Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಾ.15 ರಂದು ಮೂರ್ನಾಡು ಗೌಡ ಮಹಿಳಾ ಒಕ್ಕೂಟದಿಂದ ಮಹಿಳಾ ದಿನಾಚರಣೆ*
  • *ವಿರಾಜಪೇಟೆ ಶ್ರೀ ಮುತ್ತಪ್ಪ ದೇವಾಲಯದ ತೆರೆ ಮಹೋತ್ಸವಕ್ಕೆ ಚಾಲನೆ*
  • *ಫಾಸ್ಟ್ ಪುಡ್(ಚಾಟ್ಸ್ ಸೆಂಟರ್) ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ*
  • *ಕೋಟ್ಪಾ ಕಾಯ್ದೆ ಉಲ್ಲಂಘನೆ : 1800 ರೂ.ದಂಡ*
  • *ಸ್ವ-ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ*
  • *ಅಡುಗೆ ಅನಿಲದ ಕೊರತೆ : ಕೇಂದ್ರ ವಿರುದ್ಧ ಕುಶಾಲನಗರದಲ್ಲಿ ಪ್ರತಿಭಟನೆ*
  • *ಕನ್ನಡ ಸಾಹಿತ್ಯ ಸುದೀರ್ಘವಾದ ಕಾಲದಿಂದ ಜೀವಂತಿಕೆ ಉಳಿಸಿಕೊಂಡು ಬೆಳೆಯುತ್ತಿರುವ ಸಾಹಿತ್ಯ : ಪ್ರೊ.ಡಿ.ಕೆ.ಸರಸ್ವತಿ*
  • *ಸೋಮವಾರಪೇಟೆ : ಹೋಟೆಲ್ ಹಾಗೂ ಬೇಕರಿಗಳಿಗೆ ಆಹಾರ ನಿರೀಕ್ಷಕರ ಭೇಟಿ*
  • *ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನಕ್ಕೆ ಬೃಹತ್ ಗಾತ್ರದ ಸ್ಟೀಲ್ ಪಾತ್ರೆಯ ಕೊಡುಗೆ*
  • *ಮಾ.18 ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ : ಕೊಡಗಿನಲ್ಲಿ 6,183 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿಯ ರದ್ದತಿಯ ತೀರ್ಪಿನಲ್ಲಿ ಸಂವಿಧಾನ ಪೀಠವು ಭೂತಪೂರ್ವ ಕೊಡಗು ರಾಜ್ಯದ ಗತ ಇತಿಹಾಸವನ್ನು ದಾಖಲಿಸಿದೆ : ತೀರ್ಪು ಕೊಡವ ಲ್ಯಾಂಡ್ ಬೇಡಿಕೆಗೆ ಪುಷ್ಟಿ ನೀಡಿದೆ : ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದನೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿಯ ರದ್ದತಿಯ ತೀರ್ಪಿನಲ್ಲಿ ಸಂವಿಧಾನ ಪೀಠವು ಭೂತಪೂರ್ವ ಕೊಡಗು ರಾಜ್ಯದ ಗತ ಇತಿಹಾಸವನ್ನು ದಾಖಲಿಸಿದೆ : ತೀರ್ಪು ಕೊಡವ ಲ್ಯಾಂಡ್ ಬೇಡಿಕೆಗೆ ಪುಷ್ಟಿ ನೀಡಿದೆ : ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದನೆ*

