Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಎಚ್1-ಎನ್1 : ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚನೆ*
  • *ಅರೆಭಾಷೆಗೆ ಸಾಂಸ್ಕೃತಿಕ ನೆಲೆಗಟ್ಟು, ವ್ಯಾಕರಣದ ಶಿಸ್ತು ರೂಢಿಸಿದವರು ಕೋಡಿ ಕುಶಾಲಪ್ಪ ಗೌಡರು : ಸದಾನಂದ ಮಾವಜಿ*
  • *ಅಂತರ ಶಾಲಾ ಶಟಲ್ ಬ್ಯಾಡ್ಮಿಂಟನ್: ಶ್ರೀ ರಾಜರಾಜೇಶ್ವರಿ ಶಾಲೆ ವಿದ್ಯಾರ್ಥಿಗಳ ಸಾಧನೆ*
  • ಕೊಡಗಿನಲ್ಲಿ ಕರವೇ ಸ್ವಾಭಿಮಾನಿ ಸೇನೆಗೆ ನೂತನ ಸದಸ್ಯರ ಸೇರ್ಪಡೆ
  • *ತೀವ್ರಗೊಳಿಸಿದ ಐಇಸಿ ಅಭಿಯಾನ : ಮ್ಯಾರಥಾನ್ ಮೂಲಕ ಎಚ್‌ಐವಿ/ಏಡ್ಸ್ ಜಾಗೃತಿ*
  • *ಮಡಿಕೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ : ಸ್ವಾವಲಂಬಿ ಮಹಿಳಾ ಫಲಾನುಭವಿಗಳ ಗುರುತಿಸಿ ಸನ್ಮಾನಕ್ಕೆ ಕ್ರಮ*
  • *ಶಿಸ್ತುಬದ್ಧ ಶಿಕ್ಷಣದಿಂದಲೇ ಸಮಾಜದ ಯಶಸ್ಸು, ದೇಶದ ಪ್ರಗತಿ : ಶಾಸಕ ಎ.ಎಸ್.ಪೊನ್ನಣ್ಣ*
  • *ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ: ಶಿಸ್ತುಬದ್ಧ ಜೀವನವೇ ಸಾಧನೆಯ ದಾರಿದೀಪ: ಕರ್ನಲ್ ಸಂಜೀವ್ ಕುಮಾರ್*
  • *ಕೊಡಗು ವಿದ್ಯಾಲಯದಲ್ಲಿ ಬ್ರಹ್ಮಗಿರಿ ಸಹೋದಯ ಸಿಬಿಎಸ್ಇ ಶಾಲೆಗಳ ಸಾಂಸ್ಕೃತಿಕ ಸ್ಪರ್ಧೆ*
  • *ಮಡಿಕೇರಿ ನಗರಸಭೆ : ತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ವಿಧಾನಕ್ಕೆ ಒತ್ತು : ಶಾಸಕ ಮಂತರ್ ಗೌಡ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ತಾರಕಕ್ಕೇರಿದ ಸೋಮವಾರಪೇಟೆ ಮಳಿಗೆಗಳ ಹರಾಜು ಪ್ರಕ್ರಿಯೆ ಗೊಂದಲ : ಪ್ರತಿಭಟನೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ತಾರಕಕ್ಕೇರಿದ ಸೋಮವಾರಪೇಟೆ ಮಳಿಗೆಗಳ ಹರಾಜು ಪ್ರಕ್ರಿಯೆ ಗೊಂದಲ : ಪ್ರತಿಭಟನೆ*

