Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮೂರ್ನಾಡಿನಲ್ಲಿ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳಿಗೆ ಅರಿವು*
  • *ಆ.28 ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ*
  • *ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಪೊನ್ನಣ್ಣ ಭೇಟಿ*
  • *ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಸಿಎಂ, ಶಾಸಕ ಪೊನ್ನಣ್ಣ ಭೇಟಿ*
  • *ದೊಡ್ಡಸ್ಥಿಕೆಯಿಂದ ಪದ್ಧತಿ–ಸಂಸ್ಕೃತಿಯ ಕಡೆಗಣನೆ ಸಲ್ಲದು : ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ*
  • *ಟೆಂಪೋ ಟ್ರಾವೆಲರ್ ಮೇಲೆ ಮಗುಚಿದ ಲಾರಿ : ನಾಲ್ವರಿಗೆ ಗಾಯ*
  • *ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಮೋಡ ಬಿತ್ತನೆ ಮಾಡಲ್ಲ*
  • *ಘಮ ಘಮಿಸಿದ ಆಟಿ ಹಬ್ಬದೂಟದ ಘಮಲು..! ಮಕ್ಕಂದೂರಿನಲ್ಲಿ ಗೌಡ ಮಹಿಳಾ ಒಕ್ಕೂಟದ ಆಟಿ ಜಂಬರ*
  • *ಸುಂಟಿಕೊಪ್ಪದಲ್ಲಿ ಸಂಭ್ರಮದ ಓಣಂ ಆಚರಣೆ*
  • *ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ.46.86 ಲಕ್ಷ ನಿವ್ವಳ ಲಾಭ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಜೇಡ್ಲ ಗೋಶಾಲೆಯಲ್ಲಿ ಗೋ ಅಪ್ಪುಗೆ ಕಾರ್ಯಕ್ರಮ : ಪಾಶ್ಚ್ಯಾತ್ಯತೆಯನ್ನು ಬಿಟ್ಟು ಸ್ವದೇಶೀಯತೆಯನ್ನು ಯುವ ಪೀಳಿಗೆ ಅಳವಡಿಸಿಕೊಳ್ಳಿ : ರಮಾದೇವಿ ಬಾಲಚಂದ್ರ ಕಳಗಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಜೇಡ್ಲ ಗೋಶಾಲೆಯಲ್ಲಿ ಗೋ ಅಪ್ಪುಗೆ ಕಾರ್ಯಕ್ರಮ : ಪಾಶ್ಚ್ಯಾತ್ಯತೆಯನ್ನು ಬಿಟ್ಟು ಸ್ವದೇಶೀಯತೆಯನ್ನು ಯುವ ಪೀಳಿಗೆ ಅಳವಡಿಸಿಕೊಳ್ಳಿ : ರಮಾದೇವಿ ಬಾಲಚಂದ್ರ ಕಳಗಿ*

ಫೆಬ್ರವರಿ 16, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಫೆ.16 NEWS DESK : ಶ್ರೀ ಮಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನ, ಶ್ರೀ ಸಂಸ್ಥಾನ ಗೋಕರ್ಣ, ಶ್ರೀರಾಮಚಂದ್ರಪುರ ಮಠ, ಮುಳ್ಳೇರಿಯಾ ಮಂಡಲ ಅಂತರ್ಗತ ಕೊಡಗು, ಸುಳ್ಯ, ಗುತ್ತಿಗಾರು ಹಾಗೂ ಈಶ್ವರ ಮಂಗಲ ವಲಯಗಳ ಸಂಯುಕ್ತ ಆಶ್ರಯದಲ್ಲಿ ಜೇಡ್ಲದಲ್ಲಿನ ಗೋಪಾಲಕೃಷ್ಣ ದೇವಕಿ ಪಶು ಸಂಗೋಪನ ಕೇಂದ್ರದಲ್ಲಿ ಎರಡನೇ ವರ್ಷದ ಗೋ ಅಪ್ಪುಗೆ ಕಾರ್ಯಕ್ರಮ ನಡೆಯಿತು.

ಗೋವುಗಳನ್ನು ಅಪ್ಪಿಕೊಳ್ಳುವ ಮೂಲಕ ವಿದ್ಯಾಥಿ೯ಗಳು ಹಸುವಿನ ಮಮತೆಯ ಮಹತ್ವ ಅರಿತರು.

