾಹ್ನವಿ ಕಂದುಲಾ ಜೀವಕ್ಕೆ ‘ಬೆಲೆ’ ಕಟ್ಟಿದ ಅಮೆರಿಕಾ! ಸಿಯಾಟಲ್ ನಗರದಿಂದ ಬರಲಿದೆಯೇ ₹262 ಕೋಟಿ ಪರಿಹಾರ?*
  • *ಬಿಸಾಡಿದ ಬಾಟಲಿಗಳಿಂದ ಮತ್ತೆ ಗ್ಲಾಸಿಗೆ? ದೆಹಲಿ ಸ್ಟೇಡಿಯಂ ಸಿಬ್ಬಂದಿಯ ಈ ಕರ್ಮಕಾಂಡ ನೋಡಿ ನೀವೂ ವಾಕರಿಕೆ ಮಾಡ್ಕೊತೀರಾ!*
  • *ಚಿನ್ನಸ್ವಾಮಿಯಲ್ಲಿ ಮತ್ತೆ ಮೊಳಗಲಿದೆ RCB.. RCB.. ಸದ್ದು! ಸರ್ಕಾರದ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಹೇಗೆ? ಅಭಿಮಾನಿಗಳೇ ಈಗಲೇ ರೆಡಿಯಾಗಿ!*
  • *ಕರೆಂಟ್ ಬಿಲ್ ನೋಡಿ ಬೆಚ್ಚಿಬೀಳಬೇಡಿ! ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಗೆ ಕ್ಷಣಗಣನೆ; ಯಾರಿಗೆ ಎಷ್ಟು ಹೊರೆ?*
  • *ಶಾಲೆ ಪ್ರವಾಸಕ್ಕೆ ಟ್ರಕ್ ಬಳಕೆ: ಪೋಷಕರು ಫುಲ್ ಗರಂ! ಹೆಡ್‌ಮಾಸ್ಟರ್ ಅಮಾನತು ಹಿಂದಿನ ಅಸಲಿ ಕಥೆ ಇಲ್ಲಿದೆ*
  • *ಕೊಡಗಿಗೆ ಭೇಟಿ ನೀಡಿದ ಪೊಲೀಸ್ ಮಹಾ ನಿರೀಕ್ಷಕರು*
  • *ಕುಶಾಲನಗರದಲ್ಲಿ ಒಣ ಕಸ ಸಂಗ್ರಹ ಘಟಕ ಉದ್ಘಾಟನೆ*
  • *ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗಿದೆ : ಗುತ್ತಿಗೆದಾರರ ಸಂಘ ಗಂಭೀರ ಆರೋಪ*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ಮಡಿಕೇರಿಯಲ್ಲಿ ಪುತ್ತರಿ ಕೋಲಾಟ : ಸಂಸ್ಕೃತಿ ನಶಿಸಿ ಹೋಗದಂತೆ ಎಚ್ಚರ ವಹಿಸಬೇಕು : ಕೆ.ಜಿ.ಬೋಪಯ್ಯ*
ಇತ್ತೀಚಿನ ಸುದ್ದಿಗಳು

*ಮಡಿಕೇರಿಯಲ್ಲಿ ಪುತ್ತರಿ ಕೋಲಾಟ : ಸಂಸ್ಕೃತಿ ನಶಿಸಿ ಹೋಗದಂತೆ ಎಚ್ಚರ ವಹಿಸಬೇಕು : ಕೆ.ಜಿ.ಬೋಪಯ್ಯ*

