Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಮಡಿಕೇರಿ : ಬ್ರಹ್ಮಕುಮಾರೀಸ್ ಲೈಟ್ ಹೌಸ್ ನಲ್ಲಿ ತ್ರಿಮೂರ್ತಿ ಶಿವಜಯಂತಿ ಹಾಗೂ ವಿಶ್ವ ಮಹಿಳಾ ದಿನಾಚರಣೆ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ : ಬ್ರಹ್ಮಕುಮಾರೀಸ್ ಲೈಟ್ ಹೌಸ್ ನಲ್ಲಿ ತ್ರಿಮೂರ್ತಿ ಶಿವಜಯಂತಿ ಹಾಗೂ ವಿಶ್ವ ಮಹಿಳಾ ದಿನಾಚರಣೆ

ಮಾರ್ಚ್ 14, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಮಾ.14 NEWS DESK : ಮಡಿಕೇರಿ ಶಾಖೆಯ ಬ್ರಹ್ಮಕುಮಾರೀಸ್  ಲೈಟ್ ಹೌಸ್ ಸಭಾಂಗಣದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಅಮೃತೇಶ್ವರ ದರ್ಶನ ಮತ್ತು  88ನೇ ತ್ರಿಮೂರ್ತಿ ಶಿವಜಯಂತಿ ಹಾಗೂ ವಿಶ್ವ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗಾಯತ್ರಿಜೀ ಅವರ ದಿವ್ಯಸಾನ್ನಿಧ್ಯದಲ್ಲಿ  ಶಿವಧ್ವಜ ಹಾರಿಸುವುದರ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹೆಚ್.ಸಿ.ಶ್ಯಾಂಪ್ರಸಾದ್‍ ಕಾರ್ಯಕ್ರಮವನ್ನು ಉದ್ಘಾಟಿಸಿ,  ಶಿವರಾತ್ರಿಯ ಶುಭಾಶಯಗಳನ್ನು ನೀಡಿ ಬ್ರಹ್ಮಾಕುಮಾರಿ ಸಹೋದರಿಯರ ಸೇವೆಯನ್ನು ಶ್ಲಾಘೀಸಿದರು.

ಇಂದಿನ ಒತ್ತಡಗಳ ಜೀವನದಲ್ಲಿ  ಪರಮಾತ್ಮನ ಶಕ್ತಿಯ ಅವಶ್ಯಕತೆಯಿದೆ, ಆದ್ದರಿಂದ ಇಂತಹ ಶಾಂತಿಯ ಸ್ಥಾನಗಳಿಗೆ ಆಗಾಗ ಭೇಟಿ ಕೊಡುವುದು ಅವಶ್ಯಕವೆಂದು ಅಭಿಪ್ರಾಯಪಟ್ಟರು.

ಮುಖ್ಯ ನ್ಯಾಯಿಕ ದಂಡಾಧಿಕಾರಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎನ್.ಬಿ. ಜಯಲಕ್ಷ್ಮಿ  ಮಾತನಾಡಿ, ತಮ್ಮ ವಿದ್ಯಾಭ್ಯಾಸದ ದಿನಗಳಲ್ಲಿ ಆಶ್ರಮದ ಒಡನಾಟವಿದ್ದು, ಈಗ ಅದನ್ನು ಪುನರಾರಂಭಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು.  ಪ್ರಶಾಂತ ವಾತಾವರಣದಲ್ಲಿ ಎಲ್ಲರೊಂದಿಗೆ ಶಿವರಾತ್ರಿಯ ಆಚರಣೆ ತುಂಬಾ ಖುಷಿ ನೀಡಿದೆ ಎಂದರು.

ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಆರ್. ಮುನಿರತ್ನ ಭಾಗವಹಿಸಿ, ಇಂದಿನ ಯುವ ಪೀಳಿಗೆಗೆ ಇಂತಹ ಧ್ಯಾನಕೇಂದ್ರಗಳ ಅವಶ್ಯಕತೆ ಬಹಳಷ್ಟಿದೆ ಎಂದರು.

ಬೈಲುಕುಪ್ಪೆಯ ನಲಂದಾ ಕ್ಯಾಂಪ್‍ನ ಚೇರ್‍ಮನ್ ಓಜಿನ್ ಸಮ್ಟೆನ್‍ಲಿಂಗ್‍ಪಾ ಕರ್ಮಾ ರಿಂಗ್‍ಪೋಚೆ ತಮ್ಮ ಪರಿವಾರದೊಂದಿಗೆ ಆಗಮಿಸಿ ಶಾಂತಿ ಮಂತ್ರವನ್ನು ಪಠಿಸಿ, ಸರ್ವರಿಗೂ ಶಾಂತಿಯ ಅವಶ್ಯಕತೆಯನ್ನು ತಿಳಿಸಿದರು.

