Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಕೊಡಗು ವಿದ್ಯಾಲಯದಲ್ಲಿ  ಕ್ರೀಡಾದಿನಾಚರಣೆ : ಆತ್ಮರಕ್ಷಣೆಗಾಗಿ ಯುವತಿಯರು ಮಾಷ೯ಲ್ ಆಟ್೯ ಕಲಿಯಿರಿ : ನಿವೃತ್ತ ಏರ್ ಮಾಷ೯ಲ್ ಕೆ.ಸಿ.ಕಾಯ೯ಪ್ಪ ಸಲಹೆ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕೊಡಗು ವಿದ್ಯಾಲಯದಲ್ಲಿ  ಕ್ರೀಡಾದಿನಾಚರಣೆ : ಆತ್ಮರಕ್ಷಣೆಗಾಗಿ ಯುವತಿಯರು ಮಾಷ೯ಲ್ ಆಟ್೯ ಕಲಿಯಿರಿ : ನಿವೃತ್ತ ಏರ್ ಮಾಷ೯ಲ್ ಕೆ.ಸಿ.ಕಾಯ೯ಪ್ಪ ಸಲಹೆ

ಡಿಸೆಂಬರ್ 9, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಡಿ.9 : ಯುವತಿಯರು ಆತ್ಮರಕ್ಷಣೆಗಾಗಿ ಮಾಷ೯ಲ್ ಕಲೆಯನ್ನು ಕಲಿಯುವ ಅಗತ್ಯವಿದ್ದು, ಈ ಮೂಲಕ ಸ್ವರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಯುವಪೀಳಿಗೆ ಮುಂದಾಗಬೇಕೆಂದು ನಿವೃತ್ತ  ಏರ್ ಮಾಷ೯ಲ್ ಕೆ.ಸಿ.ಕಾಯ೯ಪ್ಪ ಕರೆ ನೀಡಿದ್ದಾರೆ.

