Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಶ್ರೀಮಂಗಲದಲ್ಲಿ ಪ್ರಜಾಸೇವೆ ಅಭಿಯಾನ; 134ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ*
  • *ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*
  • *ಈದ್ ಮಿಲಾದ್ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ; ಧರ್ಮವನ್ನು ಪ್ರೀತಿಸಿ, ಇತರ ಧರ್ಮಗಳನ್ನು ಗೌರವಿಸಿ: ರಫೀಕ್ ಮಾಸ್ಟರ್*
  • *ಕೊಡಗಿನ ಶಿಕ್ಷಕರಿಗೆ ಪ್ರತಿಷ್ಠಿತ ‘ವಿದ್ಯಾರತ್ನ’ ರಾಜ್ಯ ಪ್ರಶಸ್ತಿ*
  • *ಶಿಕ್ಷಕರು ನೈತಿಕತೆ, ಮಾನವೀಯ ಮೌಲ್ಯ ಬೆಳೆಸಬೇಕು: ಮದನ್ ಮಾದಯ್ಯ; ಸುಂಟಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ; ನಿವೃತ್ತ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ದಂಪತಿಗೆ ಸನ್ಮಾನ*
  • *ಕ್ರೀಡಾ ಕ್ಷೇತ್ರದಲ್ಲಿ ಆಂಜೆಲಾ ವಿದ್ಯಾನಿಕೇತನದ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ; ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ*
  • *2030ಕ್ಕೆ ಭಾರತವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿ: ಕೊಡಗಿಗೆ ಕೇಂದ್ರ ತನಿಖಾ ತಂಡ ಭೇಟಿ*
  • *ಶ್ರೀಮಂಗಲ-ನಾಲ್ಕೇರಿ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ*
  • *ಮಾಸ್ಟರ್ಸ್ ಅಥ್ಲೆಟಿಕ್ಸ್ ಮೀಟ್ 2026ರಲ್ಲಿ ಕೊಡಗಿನ ಕ್ರೀಡಾಪಟುಗಳ ಮಿಂಚಿನ ಸಾಧನೆ*
  • *ಮಹಿಳಾ ಸ್ವಾವಲಂಬನೆಗೆ ‘ಆತ್ಮ’ ಯೋಜನೆ ಆಸರೆ: ನಾಪೋಕ್ಲು ಮಹಿಳಾ ಸಮಾಜದಿಂದ ಅಣಬೆ ಕಟಾವು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಅಮ್ಮತ್ತಿಯಲ್ಲಿ ಸಂಭ್ರಮದಿಂದ ನಡೆದ ಕೊಡವ ವಾಲಗತ್ತಾಟ್ ನಮ್ಮೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಅಮ್ಮತ್ತಿಯಲ್ಲಿ ಸಂಭ್ರಮದಿಂದ ನಡೆದ ಕೊಡವ ವಾಲಗತ್ತಾಟ್ ನಮ್ಮೆ*

