ಮಡಿಕೇರಿ ಏ.1 NEWS DESK : ಮಂಥನ ಕೊಡಗು ಹಾಗೂ ರಂಗಭೂಮಿ ಪ್ರತಿಷ್ಠಾನ ಕೊಡಗು ಆಶ್ರಯದಲ್ಲಿ ಅಡ್ಡಂಡ ಕಾರ್ಯಪ್ಪ ರಚಿತ “ಕರಿನೀರ ವೀರ” ಕೃತಿ ಏ.2 ರಂದು ಲೋಕಾರ್ಪಣೆಗೊಳ್ಳಲಿದೆ.
ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಸಂಜೆ 5.30 ಕ್ಕೆ ಕೃತಿ ಲೋಕಾರ್ಪಣೆಗೊಳ್ಳಲಿದೆ. ಭಾರತೀಯ ವಿದ್ಯಾಭವನದ ಅಧ್ಯಕ್ಷ ಕೆ.ಎಸ್. ದೇವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವೀರ ಸಾವರ್ಕರ್ ಕುರಿತು ಲೇಖಕ, ಚಿಂತಕ ನಿತ್ಯಾನಂದ ವಿವೇಕಾವಂಶಿ ಮಾತನಾಡಲಿದ್ದಾರೆ.
ಕೃತಿ ಲೇಖಕ ಅಡ್ಡಂಡ ಕಾರ್ಯಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಸಾವರ್ಕರ್ ಚರಿತ್ರೆ ಕುರಿತಾದ ಈ ನಾಟಕ ರಾಜ್ಯದಲ್ಲಿ 40 ಪ್ರದರ್ಶನ ಕಂಡಿದೆ. ಈ ಕೃತಿಯನ್ನು ಅಯೋಧ್ಯೆ ಪ್ರಕಾಶನ ಪ್ರಕಟಿಸಿದೆ.






