ಸೋಮವಾರಪೇಟೆ ಡಿ.9 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರಪೇಟೆ ವತಿಯಿಂದ ಶಾಂತಳ್ಳಿ ವಲಯದ ಕಿಬ್ಬೆಟ್ಟ ಕಾರ್ಯಕ್ಷೇತ್ರದಲ್ಲಿ ಕೃಷಿಯೇತರ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ ನಡೆಯಿತು.
ಕೂಡಿಗೆ ಯೂನಿಯನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕ ಕೆ.ಪ್ರಕಾಶ್ ಕುಮಾರ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮೇಣದಬತ್ತಿ ತಯಾರಿಕೆ, ಕಂಪ್ಯೂಟರ್ ಕಲಿಕೆ, ಬೇಕರಿ, ತಿಂಡಿ ತಯಾರಿಕೆ, ಗೃಹ ಉಪಯೋಗಿ ವಸ್ತುಗಳ ತಯಾರಿಕೆ ಸೇರಿದಂತೆ 32 ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಭವಾನಿ ರಾಮಣ್ಣ, ಕಿಬ್ಬೆಟ್ಟ ಒಕ್ಕೂಟದ ಅಧ್ಯಕ್ಷರಾದ ರೇಷ್ಮ ಉಪನ್ಯಾಸಕರಾದ ಸುರೇಶ್, ಶಾಂತಳ್ಳಿ ವಲಯದ ಮೇಲ್ವಿಚಾರಕ ಲಕ್ಷ್ಮಣ್, ಕೃಷಿ ಮೇಲ್ವಿಚಾರಕ ರಾಜಣ್ಣ, ಸೇವಾ ಪ್ರತಿನಿಧಿ ನಿಖಿತ, ಸ್ವಸಹಾಯ ಹಾಗು ಪ್ರಗತಿ ಬಂದು ಸಂಘದ ಸದಸ್ಯರು, ಊರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.





