ಸಂಪಾಜೆ ಗ್ರಾ.ಪಂ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಕಣ್ಮರೆಯಾಗುತ್ತಿರುವ ಹಸು ಸಾಕಾಣಿಕೆ ಹಾಗೂ ಗೋಪ್ರೇಮ ಇನ್ನು ಮುಂದೆ ಹೊಸ ಪೀಳಿಗೆಯಲ್ಲಿ ಮತ್ತೊಮ್ಮೆ ಕಾಣಿಸುವಂತಾಗಬೇಕು. ಆ ಮೂಲಕ ಜನರು ಮತ್ತೊಮ್ಮೆ ನೈಸರ್ಗಿಕ ಕೃಷಿ ಚಟುವಟಿಕೆ ಹಾಗೂ ಇನ್ನಿತರ ದೇಶೀಯ ಸ್ವಾವಲಂಬನೆ ಕಡೆಗೆ ಚಿತ್ತಹರಿಸುವಂತಾಗಬೇಕೆಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೇಡ್ಲ ಗೋಶಾಲೆಯ ಅಧ್ಯಕ್ಷ ಡಾ.ರಾಜಾರಾಮ್ ಮಾತನಾಡಿ, ಪಾಶ್ಚಾತ್ಯ ದೇಶದಲ್ಲಿ ಈಗ ಗೋ ಅಪ್ಪುಗೆ ಹಲವು ಕಾಯಿಲೆಗಳಿಗೆ ಮದ್ದೆಂದು ಕಂಡುಹಿಡಿದು ಇದನ್ನೇ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಭಾರತದಲ್ಲಿ ಇದು ನಿತ್ಯ ಚಟುವಟಿಕೆಯಾಗ ಬೇಕು, ಗೋವುಗಳ ಮೂತ್ರದಿಂದ ಉತ್ಪಾದಿಸಲಾದ ಉತ್ಪನ್ನಗಳು ದಿನನಿತ್ಯ ಬಳಕೆಗೆ ಬರುವಂತಾಗಬೇಕು, ಮತ್ತೊಮ್ಮೆ ನಮ್ಮ ಹಳ್ಳಿಯ ಬೇರು ಗಟ್ಟಿಯಾಗಿ ಊರು ಸುಭೀಕ್ಷೆ ಹೊಂದುವಂತಾಗಬೇಕು, ಅದಕ್ಕೆ ಯುವ ಪೀಳಿಗೆ ಶ್ರಮಿಸಬೇಕು ಎಂದು ಕಿವಿ ಮಾತು ಹೇಳಿದರು.

ಸಂಪಾಜೆ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ ಕಾರ್ಯಕ್ರಮದಲ್ಲಿ ಗೋಪೂಜೆಯನ್ನು ಮಕ್ಕಳು ಹಾಗೂ ಶಿಕ್ಷಕರು ಸಭಿಕರೊಂದಿಗೆ ನೆರವೇರಿಸಿದರು. ಗೋ ಮಾತೆಯನ್ನು ಅಪ್ಪುವ ಮೂಲಕ ಗೋವಿನ ಮಹತ್ವವನ್ನು ವಿದ್ಯಾಥಿ೯ಗಳು ತಿಳಿದುಕೊಂಡರು.

ಮುಖ್ಯ ಅತಿಥಿಗಳಾಗಿ ಸಂಪಾಜೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಲಕ್ಮಯ್ಯ ನಾಯಕ್ ಹಾಗೂ ಕಾಲೇಜಿನ ಸಂಚಾಲಕ ಎಂ ಎನ್ ಭಟ್ ಭಾಗವಹಿಸಿದ್ದರು.

ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾಥಿ೯ಗಳಿಗೆ ಬಹುಮಾನ ವಿತರಿಸಲಾಯಿತು. ಶ್ರೀರಾಮಚಂದ್ರಪುರ ಮಠದ ಮಾತೃತ್ವಂ ಸಂಸ್ಥೆಯಿಂದ ನೀಡಲಾದ 80 ಚೀಲ ಗೋ ಆಹಾರವನ್ನು ಆಡಳಿತ ಮಂಡಳಿಗೆ ಹಸ್ತಾಂತರಿಸಲಾಯಿತು.