ಡಿಸೆಂಬರ್ 14, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಡಿ.14 : ಖ್ಯಾತ ಸಾಹಿತಿ ದಿವಂಗತ ಮುಲ್ಲೇಂಗಡ ಬೇಬಿ ಚೋಂದಮ್ಮ ಅವರ ಸ್ಮರಣಾರ್ಥ ತೂಕ್ ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ ವತಿಯಿಂದ ಅಮ್ಮತ್ತಿಯಲ್ಲಿ ಎರಡನೇ ವರ್ಷದ ರಾಜ್ಯಮಟ್ಟದ ಕೊಡವ ವಾಲಗತ್ತಾಟ್ ನಮ್ಮೆ ಸಂಭ್ರಮದಿಂದ ನಡೆಯಿತು.
ಅಮ್ಮತ್ತಿ ಕೊಡವ ಸಮಾಜದ ಸಹಕಾರದೊಂದಿಗೆ ಅಮ್ಮತ್ತಿ ಕೊಡವ ಸಮಾಜದ ಆವರಣದಲ್ಲಿ ನಡೆದ ಕೊಡವ ವಾಲಗತ್ತಾಟ್ ನಮ್ಮೆಗೆ ಜಿಲ್ಲೆಯ ಖ್ಯಾತ ವಾಲಗ ತಂಡ ಎಂದು ಖ್ಯಾತಿ ಪಡೆದಿರುವ ಅಮ್ಮತ್ತಿಯ ನರಸ ಮತ್ತು ತಂಡ ಕೊಡವ ವಾಲಗ ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಭಾ ಕಾರ್ಯಕ್ರಮನ್ನು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೇಯಂಡ ವೀಣಾ ಅಚ್ಚಯ್ಯ ಉದ್ಘಾಟಿಸಿ, ಕೊಡವ ಆಚಾರ, ವಿಚಾರ, ಸಂಸ್ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ, ಯುವ ಪೀಳಿಗೆಗೆ ಉಳಿಸಿ, ಬೆಳೆಸುವಂತಾಗಬೇಕು ಎಂದು ಕರೆ ನೀಡಿದರು.
ತೂಕ್ ಬೊಳಕ್ ಕಲೆ ಕ್ರೀಡೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ, ಪೊನ್ನಂಪೇಟೆ ಕೊಡವ ಸಮಾಜದ ಮಾಜಿ ಅಧ್ಯಕ್ಷ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ, ವಿರಾಜಪೇಟೆ ಹಿರಿಯ ನಾಗರಿಕರ ವೇದಿಕೆಯ ಕಾರ್ಯದರ್ಶಿ ಪಾರುವಂಗಡ ಸನ್ನಿ ಮೊಣ್ಣಪ್ಪ, ವೈದ್ಯರಾದ ಚೇಂದಿರ ಬೋಪಣ್ಣ, ಹಿರಿಯ ಸಿನಿಮಾ ಕಲಾವಿದರಾದ ಮಂಡೀರ ಪದ್ಮ ಬೋಪಯ್ಯ ಭಾಗವಹಿಸಿ ಮಾತನಾಡಿದರು. ಅಕಾಡೆಮಿ ಸಂಚಾಲಕ ಮುಲ್ಲೇಂಗಡ ಮಧೋಶ್ ಪೂವಯ್ಯ ಸ್ವಾಗತಿಸಿ, ನಿರೂಪಿಸಿದರು.