ಡಿಸೆಂಬರ್ 15, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
ಸೋಮವಾರಪೇಟೆ ಡಿ.15 : ಅಂಗಡಿ ಮಳಿಗೆ ಹರಾಜು ವಿಚಾರದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯರನ್ನು ಕಡೆಗಣಿಸಲಾಗಿದೆ ಎಂಬ ವಿಚಾರ ಇಂದು ಪ್ರತಿಭಟನೆಯ ಸ್ವರೂಪ ಪಡೆದುಕೊಂಡಿತು. ಅಧಿಕಾರಿಗಳ ವಿರುದ್ಧ ಘೋಷಣೆ, ಮಾತಿನ ಚಕಮಕಿ ನಡೆಯಿತು.
ಪಟ್ಟಣದ ಖಾಸಗಿ ಬಸ್ ನಿಲ್ದಾಣ ಸೇರಿದಂತೆ ವಿವಿಧ ಭಾಗದ 60 ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಡಳಿತಾಧಿಕಾರಿಗಳು ಹಾಗೂ ಅಧಿಕಾರಿಗಳು  ಚುನಾಯಿತ ಜನಪ್ರತಿನಿಧಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಹರಾಜಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದ ಸದಸ್ಯರು ಹರಾಜು ಪ್ರಕ್ರಿಯೆ ಮುಂದೂಡಿ ಹಾಗೂ ಸಭೆ ಕರೆಯಿರಿ ಎಂದು ಮನವಿ ಮಾಡಿದರೂ ಸ್ಪಂದಿಸದ ಆಡಳಿತಾಧಿಕಾರಿ ಕ್ರಮ ಸರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.  ಬೆಳಗ್ಗಿನಿಂದಲೇ ಪಂಚಾಯ್ತಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಡಳಿತಾಧಿಕಾರಿ  ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು.
12 ಗಂಟೆಗೆ ಆಗಮಿಸಿದ ಆಡಳಿತಾಧಿಕಾರಿಯನ್ನುದ್ದೇಶಿಸಿ ಮಾತನಾಡಿದ ಪ್ರತಿಭಟನಾಕಾರರು ಹಿಂದಿನ ಸಭೆಯಲ್ಲಿ ನಮ್ಮ ಅಭಿಪ್ರಾಯ ತಪ್ಪಾಗಿ ನಿರ್ಣಯ ಮಾಡಿದ್ದೀರಿ, ನಂತರ ಎರಡು ಸಭೆಗಳನ್ನು ಮುಂದೂಡಿದ್ದೀರಿ, ನಮ್ಮನ್ನು ಕಡೆಗಣಿಸಿ ಹರಾಜು ಕರೆದಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಹರಾಜು ಪ್ರಕ್ರಿಯೆಯನ್ನು ಮುಂದೂಡಿ ತಕ್ಷಣ ಸಭೆ ಕರೆಯಿರಿ ಎಂದು ಒತ್ತಾಯಿಸಿದರು.
ಇದಕ್ಕೆ ಆಡಳಿತಾಧಿಕಾರಿ ಪ್ರತಿಕ್ರಿಯಿಸಿ ನಾನು ಸರಿಯಾಗಿಯೇ ಮಾಡಿದ್ದೇನೆ, ಹರಾಜು ಮುಂದೂಡುವ ಪ್ರಶ್ನೆಯೇ ಇಲ್ಲ ಹಾಗೂ ಸಭೆಯ ಅವಶ್ಯಕತೆಯೂ ಇಲ್ಲ. ನನ್ನಿಂದ ತಪ್ಪಾಗಿದೆ ಎನ್ನುವುದಾದರೆ ಮೇಲಧಿಕಾರಿಗಳಿಗೆ ದೂರು ನೀಡಿ ಎಂದರು. ಇದು ಪ್ರತಿಭಟನಾಕಾರರನ್ನು ಮತ್ತಷ್ಟು ಕೆರಳಿಸಿತು. ಈ  ಸಂದರ್ಭ ಅಧಿಕಾರಿಯ ವಾಹನಕ್ಕೆ ಅಡ್ಡ ನಿಂತು ದಿಕ್ಕಾರ ಕೂಗಿದರು.
ಹಿಂತಿರುಗಿ ಬಂದ ಆಡಳಿತಾಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸದಸ್ಯರು ಸೆ.13ರ ಸಭೆಯಲ್ಲಿ ನಾವುಗಳು ಹರಾಜು ನಡೆಸುವಂತೆ ತಿಳಿಸಿಲ್ಲ. ಆದರೆ ನೀವು ನಿರ್ಣಯ ಕೈಗೊಂಡಿದ್ದೀರಿ, ನಂತರ ಎರಡು ಸಭೆಗಳಲ್ಲಿ ಹರಾಜಿನ ವಿಷಯವಿಟ್ಟು ಸಭೆ ಮುಂದೂಡಿದ್ದೀರಿ, ನಮ್ಮ ಗಮನಕ್ಕೆ ಬಾರದೆ ಏಕಾಏಕಿ ಹರಾಜು ಪ್ರಕಟಣೆ ನೀಡಿದ್ದೀರಿ.  ಜನರಿಂದ ಆಯ್ಕೆಯಾಗಿರುವ ನಾವು ಇರುವುದು ಯಾಕೆ ಎಂದು ಪ್ರಶ್ನಿಸಿದರು.
ಶಾಸಕರ ಸಮ್ಮುಖದಲ್ಲಿ ಸಭೆ ಕರೆಯಿರಿ ಎಂಬ ಒತ್ತಡಕ್ಕೆ ಮಣಿದ ಆಡಳಿತಾಧಿಕಾರಿಗಳು ಶನಿವಾರ ಸಭೆ ಕರೆಯುವುದಾಗಿ ತಿಳಿಸಿದರು. ಆದರೆ ಈ ಬಗ್ಗೆ ಲಿಖಿತವಾಗಿ ಭರವಸೆ ನೀಡುವಂತೆ ಸದಸ್ಯರು ಪಟ್ಟು ಹಿಡಿದರು. ಒಂದಷ್ಟು ಕಾಲ ಮಾತಿನ ಚಕಮಕಿ ನಡೆಯಿತು.
ಶನಿವಾರ ಸಭೆ ನಡೆಸುವುದಾಗಿ ತಿಳಿಸಿ ಹೊರ ನಡೆದರು.
ಪಟ್ಟಣ ಪಂಚಾಯ್ತಿ ಸದಸ್ಯರುಗಳಾದ ಚಂದ್ರು, ಸಂಜೀವ, ಮೃತ್ಯುಂಜಯ, ಮೋಹಿನಿ, ಶೀಲಾ ಡಿಸೋಜ, ಜೀವನ್, ಮಹೇಶ್, ನಾಗರತ್ನ ಹಾಗೂ ಶುಭಕರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಕಲ್ಪಿಸಿದ್ದರು.
Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಎಚ್1-ಎನ್1 : ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚನೆ*