November 28, 20231 Min Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

ಮಡಿಕೇರಿ ನ.28 : ಐತಿಹಾಸಿಕ ಹಿನ್ನೆಲೆ ಹೊಂದಿರುವ ನಗರದ ಕೋಟೆ ಆವರಣದಲ್ಲಿ ಮಡಿಕೇರಿ ಕೊಡವ ಸಮಾಜ, ಶ್ರೀ ಓಂಕಾರೇಶ್ವರ ದೇವಾಲಯ ಸಮಿತಿ ಮತ್ತು ಪಾಂಡೀರ ಕುಟುಂಬಸ್ಥರ ಸಂಯುಕ್ತ ಆಶ್ರಯದಲ್ಲಿ ಪುತ್ತರಿ ಕೋಲಾಟ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು, ಕೊಡವ ಸಮುದಾಯದ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಎಲ್ಲರೂ ಕೈಜೋಡಿಸಬೇಕು, ಯಾವುದೇ ಸಂಸ್ಕೃತಿ ನಶಿಸಿ ಹೋಗದಂತೆ ಎಚ್ಚರ ವಹಿಸಬೇಕೆಂದು ಹೇಳಿದರು.
ರಾಜ್ಯದಲ್ಲಿ ಸುಗ್ಗಿ ಹಬ್ಬದ ಮಾದರಿಯಲ್ಲೇ ಕೊಡಗು ಜಿಲ್ಲೆಯಲ್ಲಿ ಪುತ್ತರಿ ಕೋಲಾಟ ಅನಾದಿ ಕಾಲದಿಂದಲೇ ನಡೆದುಕೊಂಡು ಬರುತ್ತಿದೆ. ರಾಜವಂಶಸ್ಥರು ಅರಮನೆ ಮೈದಾನದಲ್ಲಿ ಪುತ್ತರಿ ಕೋಲಾಟ ನಡೆಸಿಕೊಂಡು ಬಂದಿದ್ದರು. ಕಾಲಾನಂತರ ಕೋಲಾಟವನ್ನು ಗದ್ದುಗೆ ಆವರಣಕ್ಕೆ ಸ್ಥಳಾಂತರವಾಗಿತ್ತು. ಆ ಬಳಿಕ ಕೊಡವ ಸಮಾಜ, ಕೊಡವ ಸಾಹಿತ್ಯ ಅಕಾಡೆಮಿಯ ಸಲಹೆಯಂತೆ ತಮ್ಮ ಅವಧಿಯಲ್ಲಿ ಮತ್ತೆ ಅರಮನೆ ಮೈದಾನಕ್ಕೆ ಸ್ಥಳಾಂತರ ಮಾಡಲಾಗಿದ್ದು, ಇದೀಗ ಹಲವು ವರ್ಷಗಳಿಂದ ಎಲ್ಲರ ಸಹಕಾರದಿಂದ ಕೋಲಾಟ ಯಶಸ್ವಿಯಾಗಿ ನಡೆಯುತ್ತಿದೆ. ಇಂತಹ ಪದ್ಧತಿ, ಪರಂಪರೆಗಳು, ಆಚಾರ ವಿಚಾರಗಳನ್ನು ನಶಿಸಲು ಬಿಡದೆ ಎಲ್ಲರೂ ಅದರ ಉಳಿವಿಗೆ ಪ್ರೋತ್ಸಾಹ ನೀಡಬೇಕೆಂದು ಬೋಪಯ್ಯ ಹೇಳಿದರು.
ಪಾಂಡೀರ ಕುಟುಂಬಸ್ಥರಿಂದ ಪ್ರಾರಂಭಿಕವಾಗಿ ಪುತ್ತರಿ ಕೋಲಾಟ ನಡೆಯಿತು. ಪಾಂಡೀರ ಕುಟುಂಬದ ಮಹಿಳಾ ಸದಸ್ಯರಿಂದ ನಡೆದ ಉಮ್ಮತ್ತಾಟ್, ತಾಲಿಪಾಟ್ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ದರಾಗಿ ವಿವಿಧ ನೃತ್ಯ ಪ್ರಕಾರಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಮಡಿಕೇರಿ ಕೊಡವ ಸಮಾಜದಿಂದ ಕೋಲಾಟ್, ಉಮ್ಮತ್ತಾಟ್, ಪರೆಯಕಳಿ ನಡೆಯಿತು. ಕಾರ್ಯಕ್ರಮದ ನಂತರ ಕೊಡಗಿನ ಸಾಂಪ್ರದಾಯಿಕ ವಾಲಗಕ್ಕೆ ನೆರೆದಿದ್ದವರು ಕುಣಿದು ಸಂಭ್ರಮಿಸಿದರು.
ಪಾಂಡೀರ ಕುಟುಂಬದ ಪಟ್ಟೆದಾರ ಪಾಂಡೀರ ಮೇದಪ್ಪ, ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ, ಶ್ರೀಓಂಕಾರೇಶ್ವರ ದೇವಾಲಯ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ಕಾರ್ಯನಿರ್ವಹಣಾಧಿಕಾರಿ ದೇವರಾಜ್, ನಗರ ಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಪಾಂಡೀರ ವಿಜಯ, ಪಾಂಡೀರ ಮುತ್ತಣ್ಣ, ಸಜನ್ ಪೂಣಚ್ಚ, ಸಂತು ಸೇರಿದಂತೆ ಮಡಿಕೇರಿ ಕೊಡವ ಸಮಾಜದ ಆಡಳಿತ ಮಂಡಳಿ ಪದಾಧಿಕಾರಿಗಳು, ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಸದಸ್ಯರು, ವಿವಿಧ ಕೊಡವ ಕೇರಿಗಳ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share. Facebook Twitter Pinterest LinkedIn Tumblr Email WhatsApp
Previous Article*ಕೊಡವ ಪ್ರೀಮಿಯರ್ ಲೀಗ್ : ಮೈಸೂರು ಮಕ್ಕ ತಂಡ ಚಾಂಪಿಯನ್*
Next Article *ನಾಲ್ಕುನಾಡು ವ್ಯಾಪ್ತಿಯಲ್ಲಿ ಪುತ್ತರಿ ಸಂಭ್ರಮ*

Website design development company services in Mangalore

Forex Trading Teacher in India

Related Posts

*ಚಿನ್ನಾಭರಣ ಪ್ರಿಯರಿಗೆ ಸುವರ್ಣಾವಕಾಶ : ಕುಶಾಲನಗರದ ಜಿ.ಎಲ್‌.ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ‘ಓಲ್ಡ್ ಗೋಲ್ಡ್ ಎಕ್ಸ್‌ ಚೇಂಜ್ ಮೇಳ’*

February 13, 2026

*ಡೊನಾಲ್ಡ್ ಟ್ರಂಪ್ ಮೆಚ್ಚಿದ ಆ ‘ಒಂದು’ ನಿರ್ಧಾರ ಯಾವುದು? ಭಾರತಕ್ಕೆ ಸಿಗಲಿದೆ ಅತಿದೊಡ್ಡ ಆರ್ಥಿಕ ಲಾಭ!*

February 12, 2026

*ಜಾಹ್ನವಿ ಕಂದುಲಾ ಜೀವಕ್ಕೆ ‘ಬೆಲೆ’ ಕಟ್ಟಿದ ಅಮೆರಿಕಾ! ಸಿಯಾಟಲ್ ನಗರದಿಂದ ಬರಲಿದೆಯೇ ₹262 ಕೋಟಿ ಪರಿಹಾರ?*

February 12, 2026

*ಡೊನಾಲ್ಡ್ ಟ್ರಂಪ್ ಮೆಚ್ಚಿದ ಆ ‘ಒಂದು’ ನಿರ್ಧಾರ ಯಾವುದು? ಭಾರತಕ್ಕೆ ಸಿಗಲಿದೆ ಅತಿದೊಡ್ಡ ಆರ್ಥಿಕ ಲಾಭ!*

February 12, 2026

ನ್ಯೂಯಾರ್ಕ್/ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದೊಂದಿಗಿನ ಇತ್ತೀಚಿನ ವಾಣಿಜ್ಯ ಒಪ್ಪಂದವನ್ನು “ಐತಿಹಾಸಿಕ” ಎಂದು ಬಣ್ಣಿಸಿದ್ದಾರೆ. ಈ ಒಪ್ಪಂದದ…

*ಜಾಹ್ನವಿ ಕಂದುಲಾ ಜೀವಕ್ಕೆ ‘ಬೆಲೆ’ ಕಟ್ಟಿದ ಅಮೆರಿಕಾ! ಸಿಯಾಟಲ್ ನಗರದಿಂದ ಬರಲಿದೆಯೇ ₹262 ಕೋಟಿ ಪರಿಹಾರ?*

February 12, 2026

*ಬಿಸಾಡಿದ ಬಾಟಲಿಗಳಿಂದ ಮತ್ತೆ ಗ್ಲಾಸಿಗೆ? ದೆಹಲಿ ಸ್ಟೇಡಿಯಂ ಸಿಬ್ಬಂದಿಯ ಈ ಕರ್ಮಕಾಂಡ ನೋಡಿ ನೀವೂ ವಾಕರಿಕೆ ಮಾಡ್ಕೊತೀರಾ!*

February 12, 2026

*ಚಿನ್ನಸ್ವಾಮಿಯಲ್ಲಿ ಮತ್ತೆ ಮೊಳಗಲಿದೆ RCB.. RCB.. ಸದ್ದು! ಸರ್ಕಾರದ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಹೇಗೆ? ಅಭಿಮಾನಿಗಳೇ ಈಗಲೇ ರೆಡಿಯಾಗಿ!*

February 12, 2026

*ಕರೆಂಟ್ ಬಿಲ್ ನೋಡಿ ಬೆಚ್ಚಿಬೀಳಬೇಡಿ! ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಗೆ ಕ್ಷಣಗಣನೆ; ಯಾರಿಗೆ ಎಷ್ಟು ಹೊರೆ?*

February 12, 2026

*ಶಾಲೆ ಪ್ರವಾಸಕ್ಕೆ ಟ್ರಕ್ ಬಳಕೆ: ಪೋಷಕರು ಫುಲ್ ಗರಂ! ಹೆಡ್‌ಮಾಸ್ಟರ್ ಅಮಾನತು ಹಿಂದಿನ ಅಸಲಿ ಕಥೆ ಇಲ್ಲಿದೆ*

February 12, 2026

*ಕೊಡಗಿಗೆ ಭೇಟಿ ನೀಡಿದ ಪೊಲೀಸ್ ಮಹಾ ನಿರೀಕ್ಷಕರು*

February 12, 2026

*ಕುಶಾಲನಗರದಲ್ಲಿ ಒಣ ಕಸ ಸಂಗ್ರಹ ಘಟಕ ಉದ್ಘಾಟನೆ*

February 12, 2026

*ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗಿದೆ : ಗುತ್ತಿಗೆದಾರರ ಸಂಘ ಗಂಭೀರ ಆರೋಪ*

February 12, 2026

*ಕೇಂದ್ರ ಸರಕಾರದ ವಿರುದ್ಧ ಮಡಿಕೇರಿಯಲ್ಲಿ ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ*

February 12, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.