ಮಕ್ಕಳು, ವಯೋವೃದ್ಧರು ಸೇರಿದಂತೆ ಪುರುಷರು, ಮಹಿಳೆಯರು ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಾಲಗತ್ತಾಟ್ ನಮ್ಮೆಯ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನಗಳನ್ನು ಪಡೆದುಕೊಂಡರು. ಸುಮಾರು 270ಕ್ಕೂ ಅಧಿಕ ವಾಲಗತ್ತಾಟ್ ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಭಾಗವಹಿಸಿ ಕುಣಿಕುಪ್ಪಳಿಸಿದ್ದರು.
ಸ್ಪರ್ಧೆಯ ತೀರ್ಪುಗಾರರಾಗಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಪ್ರಮುಖರಾದ ನಾಣಮಂಡ ವೇಣು ಮಾಚಯ್ಯ, ತೀತಿಮಾಡ ಬೋಸು ಅಯ್ಯಪ್ಪ, ಚಿಯಕಪೂವಂಡ ದೇವಯ್ಯ ಕಾರ್ಯನಿರ್ವಹಿಸಿದರು.
ಸ್ಪರ್ಧೆ :: ಕೊಡವ ವಾಲಗತ್ತಾಟ್ ಪೈಪೋಟಿ ತಲಾ ಆರು ವಿಭಾಗದಲ್ಲಿ ನಡೆಯಿತು. ಸಣ್ಣ ಮಕ್ಕಳಿಗೆ ಪ್ರತ್ಯೇಕ ವಿಭಾಗ ಸೇರಿದಂತೆ, 1 ರಿಂದ 7ನೇ ತರಗತಿಯವರೆಗೆ ಪ್ರಾಥಮಿಕ ವಿಭಾಗ, 8ನೇ ತರಗತಿಯಿಂದ 10ನೇ ತರಗತಿಯವರೆಗೆ ಪ್ರೌಢಶಾಲಾ ವಿಭಾಗ, ಪ್ರಥಮ ಪಿಯುಸಿಯಿಂದ 3ನೇ ಪದವಿಯವರೆಗೆ ಕಾಲೇಜು ವಿಭಾಗ, ಕಾಲೇಜಿನ ನಂತರ 60 ವಯಸ್ಸಿನವರೆಗೆ ಮತ್ತೊಂದು ವಿಭಾಗ, 60 ವಯಸ್ಸಿನ ಮೇಲ್ಪಟ್ಟು ಹಿರಿಯ ನಾಗರಿಕರ ವಿಭಾಗ ಸೇರಿದಂತೆ ಐದು ವಿಭಾಗಗಳಲ್ಲಿ ಪುರುಷರು ಹಾಗೂ ಮಹಿಳೆಯರು ಎಂದು ತಲಾ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.
ಬಹುಮಾನ ವಿಜೇತರು:
ಮಕ್ಕಳ ವಿಭಾಗ: ತೀತಿಮಾಡ ಶಿಯಾ ಬೋಜಮ್ಮ (ಪ್ರ), ಚೇಂದ್ರಿಮಾಡ ಇಹಾನಿ ದೇಚಮ್ಮ(ದ್ವಿ), ಕೇಚಂಡ ನೈರುತ್ ನಾಚಪ್ಪ(ತೃ)
1 ರಿಂದ 7ನೇ ತರಗತಿ ಬಾಲಕರ ವಿಭಾಗ: ಬಲ್ಲಾರಂಡ ನೀಲ್ ನಾಚಪ್ಪ (ಪ್ರ), ಕುಂಞಂಗಡ ಜಸ್ವಿನ್(ದ್ವಿ), ಮಂಡೇಪಂಡ ಅನೂಪ್ ಕರುಂಬಯ್ಯ(ತೃ),
ಬಾಲಕಿಯರ ವಿಭಾಗ: ನೆಲ್ಲಚಂಡ ಪೊನ್ನಮ್ಮ ನಾಚಪ್ಪ(ಪ್ರ), ಮಾಳೇಟೀರ ತಾಷ್ಯ ತಂಗಮ್ಮ(ದ್ವಿ), ಮೂಕೊಂಡ ಕಾವೇರಮ್ಮ(ತೃ).
ಪ್ರೌಢಶಾಲಾ ಬಾಲಕರ ವಿಭಾಗ: ಪೂವಣ್ಣ (ಪ್ರ), ತಾಣಚೀರ ನಂಜಪ್ಪ (ತೃ).
ಬಾಲಕಿಯರ ವಿಭಾಗ: ಕಿರಿಯಕಮಾಡ ನಿಶಾ ಬೋಜಮ್ಮ (ಪ್ರ), ತಾತಂಡ ಶ್ರೇಯಾ ಸೋಮಣ್ಣ(ದ್ವಿ), ಎಂ.ಪಿ.ಪೊನ್ನಮ್ಮ(ತೃ).
ಕಾಲೇಜು ಬಾಲಕರ ವಿಭಾಗ: ಕಳ್ಳಂಗಡ ಶೌರ್ಯ ಸೋಮಣ್ಣ(ಪ್ರ), ಮಿದೇರೀರ ದಿಲನ್ ದೇವಯ್ಯ(ದ್ವಿ), ಕಡೇಮಾಡ ರಚನ್ ಮೊಣ್ಣಪ್ಪ(ತೃ).
ಬಾಲಕಿಯರ ವಿಭಾಗ: ನಾಪಂಡ ಡೀನಾ ಭೀಮಯ್ಯ(ಪ್ರ), ಮಾಚಂಗಡ ಭೂಮಿಕಾ(ದ್ವಿ), ಪರದಂಡ ಪ್ರತ್ಯಕ್ಷ ಪೂವಮ್ಮ(ತೃ),
ಸಾರ್ವಜನಿಕ ಪುರುಷರ ವಿಭಾಗ: ಮತ್ರಂಡ ಹರ್ಷಿತ್(ಪ್ರ), ಚೆಟ್ಟೋಳಿರ ಶರತ್ ಸೋಮಣ್ಣ(ದ್ವಿ), ಕೊಣಿಯಂಡ ಮಾದಯ್ಯ(ತೃ),
ಮಹಿಳೆಯರ ವಿಭಾಗ: ಮುಕ್ಕಾಟೀರ ರಚನ ಸೋಮಣ್ಣ(ಪ್ರ), ಚೇಂದ್ರಿಮಾಡ ದರ್ಶಿನಿ ಕರುಣ್(ದ್ವಿ), ಮತ್ರಂಡ ಜ್ಯೋತಿ(ತೃ).
ಹಿರಿಯ ನಾಗರಿಕರು ಪುರುಷರ ವಿಭಾಗ: ನಂದಿನೆರವಂಡ ಟಿಪ್ಪು ಬಿದ್ದಪ್ಪ (ಪ್ರ), ಕೂತಂಡ ಧನೇಶ್ ಮೊಣ್ಣಪ್ಪ(ದ್ವಿ), ಮಾಚಿಮಾಡ ಡಾಲಿ ಮಂದಣ್ಣ(ತೃ),
ಹಿರಿಯರ ನಾಗರಿಕ ಮಹಿಳೆಯರ ವಿಭಾಗ: ಮುಲ್ಲೇರ ಪೊನ್ನಮ್ಮ(ಪ್ರ), ಕಂಬೀರಂಡ ಮುತ್ತಮ್ಮ(ದ್ವಿ), ರುಕ್ಮಿಣಿ ಮುತ್ತಮ್ಮ(ತೃ),
ಕಣ್ಣು ಮತ್ತು ದೇಹ ದಾನದ ನೋಂದಣಿ :: ಖ್ಯಾತ ಸಾಹಿತಿ ದಿ.ಮುಲ್ಲೇಂಗಡ ಬೇಬಿ ಚೋಂದಮ್ಮ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಕಣ್ಣು ದಾನ ಮತ್ತು ದೇಹ ದಾನದ ನೋಂದಣಿ ನಡೆಯಿತು.