ಕೊಡಗು ವಿದ್ಯಾಲಯದಲ್ಲಿ ಆಯೋಜಿತ ಶಿಕ್ಷಣ ಸಂಸ್ಥೆಯ 40ನೇ ಕ್ರೀಡಾದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಭ೯ತಿಯಿಂದ ಜೀವನ ಸಾಗಿಸಲು ಇಂದಿನ ದಿನಗಳಲ್ಲಿ ಸ್ವರಕ್ಷಣೆಗಾಗಿ ಮಾಷ೯ಲ್ ಕಲೆಯನ್ನು ತಿಳಿದುಕೊಳ್ಳುವ ಅನಿವಾಯ೯ತೆಯಿದೆ. ಈ ನಿಟ್ಟಿನಲ್ಲಿ ಯುವತಿಯರು ಮಾಷ೯ಲ್ ಆಟ್೯ನಲ್ಲಿ ತರಬೇತಿ ಪಡೆಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಮಡಿಕೇರಿ ಸೇರಿದಂತೆ ಕೊಡಗಿನ ಪರಿಸರವು ಇತ್ತೀಚಿನ ವಷ೯ಗಳಲ್ಲಿ ಮಾಲಿನ್ಯದಿಂದ ಹಾಳಾಗುತ್ತಿದೆ. ನಿಸಗ೯ಸೌಂದಯ೯ಕ್ಕೆ ಹೆಸರಾದ ಮಡಿಕೇರಿ ಕಾಂಕ್ರೀಟ್ ಕಾಡಾಗುತ್ತಿದೆ. ಯುವಜನಾಂಗ ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತನೆ ಹರಿಸಿ ಪರಿಸರ ಸಂರಕ್ಷಣೆಗೆ ಮುಂದಾಗುವಂತೆ ಕರೆ ನೀಡಿದ ನಿವೖತ್ತ ಏರ್ ಮಾಷ೯ಲ್, 2018 ರಲ್ಲಿ ಸಂಭವಿಸಿದ ಭೂಕುಸಿತ ಖಂಡಿತವಾಗಿಯೂ ದೇವರ ಅಥವಾ ವಿಧಿಯ ಸೖಷ್ಟಿಯಲ್ಲ. ಇದು ಮಾನವನ ದುರಾಸೆಯಿಂದ ಸಂಭವಿಸಿದ ಪ್ರಾಕೖತ್ತಿಕ ವಿಕೋಪವಾಗಿದ್ದು ಆ ದುರಂತದಿಂದ ನಾವೆಲ್ಲರೂ ಎಚ್ಚರಿಕೆಯ ಪಾಠ ಕಲಿತು ಪ್ರಕೃತಿ ಸಂರಕ್ಷಣೆಯತ್ತ ಗಮನ ಹರಿಸಲೇಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ಪ್ರತೀಯೋವ೯ರಿಗೂ ದೇಶ ಮೊದಲ ಪ್ರಾಶಸ್ತ್ಯ ಆಗಿರಬೇಕು. ನಂತರವೇ ತನ್ನ ಸುಖ, ಸಂತೋಷ ಇರಬೇಕು. ದೇಶ ಸುರಕ್ಷಿತವಾಗಿ ಇದ್ದರೆ ಮಾತ್ರ ತನ್ನ ಜೀವನ ಕೂಡ ನೆಮ್ಮದಿಯಿಂದ ಇರಲು ಸಾಧ್ಯ ಎಂಬುದನ್ನು ಯಾರೂ ಮರೆಯಬಾರದು ಎಂದು ಅಭಿಪ್ರಾಯಪಟ್ಟ ಕೆ.ಸಿ.ಕಾಯ೯ಪ್ಪ, ಕೊಡಗು ವಿದ್ಯಾಲಯ ಉತ್ತಮ ರೀತಿಯಲ್ಲಿ ವಿದ್ಯಾಥಿ೯ಗಳಲ್ಲಿ ದೇಶಪ್ರೇಮದ ವಿಚಾರ ತಿಳಿಹೇಳುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ತಾನು ಶಿಕ್ಷಣ ಪಡೆಯುತ್ತಿದ್ದ ಸಂದಭ೯ ಗಣಿತದಲ್ಲಿ ಕಡಮೆ ಅಂಕ ಪಡೆಯುತ್ತಿದ್ದೆ ಎಂದು ಸ್ನರಿಸಿಕೊಂಡ ಏರ್ ಮಾಷ೯ಲ್ ಕಾಯ೯ಪ್ಪ, ಈ ಸಂದಭ೯ ತನ್ನತಂದೆ ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಅವರು ಸಿ.ವಿ.ಶಂಕರ್ ಅವರ ಮನೆಗೆ ತೆರಳಿ ತನ್ನ ಮಗನಿಗೆ ಗಣಿತ ಶಿಕ್ಷಣ ನೀಡಿ ಎಂದು ವಿನಂತಿಸಿದರು. ಅಂತೆಯೇ ಸಿ.ವಿ.ಶಂಕರ್ ಅವರು ಗಣಿತದಲ್ಲಿ ತನಗೆ ಶಿಕ್ಷಣ ನೀಡಿದ ಪರಿಣಾಮ ನಂತರ ಉತ್ತಮ ಶಿಕ್ಷಣ ಪಡೆದು ಸೇನಾಪಡೆಯಲ್ಲಿಯೂ ಒಳ್ಳೆಯ ಪದವಿ ಪಡೆಯಲು ಸಾಧ್ಯವಾಯಿತು ಎಂದೂ ಹೇಳಿದರು.

ಕೊಡಗು ವಿದ್ಯಾಲಯದ ಪ್ರಾಂಶುಪಾಲೆ ಕೆ.ಎಸ್.ಸುಮಿತ್ರಾ ಶಾಲಾ ವರದಿ ವಾಚಿಸಿ. ಸತತ 16 ವಷ೯ಗಳ ಕಾಲ ಶಾಲೆಯು 10 ನೇ ತರಗತಿಯಲ್ಲಿ ಶೇ.100 ರ ಫಲಿತಾಂಶ ಗಳಿಸುತ್ತಾ ಬಂದಿದೆ. ಸಂಸ್ಥೆಯ 60 ಶಿಕ್ಷಕರು, ಪೋಷಕರು, ವಿದ್ಯಾಥಿ೯ಗಳು, ಆಡಳಿತ ಮಂಡಳಿಯ ಸಹಕಾರ ಇದಕ್ಕೆ ಕಾರಣವಾಗಿದೆ ಎಂದು ಸ್ಮರಿಸಿಕೊಂಡರು.

