ನಾಪೋಕ್ಲು ಏ.1 NEWS DESK : ವಿದ್ಯಾರ್ಥಿಗಳು ಪ್ರೌಢಶಾಲಾ ಹಂತದಲ್ಲಿ ನಿರ್ಧಿಷ್ಟ ಗುರಿಯನ್ನು ತಲುಪಲು ಕಾರ್ಯಪ್ರವೃತ್ತರಾಗಬೇಕು ಎಂದು ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರೇಖಾ ಚಿಣ್ಣಪ್ಪ ಹೇಳಿದರು.
ಇಲ್ಲಿನ ಅಂಕುರ್ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳ ಪದವಿ ಪ್ರಧಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಅಲ್ಬರ್ಟ್ ಐಸ್ಟಿನ್ ಅವರ ಮಾತಿನಂತೆ “ಉಪಯುಕ್ತತೆಯ ಮನುಷ್ಯನಾಗು” ಹಾಗೂ ಸ್ವಾಮಿ ವಿವೇಕಾನಂದರ ಮಾತಿನಂತೆ “ನಿಮ್ಮೊಳಗಿನ ಶಕ್ತಿಯನ್ನು ಕಂಡುಕೊಳ್ಳಿ” ಎಂಬ ನುಡಿಮುತ್ತುಗಳನ್ನು ಉಲ್ಲೇಖಿಸಿ. ಆದರ್ಶ ಪುಣ್ಯಪುರುಷರ ಜೀವನ ಸಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕೀರ್ತಿವಂತರಾಗಿ ಉತ್ತಮ ವ್ಯಕ್ತಿಗಳಾಗಿ ಬಾಳಿರಿ ಎಂದು ಶುಭ ಹಾರೈಸಿದರು.
ಶಾಲೆಯ ಕಾರ್ಯದರ್ಶಿ ರತ್ನ ಚರ್ಮಣ ವಿದ್ಯಾರ್ಥಿಗಳಿಗೆ ಹಿತವಚನ ಆಡಿದರು. ವಿದ್ಯಾರ್ಥಿಗಳ ಕಾಲೇಜು ಶಿಕ್ಷಣ ಉತ್ತಮವಾಗಿದ್ದು, ಭವಿಷ್ಯ ಉಜ್ವಲವಾಗಲಿ ಎಂದು ತನ್ನ ಅನಿಸಿಕೆ ವ್ಯಕ್ತಪಡಿಸಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕೇಟೋಳಿರ ರಾಜ ಚರ್ಮಣ ವಹಿಸಿದ್ದು, ನಿರ್ದೇಶಕಿ ಗಾಯನ್ ಗೌರಮ್ಮ, ಪೋಷಕರು ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಸಂದರ್ಭ ವಿದ್ಯಾರ್ಥಿಗಳ ಪೋಷಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಮಾತನಾಡಿದರು.
ವಿದ್ಯಾರ್ಥಿ ನವಲ್ ನಾಚಪ್ಪ ಸ್ವಾಗತಿಸಿದರು. ಹಬೀಬ ಅತಿಥಿಗಳ ಪರಿಚಯ ಮಾಡಿದರು. ಆಯುಷ್ ಮತ್ತು ಅಮೀಬಾ ಕಾರ್ಯಕ್ರಮ ನಿರೂಪಿಸಿ, ಭೋಜಮ್ಮ ವಂದಿಸಿದರು.
ವರದಿ : ದುಗ್ಗಳ ಸದಾನಂದ