ಮಾರ್ಚ್ 12, 20247 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮಾ.12 NEWS DESK : ಜಮ್ಮು ಮತ್ತು ಕಾಶ್ಮೀರದ 370 ನೇ ವಿಧಿಯ ರದ್ದತಿಯ ತೀರ್ಪಿನಲ್ಲಿ ಸಂವಿಧಾನ ಪೀಠವು ಭೂತಪೂರ್ವ ಕೊಡಗು ರಾಜ್ಯದ ಗತ ಇತಿಹಾಸವನ್ನು ದಾಖಲಿಸಿದೆ. ಈ ತೀರ್ಪು ಕೊಡವ ಲ್ಯಾಂಡ್ ಬೇಡಿಕೆಗೆ ಪುಷ್ಟಿ ನೀಡಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸುಪ್ರೀಂ ಕೋರ್ಟ್‍ನ ಸಾಂವಿಧಾನಿಕ ಪೀಠದಿಂದ 2023 ಡಿ.11 ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಕುರಿತು ಮಹತ್ವದ ಸುಪ್ರೀಂ ಕೋರ್ಟ್ ತೀರ್ಪು ಹೊರ ಬಿದ್ದಿದ್ದು, ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯತ್ವವನ್ನು ಮರುಸ್ಥಾಪಿಸಲು ಶಿಫಾರಸ್ಸು ಮಾಡಿದೆ. ಕಾಶ್ಮೀರದ ಜೊತೆಗೆ ಕರ್ನಾಟಕ ಸರ್ಕಾರ ಕೂಡ ಇದೇ ರೀತಿ ಮಾಡಬೇಕೆನ್ನುವುದು ಖಾತರಿಯಾಗಿದೆ. ಆದ್ದರಿಂದ ಸಂವಿಧಾನದ ಆರ್ಟಿಕಲ್ 244 ಆರ್/ಡಬ್ಲ್ಯೂ 6ನೇ ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಲಡಾಖ್ ಹಾಗೂ ಲೇಹ್ ಬೌದ್ಧ ಸ್ವಾಯತ್ತ ಮಂಡಳಿಗಳು ಮತ್ತು ಪ್ರದೇಶಗಳ ಸಾಲಿನಲ್ಲಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯನ್ನು ಸೃಷ್ಟಿಸಬೇಕು ಎಂದು ಒತ್ತಾಯಿಸಿದ್ದಾರೆ.
370 ನೇ ವಿಧಿಯ ರದ್ದತಿಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಜಮ್ಮು ಮತ್ತು ಕಾಶ್ಮಿರದ ವಿಶೇಷ ಸ್ಥಾನಮಾನದ ರದ್ದತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಕೂರ್ಗ್ ರಾಜ್ಯವನ್ನು ಹೊರತುಪಡಿಸಿ ಎಲ್ಲಾ “ಸಿ” ರಾಜ್ಯಗಳು ಅದರ ಹಣಕಾಸಿನ ನೆರವಿಗಾಗಿ ಕೇಂದ್ರದ ಮೇಲೆ ಹೆಚ್ಚು ಅವಲಂಬಿತವಾಗಿವೆ. ಅದರ ಹೊರತಾಗಿಯೂ ತ್ರಿಪುರಾ, ದೆಹಲಿ, ಹಿಮಾಚಲ ಮತ್ತು ಮಣಿಪುರದ ಭಾಗ “ಸಿ” ರಾಜ್ಯತ್ವದ ಸ್ಥಾನಮಾನವನ್ನು ಉಳಿಸಿಕೊಂಡಿವೆ ಮತ್ತು ನಂತರ ಭಾರತದ ಇತರ ಪ್ರಮುಖ ಪ್ರಾಂತೀಯ ರಾಜ್ಯಗಳಿಗೆ ಸಮಾನವಾಗಿ ಪ್ರಮುಖ ರಾಜ್ಯಗಳಾಗಿ ಬಡ್ತಿ ನೀಡಲಾಯಿತು.
ವಿಪರ್ಯಾಸವೆಂದರೆ, ಹೆಚ್ಚು ಅವಲಂಬಿತ ರಾಜ್ಯಗಳನ್ನು ಸ್ವತಂತ್ರ ರಾಜ್ಯಗಳಾಗಿ ಮಾಡಲಾಯಿತು. ಏಕೈಕ ಸ್ವಾವಲಂಬನೆ, ಸ್ವಾಭಿಮಾನಿ ಮತ್ತು ಸ್ವತಂತ್ರ ರಾಜ್ಯವಾದ ಕೂರ್ಗ್ ಕರ್ನಾಟಕ ರಾಜ್ಯಕ್ಕೆ ಕೇವಲ ಜಿಲ್ಲೆಯಾಗಿ ಅಧೀನವಾಯಿತು. ಇದೊಂದು ಅಂತಾರಾಷ್ಟ್ರೀಯ ಪಿತೂರಿ ಮತ್ತು 20ನೇ ಶತಮಾನದ ಬಹುದೊಡ್ಡ ಭೂ ರಾಜಕೀಯ ಉತ್ಪಾತವಾಗಿದೆ ಎಂದು ಆರೋಪಿಸಿದ್ದಾರೆ.
ಸಾಂವಿಧಾನಿಕ ಪೀಠವು ಗಮನಿಸಿದಂತೆ, ಕೊಡವ ತಾಯ್ನಾಡಿನ ಹಿಂದಿನ ಕೂರ್ಗ್ ರಾಜ್ಯವು ಭಾರತದ ಆರು ‘ಸಿ’ ರಾಜ್ಯಗಳಲ್ಲಿ ಕೇಂದ್ರ/ಭಾರತೀಯ ಒಕ್ಕೂಟದ ಆರ್ಥಿಕ ಅವಲಂಬನೆ ಮತ್ತು ಸಹಾಯವಿಲ್ಲದೆ ಸ್ವಂತವಾಗಿ ಆಡಳಿತ ನಡೆಸುವ ಸಾಮಥ್ರ್ಯವನ್ನು ಹೊಂದಿರುವ ಏಕೈಕ ‘ಸಿ’ ರಾಜ್ಯವಾಗಿತ್ತು. ಸುಪ್ರೀಂ ಕೋರ್ಟ್ ನ ಈ ಐತಿಹಾಸಿಕ ತೀರ್ಪು ಸ್ವಾಯತ್ತ ಕೊಡವ ತಾಯ್ನಾಡಿನ ಸಿಎನ್‍ಸಿ ಬೇಡಿಕೆಗೆ ಒಂದು ಗರಿ ಮೂಡಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ
ಜಮ್ಮು ಮತ್ತು ಕಾಶ್ಮೀರ ದ ಆರ್ಟಿಕಲ್ 370 ನೇ ವಿಧಿಯ ರದ್ದತಿಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂಪಡೆಯಲಾಗಿದೆ. ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವ ಸ್ಥಿತಿಯನ್ನು ಸಹ ಮರುಸ್ಥಾಪಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯವು ಕೊಡವ ಹೋಮ್‍ಲ್ಯಾಂಡ್‍ನ ಭೂತಕಾಲದ ಅದ್ಭುತ ಮತ್ತು ವೈಭವಯುತ ಅಸ್ತಿತ್ವವನ್ನು ನೆನಪಿಸಿದೆ. ಭಾರತದ 6 ‘ಸಿ’ ರಾಜ್ಯಗಳ ಪೈಕಿ ಕೇಂದ್ರದ ಸರ್ಕಾರದ ಬೆಂಬಲವಿಲ್ಲದೆ ಸರ್ವತಂತ್ರ ಸ್ವತಂತ್ರವಾಗಿ ಆರ್ಥಿಕ ಸ್ವಾವಲಂಭನೆಯಿಂದ ಆಡಳಿತ ನಡೆಸಿದ ಏಕೈಕ ರಾಜ್ಯವೆಂದು ಕೊಡಗನ್ನು ಪ್ರಸ್ತಾಪಿಸಿ ಉಲ್ಲೇಖಿಸಲಾಗಿದೆ. ಇದು 1956 ರವರೆಗೆ ಆಳ್ವಿಕೆ ನಡೆಸಿದ ಕೊಡಗು “ಸಿ” ರಾಜ್ಯದ ಕಲ್ಯಾಣ ರಾಜ್ಯ ಆಡಳಿತದ ಹೆಮ್ಮೆಯ ಹೆಗ್ಗುರುತಿನ ಸ್ಮರಣೆಯಾಗಿದೆ.
ಸುಪ್ರಿಂ ಕೋರ್ಟ್‍ನ ಐತಿಹಾಸಿಕ ತೀರ್ಪಿನಿಂದ ಆದಿಮಸಂಜಾತ ದೇಶಭಕ್ತ ಕೊಡವರಾದ ನಾವು ನ್ಯಾಯಯುತ ತೀರ್ಮಾನಗಳಿಂದ ವಿನಮ್ರರಾಗಿದ್ದೇವೆ. ಈ ಮಹತ್ವ ಪೂರ್ಣ ತೀರ್ಪಿನಿಂದಾಗಿ ನಮ್ಮ ಶಾಂತಿಯುತ ಪ್ರತಿಪಾದನೆಗೆ ಕಿರೀಟವಿಟ್ಟಂತಾಗಿದೆ. ಸಿ.ಎನ್.ಸಿ 34 ವರ್ಷಗಳಿಂದ ನಡೆಸುತ್ತಿರುವ ಶಾಸನ ಬದ್ಧ ಹಕ್ಕೊತ್ತಾಯ ಫಲಪ್ರಬವಾದರೆ ಭಾರತದ ಒಕ್ಕೂಟದ ಮೇಲೆ ಅವಲಂಬಿತವಾಗದೆ ಕೊಡವ ನೆಲದ ಆರ್ಥಿಕ ಕಾರ್ಯಸಾಧ್ಯತೆ ಮತ್ತು ರಾಜಕೀಯ ಸ್ವಾಯತ್ತತೆಯ ಮೂಲಕ ಅದರ ರಾಜಕೀಯ-ಆಡಳಿತಾತ್ಮಕ ಸ್ಥಾನಮಾನವನ್ನು ಮರುಸ್ಥಾಪಿತವಾಗಲಿದೆ.
ಭಾರತದ ಉಕ್ಕಿನ ಮನುಷ್ಯ, ಸರ್ದಾರ್ ವಲ್ಲಭಬಾಯಿ ಪಟೇಲ್ ಮತ್ತು ಭಾರತದ ಮಾಜಿ ಗವರ್ನರ್ ಜನರಲ್ ಚಕ್ರವರ್ತಿ ರಾಜ್ ಗೋಪಾಲಾಚಾರಿ ಇಬ್ಬರೂ ಕೊಡಗು ರಾಜ್ಯ ಅರ್ಥಾತ್ ಕೊಡವ ನೆಲ ಮತ್ತು ಅದರ ದೇಶಭಕ್ತ ಯೋಧರಾದ ಕೊಡವರ ಅಸ್ತಿತ್ವವನ್ನು ಮೆಚ್ಚಿದ್ದಾರೆ ಮತ್ತು ಅದರ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಸಿದ್ಧರಿದ್ದರು. ಆದಾಗ್ಯೂ, ಆ ಸಮಯದಲ್ಲಿ ರಾಷ್ಟ್ರವನ್ನು ಮುನ್ನಡೆಸುತ್ತಿದ್ದವರಲ್ಲಿ ಕೊಳಕು ರಾಜಕೀಯ ಲಾಭದಾಯಕತೆಯ ಕಾರಣದಿಂದಾಗಿ ಎಲ್ಲಾ ಭರವಸೆಗಳು ಶೂನ್ಯವಾದವು ಎಂದು ನಾಚಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರವು ವಾಯುವ್ಯ ಭಾರತದಲ್ಲಿದ್ದರೆ, ಕೊಡವಲ್ಯಾಂಡ್ ನೈಋತ್ಯ ಭಾರತದಲ್ಲಿ ನೆಲೆಗೊಂಡಿದೆ. ಸ್ಥಳಾಕೃತಿಗಳು ಸಾಮ್ಯತೆಯನ್ನು ಹೋಲುತ್ತವೆ. ಕಾಶ್ಮೀರವು ಹಿಮಾಲಯ ಪರ್ವತ ಶ್ರೇಣಿಯಿಂದ ಆವರಿಸಲ್ಪಟ್ಟಿದೆ, ಇದು ಪಾಕಿಸ್ತಾನಕ್ಕೆ ಹೊಂದಿಕೊಂಡಿದೆ, ನೈಋತ್ಯದಲ್ಲಿ ಪಿರ್ಪಿಂಜಾಲ್ ಶ್ರೇಣಿ ಮತ್ತು ವಾಯುವ್ಯದಲ್ಲಿ ಹಿಮಾಲಯ ಶ್ರೇಣಿಯಿಂದ ಸುತ್ತುವರಿದಿದೆ. ಇದು ನಿರಂತರ ಆರು ತಿಂಗಳ ಕಾಲ ಭಾರೀ ಹಿಮಪಾತವನ್ನು ಅನುಭವಿಸುತ್ತದೆ. ಕೊಡವಲ್ಯಾಂಡ್ ತ್ರಿಭುಜ ಸಾಂಸ್ಕೃತಿಕ ಪ್ರದೇಶಗಳಾದ ಮೈಸೂರು ಪ್ರಸ್ತಭೂಮಿ, ಮಲೆಯಾಳಂ ಪ್ರದೇಶದ ಮಲಬಾರ್ ಪರ್ವತ ಶ್ರೇಣಿ ಮತ್ತು ತುಳು ನಾಡಿನಿಂದ ಸುತ್ತುವರೆದಿದೆ. ಕೊಡವಲ್ಯಾಂಡ್ ಮಂಜಿನಿಂದ ಕೂಡಿದ ಪರ್ವತ ಭೂಪ್ರದೇಶಗಳಿಂದ ಆವೃತವಾಗಿದೆ ಮತ್ತು ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಗಿರಿಕಂದರಗಳು ಮತ್ತು ದಟ್ಟಾರಣ್ಯಗಳ ಇಳಿಜಾರು ಪ್ರದೇಶಗಳಿಂದ ಕೂಡಿದೆ. ಆರು ತಿಂಗಳ ಧಾರಾಕಾರ ಮಳೆಯೊಂದಿಗೆ ಭಾರೀ ಮುಂಗಾರು ಮಾರುತವನ್ನು ಅನುಭವಿಸುತ್ತಿದೆ. ಕಾಶ್ಮೀರವನ್ನು ಭಾರತದ ಸ್ವಿಟ್ಜರ್ಲೆಂಡ್ ಎಂದು ಕರೆಯಲಾಗುತ್ತದೆ. ಕೊಡವಲ್ಯಾಂಡ್ ಕೂರ್ಗ್ ಅನ್ನು ಭಾರತದ ಸ್ಕಾಟ್ಲ್ಯಾಂಡ್ ಮತ್ತು ಕರ್ನಾಟಕದ ಕಾಶ್ಮೀರ ಎಂದು ಕರೆಯಲಾಗುತ್ತದೆ.
ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ಮಾತ್ರ ಹೇಗೆ ಆದಿಮಸಂಜಾತರೋ ಅದೇ ರೀತಿ ಕೊಡವರು ಕೂಡ. ಕೊಡವರು ಕೊಡವಲ್ಯಾಂಡ್‍ಗೆ ಮಾತ್ರ ಆದಿಮಸಂಜಾತರು, ಕೊಡವಲ್ಯಾಂಡ್ ಹೊರತುಪಡಿಸಿ, ಕೊಡವಲ್ಯಾಂಡ್‍ನ ಹೊರಗೆ ಕೊಡವರಿಗೆ ಯಾವುದೇ ಸಾಂಸ್ಕೃತಿಕ ಬೇರಿನ ಮೂಲವಿಲ್ಲ. ಭಾರತದ ವಿವಿಧ ಭಾಗಗಳಿಂದ ಐದು ಹಂತಗಳಲ್ಲಿ ತಮ್ಮ ಆಳರಸರ ಜೊತೆಯಲ್ಲಿ ಬಂದು ಕೊಡಗಿನಲ್ಲಿ ನೆಲೆಸಿದವರು. ಈಗ ಅವರು ರಾಜ್ಯದ ಪ್ರಬಲ ಆಡಳಿತಗಾರರಾದ ರಾಜ್ಯದ ತಮ್ಮ ಸಹವರ್ತಿಗಳ ಜನಸಂಖ್ಯಾ ತೂಕದ ಮೂಲಕ ಸಕ್ರಿಯ ರಾಜಕೀಯ ಮತ್ತು ರಾಜ್ಯ ಬೆಂಬಲದೊಂದಿಗೆ ಸ್ಥಳೀಯ ಕೊಡವ ಸಂಸ್ಕೃತಿಯನ್ನು ಮರೆಮಾಚಿದ್ದಾರೆ, ಬದಲಿಗೆ ನುಂಗಿದ್ದಾರೆ. ಈಗ ಅವರು ಕೊಡವ ಸಂಸ್ಕೃತಿ ಮತ್ತು ಸೀಮೆಯ ಪಾಲಕರು ಮತ್ತು ಕೊಡವ ಎಂದರೆ ತಾವೇ ಎಂದು ಪ್ರತಿಬಿಂಬಿಸಿಕೊಳ್ಳುತ್ತಾರೆ ಮತ್ತು ನಟಿಸುತ್ತಾರೆ. ಕೊಡವರ ಅವಿಭಾಜ್ಯ ಮತ್ತು ಸಾಂಪ್ರದಾಯಿಕ ತಾಯಿ ನಾಡು ಕೊಡಗು ‘ಸಿ’ ರಾಜ್ಯ 1956 ರಲ್ಲಿ ವಿಲೀನವಾಯಿತು.
ನಿಜವಾದ ಆದಿಮಸಂಜಾತ ಕೊಡವರ ನ್ಯಾಯಸಮ್ಮತ ಆಕಾಂಕ್ಷೆಗಳು ಹಿಂದಿನ ಸೀಟಿಗೆ ಹೋದವು ಮತ್ತು ಸೂಕ್ಷ್ಮ ಕೊಡವರು ಮಂಡಿಸಿದ ಸಾಂವಿಧಾನಿಕ ಹಕ್ಕನ್ನು ನಿರ್ಲಕ್ಷಿಸಲಾಗಿದೆ, ತಾರತಮ್ಯದಿಂದ ನೋಡಲಾಗಿದೆ, ಅಂಚಿನಲ್ಲಿಡಲಾಗಿದೆ, ಕಡೆಗಣಿಸಲಾಗಿದೆ ಮತ್ತು ಅಗೌರವಿಸಲಾಗಿದೆ. ಕೊಡವರ ವಿಷಯದಲ್ಲಿ ಮುಂದುವರಿದ ಸಾಂವಿಧಾನಿಕ ಮತ್ತು ಆಡಳಿತಾತ್ಮಕ ಉಲ್ಲಂಘನೆ ಸಂಭವಿಸಿದೆ. ಈಗ ಕೊಡವರ ಬಗ್ಗೆ ರಾಜ್ಯದ ನಿರಾಸಕ್ತಿಯಿಂದಾಗಿ ಕೊಡವ ಯುವಕರ ದೊಡ್ಡ ಪ್ರಮಾಣದ ವಲಸೆ ನಡೆಯುತ್ತಿದೆ ಎಂದು ಗಮನ ಸೆಳೆದಿದ್ದಾರೆ.