ಕೊಡಗಿನ ಎನ್.ಐ.ಎಂ.ಎ ವತಿಯಿಂದ ಡಾಕ್ಟರ್ ನಿತಿನ್ ಆರೋಗ್ಯ ಸಲಹಾ ಉಚಿತ ಶಿಬಿರ ನಿವ೯ಹಿಸಿದರು. ಜೇಡ್ಲ ಗೋಶಾಲೆಯ ಖಜಾಂಚಿ ಈಶ್ವರ ಕುಮಾರ ಭಟ್ ಸ್ವಾಗತಿಸಿ, ಮುರಳಿ ಪಕಳಕುಂಜ ನಿರೂಪಿಸಿ, ಮುಳ್ಳೇರಿಯಾ ಮಂಡಲದ ಉಪಾಧ್ಯಕ್ಷ ನಾರಾಯಣ ಮೂರ್ತಿ ಕೆ.ಆರ್, ಕೊಡಗು ವಲಯದ ಕಾರ್ಯದರ್ಶಿ ಮಡಿಕೇರಿಯ ಶ್ರೀಪತಿ ಸಿ.ಕೆ, ನಾಗರಾಜ್, ಉದಯಕುಮಾರ್, ಸಂಪಾಜೆ ಪದವಿ ಪೂರ್ವ ಕಾಲೇಜಿನ ಶಿಕ್ಷಕರು, ಮಾತೃತ್ವಂ ಸದಸ್ಯೆಯರು,ಸಾರ್ವಜನಿಕರು ಹಾಗೂ ನಾಲ್ಕು ವಲಯದ ವಿವಿಧ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮೂರ್ನಾಡಿನಲ್ಲಿ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳಿಗೆ ಅರಿವು*

ಆಗಷ್ಟ್ 26, 2026

*ಆ.28 ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ*

ಆಗಷ್ಟ್ 26, 2026

*ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಪೊನ್ನಣ್ಣ ಭೇಟಿ*

ಆಗಷ್ಟ್ 26, 2026

*ಆ.28 ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ*

ಆಗಷ್ಟ್ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಆ.26 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದೊಂದಿಗೆ ಬ್ರಹ್ಮಶ್ರೀ…

*ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಪೊನ್ನಣ್ಣ ಭೇಟಿ*

ಆಗಷ್ಟ್ 26, 2026

*ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಸಿಎಂ, ಶಾಸಕ ಪೊನ್ನಣ್ಣ ಭೇಟಿ*

ಆಗಷ್ಟ್ 26, 2026

*ದೊಡ್ಡಸ್ಥಿಕೆಯಿಂದ ಪದ್ಧತಿ–ಸಂಸ್ಕೃತಿಯ ಕಡೆಗಣನೆ ಸಲ್ಲದು : ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ*

ಆಗಷ್ಟ್ 26, 2026

*ಟೆಂಪೋ ಟ್ರಾವೆಲರ್ ಮೇಲೆ ಮಗುಚಿದ ಲಾರಿ : ನಾಲ್ವರಿಗೆ ಗಾಯ*

ಆಗಷ್ಟ್ 26, 2026

*ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಮೋಡ ಬಿತ್ತನೆ ಮಾಡಲ್ಲ*

ಆಗಷ್ಟ್ 26, 2026

*ಘಮ ಘಮಿಸಿದ ಆಟಿ ಹಬ್ಬದೂಟದ ಘಮಲು..! ಮಕ್ಕಂದೂರಿನಲ್ಲಿ ಗೌಡ ಮಹಿಳಾ ಒಕ್ಕೂಟದ ಆಟಿ ಜಂಬರ*

ಆಗಷ್ಟ್ 26, 2026

*ಸುಂಟಿಕೊಪ್ಪದಲ್ಲಿ ಸಂಭ್ರಮದ ಓಣಂ ಆಚರಣೆ*

ಆಗಷ್ಟ್ 26, 2026

*ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ.46.86 ಲಕ್ಷ ನಿವ್ವಳ ಲಾಭ*

ಆಗಷ್ಟ್ 26, 2026

*ಕಸ್ತೂರಿ ರಂಗನ್ ವರದಿಯಿಂದ 53 ಗ್ರಾಮಗಳನ್ನು ಕೈಬಿಡಲು ಆಗ್ರಹ : ಸೆ.11ರಂದು ಬೃಹತ್ ಪ್ರತಿಭಟನೆ*

ಆಗಷ್ಟ್ 26, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.