ಕೊಡಗು ವಿದ್ಯಾಲಯದಲ್ಲಿ 28 ವಷ೯ಗಳಿಂದ ಎನ್.ಸಿ.ಸಿ. ತರಬೇತುದಾರರಾಗಿರುವ ದಾಮೋದರ್, ಕ್ರೀಡಾತರಬೇತು ದಾರ ಡಿ.ಜೆ. ದಿನೇಶ್ ಅವರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಗಣ್ಯರು ಸನ್ಮಾನಿಸಿ ಗೌರವಿಸಿದರು.

ಶಾಲಾ ಕ್ರೀಡಾಸಮಿತಿ ಅಧ್ಯಕ್ಷ ರಘುಮಾದಪ್ಪ, ಶಾಲಾ ನಿದೇ೯ಶಕರಾದ ಉಮಿ೯ಳಾ ಮುದ್ದಯ್ಯ, ಬಿ.ಎಸ್.ಪೂಣಚ್ಚ, ಸಿ.ಎಸ್.ಗುರುದತ್, ನೀತಾದೇವಯ್ಯ, ಆಪಚ್ಯು೯ನಿಟಿ ಶಾಲೆಯ ಟ್ರಸ್ಟಿ ಮೀನಾ ಕಾಯ೯ಪ್ಪ, ಪ್ರಮುಖರಾದ ವೀಣಾ ಚಂಗಪ್ಪ, ಗೀತಾಶ್ರೀಧರ್, ಕೊಡಗು ವಿದ್ಯಾಲಯದ ಆಡಳಿತ ವ್ಯವಸ್ಥಾಪಕ ಕೆ.ರವಿ ಸೇರಿದಂತೆ ಅನೇಕರಿದ್ದರು. ವಿದ್ಯಾರ್ಥಿಗಳಾದ ಯಾನ ಪೊನ್ನಮ್ಮ, ಪೂಜಿತ್ ನಿರೂಪಿಸಿ. ಪೂಜ್ಯ ಪೊನ್ನಮ್ಮ ಸ್ವಾಗತಿಸಿ, ಕೃತಿ ವಂದಿಸಿದರು.

ಕೊಡಗು ವಿದ್ಯಾಲಯದ ಆಪಚ್ಯು೯ನಿಟಿ ಶಾಲೆಯ ವಿಶೇಷ ಚೇತನ ಮಕ್ಕಳ ನೃತ್ಯ ಮನಮುಟ್ಟುವಂತಿತ್ತು. ಅಂತೆಯೇ ಕೊಡಗು ವಿದ್ಯಾಲಯದ ನೂರಾರು ವಿದ್ಯಾಥಿ೯ಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾಯ೯ಕ್ರಮಗಳು, ವಾದ್ಯಗೋಷ್ಟಿ, ಪಥಸಂಚಲನ ಜರುಗಿತು.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಬಲಮುರಿಯಲ್ಲಿ ಇಂದು ಕಾವೇರಿ ಜಾತ್ರಾ ಮಹೋತ್ಸವ: ಸಕಲ ಸಿದ್ಧತೆ ಪೂರ್ಣ; ವಿಶೇಷ ಪೂಜೆ, ಕಾವೇರಿ ಮಹಾ ಆರತಿ ಹಾಗೂ ಅನ್ನಸಂತರ್ಪಣೆ ಆಯೋಜನೆ

ಅಕ್ಟೋಬರ್ 18, 2026

ಕ್ಲೀನ್ ಕಕ್ಕಬ್ಬೆ ಅಭಿಯಾನ ಯಶಸ್ವಿ: 3,670 ಕೆ.ಜಿ. ತ್ಯಾಜ್ಯ ತೆರವು; ನಾಲಡಿ ಕಸಮುಕ್ತ; ಮರಂದೋಡು ಗ್ರಾಮವೂ ಬಹುತೇಕ ಸ್ವಚ್ಛ

ಅಕ್ಟೋಬರ್ 18, 2026

ಗೋಣಿಕೊಪ್ಪ ದಸರಾ ಬಹುಭಾಷಾ ಕವಿಗೋಷ್ಠಿ: 118 ಕವಿಗಳ ಮಹಾಸಂಗಮ; ಜೆನ್-ಜಿ ಹಾಗೂ ಬಾಲಕವಿಗಳಿಂದ ಕವನ ವಾಚನ; ವಿವಿಧ ಭಾಷೆ, ಸಂಸ್ಕೃತಿಗಳ ಸಾಹಿತ್ಯ ಅಭಿವ್ಯಕ್ತಿಗೆ ವೇದಿಕೆ