12ನೇ ಶತಮಾನದಲ್ಲಿ ಕಲ್ಹಣ ಬರೆದ “ರಾಜತರಂಗಿಣಿ” ಕಾಶ್ಮೀರಿ ಪಂಡಿತರ ಶ್ರೇಷ್ಠ ಗ್ರಂಥವಾಗಿದೆ. ಅಂತೆಯೇ ಕೊಡವರು ತಮ್ಮದೇ ಆದ “ಪಟ್ಟೋಲೆ ಪಳಮೆ” ಎಂಬ ಜಾನಪದ ಗ್ರಂಥವನ್ನು ಹೊಂದಿದ್ದಾರೆ. ಇದು ನಮ್ಮ ಪೂಜ್ಯ ಪೂರ್ವಜರಿಂದ ರಚಿಸಲ್ಪಟ್ಟಿದ್ದು, ನಡಿಕೇರಿಯಂಡ ಚಿನ್ನಪ್ಪ ಅವರಿಂದ ಸಂಕಲಿಸಲ್ಪಟ್ಟಿದೆ. ಇದು ದಕ್ಷಿಣ ಭಾರತದ ಮೊದಲ ಸಾಹಿತ್ಯಿಕ ಜಾನಪದ ಪಠ್ಯವೆಂದು ಕರೆಯಲ್ಪಡುತ್ತದೆ. ಕಾಶ್ಮೀರಿ ಪಂಡಿತರು ಚಾಂದ್ರಮಾನ ಕ್ಯಾಲೆಂಡರ್ ಅನ್ನು ಅನುಸರಿಸುತ್ತಾರೆ ಮತ್ತು ಮಾರ್ಚ್‍ನಲ್ಲಿ “ನವೇಶ್” ಅನ್ನು ತಮ್ಮ ಹೊಸ ವರ್ಷವನ್ನಾಗಿ ಆಚರಿಸುತ್ತಾರೆ. ಕೊಡವರು ಸೌರಮಾನ ಕ್ಯಾಲೆಂಡರ್ ಅನ್ನು ಅನುಸರಿಸುತ್ತೇವೆ ಮತ್ತು ಎಡ್ಮ್ಯಾರ್ 1 ಅನ್ನು ಕೊಡವ ಹೊಸ ವರ್ಷವಾಗಿ ಆಚರಿಸುತ್ತೇವೆ ಅದು ಏಪ್ರಿಲ್ 14 ರಂದು ಬರುತ್ತದೆ. ಕಾಶ್ಮೀರಿ ಪಂಡಿತರು ಸಾರಿಕಾ ದೇವಿಗೆ ನೈವೇದ್ಯಗಳನ್ನು ಅರ್ಪಿಸುತ್ತಾರೆ. ನಾವು ಕೊಡವರು ನಮ್ಮ ಗುರು-ಕರೋಣರಿಗೆ ಅರ್ಪಣೆಗಳನ್ನು ಅರ್ಪಿಸುತ್ತೇವೆ. ಅವರು ಶಾರದಾ ದೇವಿ ಮತ್ತು ಅದೃಶ್ಯ ಸರಸ್ವತಿ ನದಿಯನ್ನು ಪೂಜಿಸುತ್ತಾರೆ. ಅವರು ಶಾರದಾ ಪೀಠವನ್ನು ತಮ್ಮ ಪವಿತ್ರ ಯಾತ್ರಾಸ್ಥಳವೆಂದು ಪರಿಗಣಿಸುತ್ತಾರೆ. ವೇದ ಕಾಲದ 7 ಪವಿತ್ರ ನದಿಗಳಲ್ಲಿ ಸರಸ್ವತಿಯೂ ಒಂದು (ಸಸ್ರ್ವತಿ, ಸಿಂಧು, ಗಂಗಾ, ಯೆಮುನಾ, ನರ್ಮದಾ, ಗೋದಾವರಿ, ಕಾವೇರಿ). ನಾವು ಕೊಡವರು ಕಾವೇರಿಯನ್ನು ಪೂಜಿಸುತ್ತೇವೆ ಮತ್ತು ಆಕೆಯ ಜನ್ಮ ಸ್ಥಳವಾದ ದಿವ್ಯ ಜಲಧಾರೆ ಪವಿತ್ರ ತೀರ್ಥಯಾತ್ರೆಯ ಸ್ಥಳವೆಂದು ಪರಿಗಣಿಸಿದ್ದೇವೆ ಎಂದು ತಿಳಿಸಿದ್ದಾರೆ.
ಪಂಡಿತರ 2ನೇ ಪ್ರಮುಖ ಪುಣ್ಯಕ್ಷೇತ್ರ ವೈಷ್ಣವೋದೇವಿ, ಅದೇ ರೀತಿ ನಮ್ಮ 2ನೇ ಪ್ರಮುಖ ಪುಣ್ಯಕ್ಷೇತ್ರ ಕೊಡವರ ದೇಶ ಮಂದ್, ಕೊಡವರ ಪ್ರತೀ ಗ್ರಾಮ, ನಾಡ್, ಮಂದ್‍ಗಳು ಹಾಗೂ ಶ್ರೀ ಪಾಡಿ ಇಗ್ಗತ್ತಪ್ಪ ದೇವನೆಲೆ ಈಗ ಎಲ್ಲಾ ಆಯಕಟ್ಟಿನ ಸ್ಥಳಗಳು ಮತ್ತು ಧಾರ್ಮಿಕ ಸ್ಥಳಗಳು, ಪಂಡಿತರಿಗೆ ಸೇರಿದ ಪ್ರಾಚೀನ ಜಮೀನುಗಳು ದೇಶದ್ರೋಹಿಗಳ ವಶದಲ್ಲಿವೆ.
ಕೊಡವ ಸೀಮೆಯಲ್ಲಿ ಎಲ್ಲಾ ದೇಗುಲಗಳು, ಗರ್ಭಗುಡಿಗಳು, ಪ್ರತಿಷ್ಠಿತ ಭೂಮಿಗಳು ಭೂ ಕಬ್ಜಗಾರರು ಹಾಗೂ ಅಂತರ್ ರಾಷ್ಟ್ರೀಯ ದ್ರೋಹಿ ಪಿತೂರಿಗಾರರ ನಿಯಂತ್ರಣದಲ್ಲಿದೆ ಎಂದು ನಾಚಪ್ಪ ಆರೋಪಿಸಿದ್ದಾರೆ. ಕಾಶ್ಮೀರದಲ್ಲಿ ಪಂಡಿತರ ರೂಪುರೇಷೆ ಮಾತ್ರ ಬಾಕಿ ಉಳಿದಿದೆ. ಹಾಗೆಯೇ ಕೂರ್ಗ್‍ನಲ್ಲಿ ಕೊಡವ ರೂಪರೇಖೆ ಮತ್ತು ಪ್ರಾಂತ್ಯ ಮಾತ್ರ ಬಾಕಿ ಉಳಿದಿದೆ.
ಕೊಡವಲ್ಯಾಂಡ್‍ನಲ್ಲಿ ಮೈಸೂರು ಗಡಿ ಮತ್ತು ಮಲಬಾರ್ ಗಡಿಗಳು ನಕ್ಸಲರ ಅಟ್ಟಹಾಸದಿಂದ ಸುತ್ತುವರೆದಿವೆ. 1969-70ರಲ್ಲಿ ಕುಟ್ಟ, ಕರಿಕೆ, ಮಾಕುಟ್ಟಾ ಪ್ರದೇಶದಲ್ಲಿ ನಕ್ಸಲ್ ಅಶಾಂತಿ ದೊಡ್ಡ ಮಟ್ಟದಲ್ಲಿತ್ತು. ಕರ್ನಾಟಕ ಮೀಸಲು ಪೊಲೀಸ್ ಪಡೆ ಈಗಲೂ ಕೂಂಬಿಂಗ್ ಕಾರ್ಯಾಚರಣೆಯನ್ನು ನಿಯಮಿತವಾಗಿ ನಡೆಸುತ್ತಿದೆ. ನಕ್ಸಲೀಯರು ನಮ್ಮ ಕೊಡವ ವಿಶೇಷ ಗನ್ ವಿನಾಯಿತಿಗೆ ಹೆದರುತ್ತಾರೆ ಮತ್ತು ಭಯಬೀಳುತ್ತಾರೆ. ಇಲ್ಲದಿದ್ದರೆ ಅವರು ಬಹಳ ಹಿಂದೆಯೇ ಕೊಡವ ಸೀಮೆಗೆ ನುಸುಳುತ್ತಿದ್ದರು. ಈ ಸಂಬಂಧ ಸೂಕ್ತ ಸಮಯಕ್ಕಾಗಿ ಹೊಂಚು ಹಾಕುತ್ತಿದ್ದಾರೆ. ಕೊಡವ ಸಮುದಾಯದ ಗನ್ ಹಕ್ಕುಗಳನ್ನು ಒಮ್ಮೆ ತೆಗೆದುಹಾಕಿದರೆ ರಾಷ್ಟ್ರ ವಿರೋಧಿ ನಕ್ಷಲೀಯರು ಈ “ಪವಿತ್ರ” ಭೂಮಿಯನ್ನು ಸುಲಭವಾಗಿ ಹಿಡಿತ ಸಾಧಿಸಬಹುದು ಮತ್ತು ಅರಾಜಕತೆಯನ್ನು ಸೃಷ್ಟಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೊಡಗು ರಾಜ್ಯ ವಿಲೀನದ ಸಮಯದಲ್ಲಿ, ಮಹಾನ್ ಸೇನಾನಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಕೇಂದ್ರ ಸರ್ಕಾರವನ್ನು ಎಚ್ಚರಿಸಿದರು. ನಮ್ಮ ನೆರೆಹೊರೆಯ ರಾಜ್ಯ ಮತ್ತು ಸರ್ಕಾರವು ಕಮ್ಯುನಿಸ್ಟ್ ಆಗಿದೆ. ಕೊಡಗು ಆಯಕಟ್ಟಿನ ಪ್ರದೇಶದಲ್ಲಿದೆ. ನೀವು ಅದನ್ನು ದೊಡ್ಡ ರಾಜ್ಯಕ್ಕೆ ವಿಲೀನಗೊಳಿಸಿದರೆ ಅದು ಪ್ರಮಾದವಾಗುತ್ತದೆ ಏಕೆಂದರೆ ಈ ದೇಶದ್ರೋಹಿ ನಕ್ಸಲರು ಆಶ್ರಯ ಪಡೆಯುವ ಅಂಶವನ್ನು ಒತ್ತಿ ಹೇಳಿದಲ್ಲದೆ ಅದರಿಂದ ನಡೆಯುವ ಬುಡಮೇಲು ಕೃತ್ಯದಿಂದ ದುರಂತವನ್ನು ಸೃಷ್ಟಿಸುತ್ತವೆ, ಆದರೆ ಅವರ ಬುದ್ಧಿವಂತ ವಿವೇಕಯುತ ಎಚ್ಚರಿಕೆಯನ್ನು ಆಗಿನ ಆಡಳಿತಗಾರರು ನಿರ್ಲಕ್ಷಿಸಿದರು.
ಅಂತರಾಷ್ಟ್ರೀಯ ರಂಗದಲ್ಲಿ ಟಿಬೆಟ್, ಉಯಿಘುರ್, ಬಲೋಚ್, ಯಹೂದಿಗಳು, ಸ್ಥಳೀಯ ಅಮೆರಿಕನ್ನರು(ರೆಡ್ ಇಂಡಿಯನ್ನರು) ಯೆಜಿದಿಗಳು ಮತ್ತು ಕುರ್ದಿಗಳು. ಭಾರತೀಯ ಸನ್ನಿವೇಶದಲ್ಲಿ, ಗೂರ್ಖಾ, ಸಿಖ್, ಪಂಡಿತರು, ಮೈಯಿತಿ ಮತ್ತು ಕೊಡವ ಅಶೋತ್ತರಗಳು ಅವರಿಗೆ ಸಕಾರಣವಾಗಿ ಕಾಣುವುದಿಲ್ಲ. ಅವರುಗಳ ಅಶೋತ್ತರಗಳು, ಅಭಿವ್ಯಕ್ತಿಗಳು ರಾಕ್ಷಸೀಯವಾಗುತ್ತವೆ. ಸಿಖ್, ಗೂರ್ಖಾ, ಕೊಡವ, ಮೈಯಿತಿ ಮತ್ತು ಪಂಡಿತರು ಅತಿ-ದೇಶಭಕ್ತಿಯ ಸಮುದಾಯಗಳು ಮತ್ತು ಅವರು ಯಾವಾಗಲೂ ರಾಷ್ಟ್ರದೊಂದಿಗೆ ನಿಲ್ಲುತ್ತಾರೆ, ಆದರೆ ಅವರ ಕಾನೂನುಬದ್ಧ ಆಕಾಂಕ್ಷೆಗಳನ್ನು ತಪ್ಪಾಗಿ ಅರ್ಥೈಸಲಾಗುತ್ತದೆ ಮತ್ತು ಅವರ ಬೇಡಿಕೆಗಳನ್ನು ದೇಶದ್ರೋಹ, ವಿದ್ರೋಹ ಮತ್ತು ರಾಜದ್ರೋಹ ಎಂದು ಬ್ರಾಂಡ್ ಮಾಡಲಾಗುತ್ತದೆ.
ಕಾವೇರಿ ಜಲ ಉತ್ಪಾಧಿಸುವ ಕೊಡವ ಲ್ಯಾಂಡ್ ಅರ್ಥಾತ್ ಕೊಡಗು ಮತ್ತು ಕೊಡವರು ಒಂದು ತೊಟ್ಟು ಕಾವೇರಿ ನೀರು ಬಳಸಬಾರದು ಎನ್ನುವ ಮಧ್ಯಯುಗೀಯ ಮನಸ್ಥಿತಿಯ ಸುತ್ತೋಲೆಯನ್ನು ಜಿಲ್ಲಾಡಳಿತ ಹೊರಡಿಸಿದೆ. ಸರ್ಕಾರ ಕೊಡಗನ್ನು ಕರ್ನಾಟಕಕ್ಕೆ ಕಪ್ಪ ಒಪ್ಪಿಸುವ ಸಾಮಂತನೆಂದು ಮೈಸೂರಿಗರು ಕೊಡಗನ್ನು ಯುದ್ಧದಲ್ಲಿ ಗೆದ್ದ ಆಕ್ರಮಿತ ವಸಹಾತು ಎಂದು ಇಲ್ಲಿನ ಸರ್ವ ಉತ್ಪಾದನೆಯ ಹಕ್ಕುದಾರಿಕೆ ಕೊಡವರದಲ್ಲವೆಂದು, ಕೊಡವರು ಕೇವಲ ಅವರ ಅಧೀನ ಪ್ರಜೆಗಳೆಂಬ ಭಾವನೆ ಇದ್ದು. ಇದು ದೌರ್ಜನ್ಯಕಾರಿ, ಜನವಿರೋಧಿ, ಆಕ್ರಮಣಕಾರಿ, ಪ್ರಜಾತಂತ್ರ ವಿರೋಧಿ ನಿಲುವಾಗಿದೆ. ಕೊಡಗು ಕಾವೇರಿ ಜಲ ಉತ್ಪಾಧಿಸುವ ಪ್ರಮುಖ ಕ್ಯಾಚ್‍ಮೆಂಟ್ ಏರಿಯಾ ಆಗಿದ್ದು, ಕಾವೇರಿ ನದಿಯ ನೀರಿನ ವಾರ್ಷಿಕ ಇಳುವರಿ 740 ಟಿ.ಎಂ.ಸಿ ಆಗಿದ್ದು, ಇದರಲ್ಲಿ ಕೊಡಗಿನ ಉತ್ಪಾದನೆ 200 ಟಿ.