ಆಗಷ್ಟ್ 29, 2026

*ಅರೆಭಾಷೆಗೆ ಸಾಂಸ್ಕೃತಿಕ ನೆಲೆಗಟ್ಟು, ವ್ಯಾಕರಣದ ಶಿಸ್ತು ರೂಢಿಸಿದವರು ಕೋಡಿ ಕುಶಾಲಪ್ಪ ಗೌಡರು : ಸದಾನಂದ ಮಾವಜಿ*

ಆಗಷ್ಟ್ 29, 2026

*ಅಂತರ ಶಾಲಾ ಶಟಲ್ ಬ್ಯಾಡ್ಮಿಂಟನ್: ಶ್ರೀ ರಾಜರಾಜೇಶ್ವರಿ ಶಾಲೆ ವಿದ್ಯಾರ್ಥಿಗಳ ಸಾಧನೆ*

ಆಗಷ್ಟ್ 29, 2026

*ಅರೆಭಾಷೆಗೆ ಸಾಂಸ್ಕೃತಿಕ ನೆಲೆಗಟ್ಟು, ವ್ಯಾಕರಣದ ಶಿಸ್ತು ರೂಢಿಸಿದವರು ಕೋಡಿ ಕುಶಾಲಪ್ಪ ಗೌಡರು : ಸದಾನಂದ ಮಾವಜಿ*

ಆಗಷ್ಟ್ 29, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, ಆ.29 NEWS DESK : ಅರೆಭಾಷೆಗೆ ಸಾಂಸ್ಕೃತಿಕ ನೆಲೆಗಟ್ಟನ್ನು ಹಾಕಿಕೊಟ್ಟು, ವ್ಯಾಕರಣದ ಶಿಸ್ತನ್ನು ರೂಢಿಸಿದವರು ಭಾಷಾ ವಿಜ್ಞಾನಿ ಡಾ.…

*ಅಂತರ ಶಾಲಾ ಶಟಲ್ ಬ್ಯಾಡ್ಮಿಂಟನ್: ಶ್ರೀ ರಾಜರಾಜೇಶ್ವರಿ ಶಾಲೆ ವಿದ್ಯಾರ್ಥಿಗಳ ಸಾಧನೆ*

ಆಗಷ್ಟ್ 29, 2026

ಕೊಡಗಿನಲ್ಲಿ ಕರವೇ ಸ್ವಾಭಿಮಾನಿ ಸೇನೆಗೆ ನೂತನ ಸದಸ್ಯರ ಸೇರ್ಪಡೆ

ಆಗಷ್ಟ್ 29, 2026

*ತೀವ್ರಗೊಳಿಸಿದ ಐಇಸಿ ಅಭಿಯಾನ : ಮ್ಯಾರಥಾನ್ ಮೂಲಕ ಎಚ್‌ಐವಿ/ಏಡ್ಸ್ ಜಾಗೃತಿ*

ಆಗಷ್ಟ್ 29, 2026

*ಮಡಿಕೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ : ಸ್ವಾವಲಂಬಿ ಮಹಿಳಾ ಫಲಾನುಭವಿಗಳ ಗುರುತಿಸಿ ಸನ್ಮಾನಕ್ಕೆ ಕ್ರಮ*

ಆಗಷ್ಟ್ 29, 2026

*ಶಿಸ್ತುಬದ್ಧ ಶಿಕ್ಷಣದಿಂದಲೇ ಸಮಾಜದ ಯಶಸ್ಸು, ದೇಶದ ಪ್ರಗತಿ : ಶಾಸಕ ಎ.ಎಸ್.ಪೊನ್ನಣ್ಣ*

ಆಗಷ್ಟ್ 29, 2026

*ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ: ಶಿಸ್ತುಬದ್ಧ ಜೀವನವೇ ಸಾಧನೆಯ ದಾರಿದೀಪ: ಕರ್ನಲ್ ಸಂಜೀವ್ ಕುಮಾರ್*

ಆಗಷ್ಟ್ 29, 2026

*ಕೊಡಗು ವಿದ್ಯಾಲಯದಲ್ಲಿ ಬ್ರಹ್ಮಗಿರಿ ಸಹೋದಯ ಸಿಬಿಎಸ್ಇ ಶಾಲೆಗಳ ಸಾಂಸ್ಕೃತಿಕ ಸ್ಪರ್ಧೆ*

ಆಗಷ್ಟ್ 29, 2026

*ಮಡಿಕೇರಿ ನಗರಸಭೆ : ತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ವಿಧಾನಕ್ಕೆ ಒತ್ತು : ಶಾಸಕ ಮಂತರ್ ಗೌಡ*

ಆಗಷ್ಟ್ 29, 2026

*ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆ : ಪರಿಶಿಷ್ಟರ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸುವುದು ಆದ್ಯ ಕೆಲಸವಾಗಿದೆ : ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ*

ಆಗಷ್ಟ್ 29, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.