ಅಕ್ಟೋಬರ್ 18, 2026

ಕ್ಲೀನ್ ಕಕ್ಕಬ್ಬೆ ಅಭಿಯಾನ ಯಶಸ್ವಿ: 3,670 ಕೆ.ಜಿ. ತ್ಯಾಜ್ಯ ತೆರವು; ನಾಲಡಿ ಕಸಮುಕ್ತ; ಮರಂದೋಡು ಗ್ರಾಮವೂ ಬಹುತೇಕ ಸ್ವಚ್ಛ

ಅಕ್ಟೋಬರ್ 18, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ನಾಪೋಕ್ಲು, NEWS DESK ಅ.18: ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಹಸಿರುಸಿರಿಯ ನೆಲೆವೀಡಾದ ಕಕ್ಕಬ್ಬೆ ಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕ್ಲೀನ್…

ಗೋಣಿಕೊಪ್ಪ ದಸರಾ ಬಹುಭಾಷಾ ಕವಿಗೋಷ್ಠಿ: 118 ಕವಿಗಳ ಮಹಾಸಂಗಮ; ಜೆನ್-ಜಿ ಹಾಗೂ ಬಾಲಕವಿಗಳಿಂದ ಕವನ ವಾಚನ; ವಿವಿಧ ಭಾಷೆ, ಸಂಸ್ಕೃತಿಗಳ ಸಾಹಿತ್ಯ ಅಭಿವ್ಯಕ್ತಿಗೆ ವೇದಿಕೆ

ಅಕ್ಟೋಬರ್ 18, 2026

ರಾಜ್ಯಮಟ್ಟದ ಯೋಗ ದಸರಾ ಸ್ಪರ್ಧೆಯಲ್ಲಿ ಸುಮೇಶ್ ಕೆ.ಪಿ.ಗೆ ದ್ವಿತೀಯ ಸ್ಥಾನ; ಪಾಲಿಬೆಟ್ಟದ ಚೆಶೈರ್ ಹೋಮ್ ವಿಶೇಷ ಶಾಲೆಯ ವಿದ್ಯಾರ್ಥಿಗೆ ಬೆಳ್ಳಿ ಪದಕ, ನಗದು ಬಹುಮಾನ

ಅಕ್ಟೋಬರ್ 18, 2026

ತಲಕಾವೇರಿಯಲ್ಲಿ ಭಕ್ತರ ಹರ್ಷೋದ್ಘಾರದ ನಡುವೆ ಪವಿತ್ರ ತೀರ್ಥೋದ್ಭವ

ಅಕ್ಟೋಬರ್ 17, 2026

ಮೂರ್ನಾಡಿನಲ್ಲಿ ಅ.20ರಂದು 33ನೇ ವರ್ಷದ ಅದ್ದೂರಿ ಆಯುಧ ಪೂಜೆ ಮಹೋತ್ಸವ; ವಾಹನಗಳ ಮೆರವಣಿಗೆ, ಬೊಂಬೆ ಕುಣಿತ ಆಕರ್ಷಣೆ; ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು ಹಾಗೂ ಮಾಜಿ ಸೈನಿಕರಿಗೆ ಸನ್ಮಾನ

ಅಕ್ಟೋಬರ್ 17, 2026

ಮಡಿಕೇರಿಯಲ್ಲಿ ಅ. 18ರಂದು ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026

ಮಡಿಕೇರಿಯಲ್ಲಿ ಅ. 18ರಂದು ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026

ವಿರಾಜಪೇಟೆಯಲ್ಲಿ ಅ.20ರಂದು ಅದ್ದೂರಿ ಆಯುಧ ಪೂಜೆ: ಬೈಕ್ ಸಾಹಸ ಪ್ರದರ್ಶನ, ಸಂಗೀತ ರಸಮಂಜರಿ ವಿಶೇಷ ಆಕರ್ಷಣೆ

ಅಕ್ಟೋಬರ್ 17, 2026

ಭೀಕರ ರಸ್ತೆ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಅಕ್ಟೋಬರ್ 17, 2026

ಇಂದು ಮಡಿಕೇರಿಯಲ್ಲಿ ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.