ಎಂ.ಸಿ.ಆಗಿದೆ. 1966ರಲ್ಲಿ ವಿಶ್ವ ರಾಷ್ಟ್ರ ಸಂಸ್ಥೆ ಮದ್ಯಸ್ಥಿಕೆಯಲ್ಲಿ ಫಿನ್‍ಲ್ಯಾಂಡ್‍ನ ಹೆಲ್ಸಿಂಕಿಯಲ್ಲಿ ನಡೆದ ಅಂತರಾಷ್ಟ್ರೀಯ ಜಲವಿವಾದ ಒಪ್ಪಂದದಲ್ಲಿ ಜಲ ಉತ್ಪತ್ತಿಯಾಗುವ ಸ್ಥಳಕ್ಕೆ ನೀರಿನ ಅಧಿಕ ಪಾಲು ನೀಡಬೇಕೆಂಬ ಘೋಷಣೆ ಹೊರಡಿಸಿದ್ದರು ಕೊಡಗಿನ ವಿಷಯದಲ್ಲಿ ಈ ಹೆಲ್ಸಿಂಕಿ ನಿಯಮವನ್ನು ರಾಜ್ಯ ಸರ್ಕಾರ ಉಲ್ಲಂಘನೆ ಮಾಡಿ ನಮಗೆ ವಂಚಿಸಿದೆ ಎಂದು ನಾಚಪ್ಪ ಆರೋಪಿಸಿದ್ದಾರೆ.
ಕೊಡವರಿಲ್ಲದೆ ಕೂರ್ಗ್ ಅಥವಾ ಕೊಡವ ಲ್ಯಾಂಡ್ ಅನ್ನು ಕಲ್ಪಿಸಲು ಸಾಧ್ಯವಿಲ್ಲ, ಕೊಡವ ಸೀಮೆಯಿಲ್ಲದೆ ಕೊಡವರೂ ಇಲ್ಲ. ಕೊಡವರು ಕೊಡವ ನೀತಿ ತತ್ವವನ್ನು ಪ್ರತಿನಿಧಿಸುತ್ತಾರೆ ಮತ್ತು ಕೊಡವರು ಈ ನೆಲದ ಸ್ವಾಭಿಮಾನ. ಸರ್ದಾರ್ ಪಟೇಲರು ಕೊಡವ ತಾಯ್ನಾಡು ಕೂರ್ಗ್ ಅನ್ನು ಪ್ರತ್ಯೇಕ ರಾಜ್ಯವಾಗಿ ಉಳಿಸಿ ಮುಂದುವರೆಸಲು ಬಯಸಿದ್ದರು. ಜಮ್ಮು ಮತ್ತು ಕಾಶ್ಮಿರವನ್ನು ಭಾರತದ ಇತರ ರಾಜ್ಯಗಳಿಗೆ ಸಮಾನವಾಗಿ ಭಾರತ ಒಕ್ಕೂಟದೊಳಗೆ ಸಂಪೂರ್ಣ ವಿಲೀನಗೊಳಿ, ಏಕೀಕರಣ ಗೊಳಿಸಬೇಕೆಂದು ಸರ್ದಾರ್ ವಲ್ಲಭಬಾಯಿ ಪಟೇಲ್ ದೂರದರ್ಶಿತ್ವದ ಒಳನೋಟವುಳ್ಳ ಸಲಹೆಯನ್ನು ನೀಡಿದರು ಆದರೆ ಅವರ ಜಾಣತನದ ಸಲಹೆ ನೀರಿನಲ್ಲಿ ಹೋಮ ಮಾಡಿದಂತಾಯಿತು.
ಕಾರ್ಯಾಂಗ ಮತ್ತು ಶಾಸಕಾಂಗವು ಕೊಡವ ಕುಂದುಕೊರತೆಗಳನ್ನು ಅಂಗೀಕರಿಸುವಲ್ಲಿ ವಿಫಲವಾಗಿದೆ ಏಕೆಂದರೆ ನಮ್ಮ ಅತ್ಯಲ್ಪ ಜನಸಂಖ್ಯೆಯ ಶಾಂತಿಯುತ ಅಹಿಂಸಾ ವಿಧಾನದೊಂದಿಗೆ ಪ್ರತಿರೋಧದಿಂದಾಗಿ ನಮ್ಮನ್ನು ಉಪೇಕ್ಷಿಸಲಾಗುತ್ತದೆ. ಬೃಹತ್ ಮತಬ್ಯಾಂಕ್ ಅಥವಾ ಉಗ್ರಗಾಮಿ ಸೇನಾಪಡೆಗಳನ್ನು ಹೊಂದಿರುವ ಬಹುಸಂಖ್ಯಾತ ಗುಂಪುಗಳಿಗೆ ಸರ್ಕಾರ ಮಣಿಯುತ್ತದೆ ಮತ್ತು ಅವರ ಆಕಾಂಕ್ಷೆಗಳನ್ನು ಮಾತ್ರ ಸರ್ಕಾರಗಳು ಪರಿಹರಿಸುತ್ತವೆ. ಎಸ್‍ಟಿ ಪಟ್ಟಿಗೆ ಸೇರ್ಪಡೆಗೊಳ್ಳುವ ನಮ್ಮ ಹಕ್ಕು ನಮ್ಮ ಅನನ್ಯ ಗುರುತು, ಸಂಸ್ಕೃತಿ ಮತ್ತು ನಮ್ಮ ಐತಿಹಾಸಿಕ ನಿರಂತರತೆಯನ್ನು ಅನುಮೋದಿಸಲು ಮತ್ತು ನಮ್ಮ ಕ್ಷೀಣಿಸುತ್ತಿರುವ ಸ್ಥಿತಿ ಮತ್ತು ಅಳಿವಿನಿಂದ ರಕ್ಷಿಸಲು ಸಾಂವಿಧಾನಿಕ ರಕ್ಷಣೆಗಾಗಿ ಮಾತ್ರ. ಆದರೆ ವಿಷಾದನೀಯ ಸ್ಥಿತಿಯೆಂದರೆ ಇಡೀ ರಾಜ್ಯ ಆಡಳಿತ ಯಂತ್ರವು ಕೊಡವ ಅಸ್ಮಿತೆಗೆ ಪ್ರತಿಕೂಲವಾಗಿದೆ.
ಆದ್ದರಿಂದ ನ್ಯಾಯ ಮತ್ತು ಸಮಾನತೆಯ ಹಿತಾಸಕ್ತಿಯಲ್ಲಿ ನಮ್ಮ ಸಂವಿಧಾನದ 32 ನೇ ವಿಧಿ ಮತ್ತು UN ಚಾರ್ಟರ್ ಅನ್ನು ಚಲಾಯಿಸುವ ಮೂಲಕ ನಮ್ಮ 34 ವರ್ಷಗಳ ದೀರ್ಘಾವಧಿಯ ಗೌರವಾನ್ವಿತ ಗುರಿಗಳನ್ನು ಮತ್ತು ನಮ್ಮ ಪಾಲಿಸಬೇಕಾದ ಕಾನೂನುಬದ್ಧ ಆಕಾಂಕ್ಷೆಗಳನ್ನು ಒಪ್ಪಿಕೊಳ್ಳುವಂತೆ ಕೊಡವರು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ನಾಚಪ್ಪ ತಿಳಿಸಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಾ.15 ರಂದು ಮೂರ್ನಾಡು ಗೌಡ ಮಹಿಳಾ ಒಕ್ಕೂಟದಿಂದ ಮಹಿಳಾ ದಿನಾಚರಣೆ*