 

Follow us Follow us
Share. WhatsApp Facebook Twitter Email Telegram Copy Link

Related Posts

*ಶ್ರೀಮಂಗಲದಲ್ಲಿ ಪ್ರಜಾಸೇವೆ ಅಭಿಯಾನ; 134ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ*

ಸೆಪ್ಟೆಂಬರ್ 26, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*

ಸೆಪ್ಟೆಂಬರ್ 26, 2026

*ಈದ್ ಮಿಲಾದ್ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ; ಧರ್ಮವನ್ನು ಪ್ರೀತಿಸಿ, ಇತರ ಧರ್ಮಗಳನ್ನು ಗೌರವಿಸಿ: ರಫೀಕ್ ಮಾಸ್ಟರ್*

ಸೆಪ್ಟೆಂಬರ್ 26, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*

ಸೆಪ್ಟೆಂಬರ್ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಸೆ.26: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್…

*ಈದ್ ಮಿಲಾದ್ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ; ಧರ್ಮವನ್ನು ಪ್ರೀತಿಸಿ, ಇತರ ಧರ್ಮಗಳನ್ನು ಗೌರವಿಸಿ: ರಫೀಕ್ ಮಾಸ್ಟರ್*

ಸೆಪ್ಟೆಂಬರ್ 26, 2026

*ಕೊಡಗಿನ ಶಿಕ್ಷಕರಿಗೆ ಪ್ರತಿಷ್ಠಿತ ‘ವಿದ್ಯಾರತ್ನ’ ರಾಜ್ಯ ಪ್ರಶಸ್ತಿ*

ಸೆಪ್ಟೆಂಬರ್ 26, 2026

*ಶಿಕ್ಷಕರು ನೈತಿಕತೆ, ಮಾನವೀಯ ಮೌಲ್ಯ ಬೆಳೆಸಬೇಕು: ಮದನ್ ಮಾದಯ್ಯ; ಸುಂಟಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ; ನಿವೃತ್ತ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ದಂಪತಿಗೆ ಸನ್ಮಾನ*

ಸೆಪ್ಟೆಂಬರ್ 26, 2026

*ಕ್ರೀಡಾ ಕ್ಷೇತ್ರದಲ್ಲಿ ಆಂಜೆಲಾ ವಿದ್ಯಾನಿಕೇತನದ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ; ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ*

ಸೆಪ್ಟೆಂಬರ್ 26, 2026

*2030ಕ್ಕೆ ಭಾರತವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿ: ಕೊಡಗಿಗೆ ಕೇಂದ್ರ ತನಿಖಾ ತಂಡ ಭೇಟಿ*

ಸೆಪ್ಟೆಂಬರ್ 26, 2026

*ಶ್ರೀಮಂಗಲ-ನಾಲ್ಕೇರಿ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ*

ಸೆಪ್ಟೆಂಬರ್ 26, 2026

*ಮಾಸ್ಟರ್ಸ್ ಅಥ್ಲೆಟಿಕ್ಸ್ ಮೀಟ್ 2026ರಲ್ಲಿ ಕೊಡಗಿನ ಕ್ರೀಡಾಪಟುಗಳ ಮಿಂಚಿನ ಸಾಧನೆ*

ಸೆಪ್ಟೆಂಬರ್ 26, 2026

*ಮಹಿಳಾ ಸ್ವಾವಲಂಬನೆಗೆ ‘ಆತ್ಮ’ ಯೋಜನೆ ಆಸರೆ: ನಾಪೋಕ್ಲು ಮಹಿಳಾ ಸಮಾಜದಿಂದ ಅಣಬೆ ಕಟಾವು*

ಸೆಪ್ಟೆಂಬರ್ 26, 2026

*36 ವರ್ಷ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆ ದೇವಮಾಜಿ, ಶಿಕ್ಷಕಿ ಭೋಜಮ್ಮಗೆ ಆತ್ಮೀಯ ಬೀಳ್ಕೊಡುಗೆ*

ಸೆಪ್ಟೆಂಬರ್ 26, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.