ಎಫ್.ಎಂ.ಸಿ. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪುಷ್ಪಾ ಕುಟ್ಟಣ್ಣ ಮಾತನಾಡಿ, ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಮಹಿಳೆಯರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಬೇಕೆಂದರು.

ಎಸ್.ಎಲ್.ಎನ್. ಲೆವಿಸ್ಟಾ ಕಾಫಿಯ ಮಾಲೀಕರಾದ ಎಸ್.ಎಲ್.ಎನ್. ಸಾತಪ್ಪ ಮಾತನಾಡಿ,  ಅನೇಕ ಶುಭ ವಿಚಾರಗಳ ಸಂಗಮವಿದೆ. ಈ ಸಮಯದಲ್ಲಿ ನಾವೆಲ್ಲ ಒಟ್ಟಿಗೆ ಶಿವನ ನೆಲೆಯಲ್ಲಿ ಸೇರಿರುವುದು ಶಿವನ ಇಚ್ಛೆಯೆಂದು ತಿಳಿಸಿದರು. ಎಲ್ಲರ ಸಮ್ಮುಖದಲ್ಲಿ ತಮ್ಮ ವಿಶೇಷ ಗಾಯನ ಕಲೆಯಿಂದ ಎಲ್ಲರಲ್ಲೂ ಭಕ್ತಿಭಾವವನ್ನು ಜಾಗೃತ ಮಾಡಿದರು.

ಹಿರಿಯ ವಕೀಲರು ಹಾಗೂ ಸಾಹಿತಿ ಕೆ.ಪಿ.ಬಾಲಸುಬ್ರಹ್ಮಣ್ಯ ಕಂಜರ್ಪಣೆ  ಬ್ರಹ್ಮಾಕುಮಾರೀಸ್ ಒಡನಾಟ ಬಹಳ ವರ್ಷಗಳಿಂದಿದೆ. ಸಹೋದರಿಯರ ತ್ಯಾಗ, ತಪಸ್ಸು, ಸೇವಾ ಭಾವ ಕಂಡು ಪ್ರಧಾನ ಕೇಂದ್ರ ಮೌಂಟ್ ಅಬುವಿಗೆ ಭೇಟಿ ನೀಡಿದ ಸಮಯವನ್ನು ಸ್ಮರಿಸುತ್ತಾ, ತಮ್ಮ ಬದುಕಿನ ಸುಖಮಯ ಸಮಯವೆಂದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ ಶಿವರಾತ್ರಿ ಎಲ್ಲರಿಗೂ ಮಾನವ ಧರ್ಮವನ್ನು ಬೋಧಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ  ನಿವೃತ್ತ ಏರ್ ಮಾರ್ಷಲ್ ನಂದಾ ಕಾರ್ಯಪ್ಪ, ವಿರಾಜಪೇಟೆ ಪ.ಪಂ ಮಾಜಿ ಅಧ್ಯಕ್ಷರಾದ ಕಾಂತಿ ಸತೀಶ್ ಹಾಗೂ ಶಕ್ತಿ ದಿನಪತ್ರಿಕೆಯ ಹಿರಿಯರಾದ ರಾಜಲಕ್ಷ್ಮಿ , ಶಮ್ಮಿ ಸೂದನ, ಪ್ರೇಮ ಕರುಂಬಯ್ಯ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸಂಜ ಶ್ರೀ ವಿಜಯವಿನಾಯಕ ಭಜನಾ ಮಂಡಳಿಯ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಡಿಕೇರಿ ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ ಎಲ್ಲರಿಗೂ ಶುಭಾಷಯ ತಿಳಿಸಿದರು.

ನಗರದ ಹಿರಿಯ ವೈದ್ಯರಾದ ಡಾ. ಮೋಹನ್ ಅಪ್ಪಾಜಿ ಶುಭ ಕೋರಿದರು.

ಸ್ತುತಿ ಮತ್ತು ಖುಷಿ ಶಿವನ ನೃತ್ಯಗಳನ್ನು ಹಾಗೂ ಗೀತಾ ಮಧುಕರ್ ಮತ್ತು ಮಾಧುರಿಯವರು ಭಕ್ತಿಗೀತೆಗಳ ಕಾರ್ಯಕ್ರಮ ನಡೆಸಿಕೊಟ್ಟರು.

ಹಿರಿಯರಾದ ಗಾಯತ್ರಿಜೀ ಸರ್ವರಿಗೂ ಆಶೀರ್ವದಿಸಿ ಪರಮಾತ್ಮನೇ ನಮ್ಮ ರಕ್ಷಕನು, ಅವನ ಸ್ಮೃತಿಯೇ ನಮಗೆ ರಕ್ಷಣಾ ಕವಚ, ಕೆಲಸ ಕಾರ್ಯಗಳನ್ನು ಮಾಡುತ್ತ, ಪರಮಾತ್ಮ ನ ಚಿಂತನೆ ಮಾಡುವುದೇ ರಾಜಯೋಗ ಎಂದರು.

ಭಾಗವಹಿಸಿದ ಎಲ್ಲರಿಗೂ ಈಶ್ವರೀಯ ಉಡುಗೊರೆಯೊಂದಿಗೆ ಗೌರವಿಸಿ ಪ್ರಸಾದ ವಿನಿಯೋಗ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಎಲ್ಲಾ ಬ್ರಹ್ಮಾಕುಮಾರ ಬ್ರಹ್ಮಾಕುಮಾರಿಯರು ಗಾಯತ್ರೀಜಿಯವರಿಗೆ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ  ಸನ್ಮಾನಿಸಿ, ಗೌರವಿಸಿದರು.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಮಡಿಕೇರಿ ದಸರಾ ಜನೋತ್ಸವದಲ್ಲಿ ದಶಮಂಟಪಗಳ ಸಂಭ್ರಮ : ಡಿಜೆಗೆ ಕುಣಿದು ಕುಪ್ಪಳಿಸುತ್ತಿರುವ ಜನ ಸಾಗರ

ಅಕ್ಟೋಬರ್ 21, 2026

ಅ.26ರಂದು ನಾಪೋಕ್ ನಲ್ಲಿ ಸಿಎನ್‌ಸಿಯ 7ನೇ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ

ಅಕ್ಟೋಬರ್ 21, 2026

ಕಾರು ಕೆರೆಗೆ ಬಿದ್ದು ಮಗು ಸೇರಿ ಮೂವರ ಸಾವು

ಅಕ್ಟೋಬರ್ 21, 2026

ಅ.26ರಂದು ನಾಪೋಕ್ ನಲ್ಲಿ ಸಿಎನ್‌ಸಿಯ 7ನೇ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ

ಅಕ್ಟೋಬರ್ 21, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಅ.21 : ಕೊಡವ ಜನಾಂಗದ ಅಸ್ತಿತ್ವ, ಗುರುತು, ಭೂಮಿ, ಭಾಷೆ ಹಾಗೂ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ…

ಕಾರು ಕೆರೆಗೆ ಬಿದ್ದು ಮಗು ಸೇರಿ ಮೂವರ ಸಾವು

ಅಕ್ಟೋಬರ್ 21, 2026

31 ವರ್ಷಗಳಿಂದ ಮನೆಮನೆಗೆ ಕಾವೇರಿ ತೀರ್ಥ ವಿತರಣೆ: ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಧಾರ್ಮಿಕ ಸೇವೆ

ಅಕ್ಟೋಬರ್ 20, 2026

ಮೈಸೂರು ಕೊಡಗು ಗೌಡ ಸಮಾಜದಿಂದ ಭಕ್ತಿಭಾವದ ಕಾವೇರಿ ತೀರ್ಥ ವಿತರಣೆ

ಅಕ್ಟೋಬರ್ 20, 2026

ವಿರಾಜಪೇಟೆ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಾರದಾ, ಲಕ್ಷ್ಮಿ ಪೂಜೆ

ಅಕ್ಟೋಬರ್ 19, 2026

ವಿರಾಜಪೇಟೆ ಮಹಿಳಾ ಸಹಕಾರ ಸಂಘದಿಂದ ಶಾರದಾ ಪೂಜೆ

ಅಕ್ಟೋಬರ್ 19, 2026

ಗೋಣಿಕೊಪ್ಪ ದಸರಾದಲ್ಲಿ ಗಮನ ಸೆಳೆದ ಗೀತೆಗಳ ಗಾನಸುಧೆ, ಮಕ್ಕಳ ನೃತ್ಯ ವೈಭವ

ಅಕ್ಟೋಬರ್ 19, 2026

ಟಿ. ಶೆಟ್ಟಿಗೇರಿಯಲ್ಲಿ ₹10 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಆಟೋ ತಂಗುದಾಣ ಲೋಕಾರ್ಪಣೆ

ಅಕ್ಟೋಬರ್ 19, 2026

ಮಾದಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರಕ್ಕೆ ಮಾಜಿ ಸಚಿವ ಅಪ್ಪಚ್ಚು ರಂಜನ್ ಚಾಲನೆ

ಅಕ್ಟೋಬರ್ 19, 2026

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಹೊರ ತರಲು ಪ್ರತಿಭಾ ದಿನಾಚರಣೆಯು ವೇದಿಕೆ

ಅಕ್ಟೋಬರ್ 19, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.