ಮಾರ್ಚ್ 17, 2026

*ವಿರಾಜಪೇಟೆ ಶ್ರೀ ಮುತ್ತಪ್ಪ ದೇವಾಲಯದ ತೆರೆ ಮಹೋತ್ಸವಕ್ಕೆ ಚಾಲನೆ*

ಮಾರ್ಚ್ 17, 2026

*ಫಾಸ್ಟ್ ಪುಡ್(ಚಾಟ್ಸ್ ಸೆಂಟರ್) ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ*

ಮಾರ್ಚ್ 17, 2026

*ವಿರಾಜಪೇಟೆ ಶ್ರೀ ಮುತ್ತಪ್ಪ ದೇವಾಲಯದ ತೆರೆ ಮಹೋತ್ಸವಕ್ಕೆ ಚಾಲನೆ*

ಮಾರ್ಚ್ 17, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ಮಾ.17 NEWS DESK : ವಿರಾಜಪೇಟೆಯ ಮೀನುಪೇಟೆಯಲ್ಲಿರುವ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಾಲಯದ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು…

*ಫಾಸ್ಟ್ ಪುಡ್(ಚಾಟ್ಸ್ ಸೆಂಟರ್) ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ*

ಮಾರ್ಚ್ 17, 2026

*ಕೋಟ್ಪಾ ಕಾಯ್ದೆ ಉಲ್ಲಂಘನೆ : 1800 ರೂ.ದಂಡ*

ಮಾರ್ಚ್ 17, 2026

*ಸ್ವ-ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ*

ಮಾರ್ಚ್ 17, 2026

*ಅಡುಗೆ ಅನಿಲದ ಕೊರತೆ : ಕೇಂದ್ರ ವಿರುದ್ಧ ಕುಶಾಲನಗರದಲ್ಲಿ ಪ್ರತಿಭಟನೆ*

ಮಾರ್ಚ್ 17, 2026

*ಕನ್ನಡ ಸಾಹಿತ್ಯ ಸುದೀರ್ಘವಾದ ಕಾಲದಿಂದ ಜೀವಂತಿಕೆ ಉಳಿಸಿಕೊಂಡು ಬೆಳೆಯುತ್ತಿರುವ ಸಾಹಿತ್ಯ : ಪ್ರೊ.ಡಿ.ಕೆ.ಸರಸ್ವತಿ*

ಮಾರ್ಚ್ 17, 2026

*ಸೋಮವಾರಪೇಟೆ : ಹೋಟೆಲ್ ಹಾಗೂ ಬೇಕರಿಗಳಿಗೆ ಆಹಾರ ನಿರೀಕ್ಷಕರ ಭೇಟಿ*

ಮಾರ್ಚ್ 17, 2026

*ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನಕ್ಕೆ ಬೃಹತ್ ಗಾತ್ರದ ಸ್ಟೀಲ್ ಪಾತ್ರೆಯ ಕೊಡುಗೆ*

ಮಾರ್ಚ್ 17, 2026

*ಮಾ.18 ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ : ಕೊಡಗಿನಲ್ಲಿ 6,183 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ*

ಮಾರ್ಚ್ 17, 2026

*ಮಾ.27 ರಂದು ಸೋಮವಾರಪೇಟೆಯಲ್ಲಿ ಶ್ರೀ ರಾಮನವಮಿ ಉತ್ಸವ*

ಮಾರ್ಚ್ 17, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.