Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸೆ.25 ರಂದು ಅಣಬೆ ಕೃಷಿ ಕುರಿತು ಪ್ರದರ್ಶನ ಮತ್ತು ತರಬೇತಿ ಕಾರ್ಯಕ್ರಮ*
  • *ಕಾರ್ಮಿಕ ಹಕ್ಕು, ಕಾಯ್ದೆಗಳ ಕುರಿತು ಜಾಗೃತಿ ಕಾರ್ಯಕ್ರಮ : ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಅರಿವು ಮೂಡಿಸಿದ ಕಾರ್ಮಿಕ ಇಲಾಖೆ ಅಧಿಕಾರಿಗಳು*
  • *ಕರಿಕೆ ಗ್ರಾಮದಲ್ಲಿ ಪೋಷಣಯುಕ್ತ ಉತ್ಪನ್ನ ಮತ್ತು ಸ್ಥಳೀಯ ಆಹಾರಗಳ ಪ್ರದರ್ಶನ : ಉತ್ತಮ ಆರೋಗ್ಯಕ್ಕೆ ಸ್ಥಳೀಯ ಆಹಾರ ಪದ್ಧತಿ ಅಗತ್ಯ*
  • *ಕೈಲ್ ಮುಹೂರ್ತ ಜಂಬರಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಆಹ್ವಾನ*
  • *ವಿಶ್ವದ ಪ್ರತಿಷ್ಠಿತ ಎಲೆಕ್ಟ್ರೋಕೆಮಿಕಲ್ ಸೊಸೈಟಿಯ ‘ಟಾಪ್ ರಿವ್ಯೂವರ್’ ಗೌರವಕ್ಕೆ ಡಾ. ಜೆ.ಜಿ. ಮಂಜುನಾಥ್*
  • *ವಿರಾಜಪೇಟೆಯಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ; ಸ್ವಯಂ ಸೇವೆ ಎಂಬುದು ಎಂದಿಗೂ ಮುಗಿಯದ ನಿರಂತರ ಪ್ರಕ್ರಿಯೆ: ಮಾರ್ಚಂಡ ಗಣೇಶ್ ಪೊನ್ನಪ್ಪ*
  • *ವಿಪತ್ತು ನಿರ್ವಹಣೆಯ ತರಬೇತಿ ಹಾಗೂ ಶಿಕ್ಷಣ ಪ್ರತಿಯೊಬ್ಬರಿಗೂ ಅವಶ್ಯಕ: ರೆ. ಫಾ. ಮದಲೈ ಮುತ್ತು*
  • *ಸಣ್ಣ ಆದಿಮಸಂಜಾತ ಸಮುದಾಯಗಳಿಗೆ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತದ ಹಕ್ಕು ಇದೆ : ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ*
  • *ಶಾಂತಳ್ಳಿ ವಿಶೇಷ ಗ್ರಾಮಸಭೆ: ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ತಿರಸ್ಕಾರ*
  • *ದೊಡ್ಡಮಳ್ತೆ ವಿಶೇಷ ಗ್ರಾಮಸಭೆ: ಕಸ್ತೂರಿ ರಂಗನ್ ವರದಿಗೆ ತೀವ್ರ ಆಕ್ಷೇಪ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಬೆಳ್ಳಿಮಹೋತ್ಸವ ಸಮಾರೋಪ : ಗುರು ಶಿಷ್ಯರ ಸಂಬಂಧ ಗಟ್ಟಿಯಾಗಿರಬೇಕು : ಮಾಜಿ ಸಚಿವ ಎಂ.ಸಿ.ನಾಣಯ್ಯ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಬೆಳ್ಳಿಮಹೋತ್ಸವ ಸಮಾರೋಪ : ಗುರು ಶಿಷ್ಯರ ಸಂಬಂಧ ಗಟ್ಟಿಯಾಗಿರಬೇಕು : ಮಾಜಿ ಸಚಿವ ಎಂ.ಸಿ.ನಾಣಯ್ಯ*

ಏಪ್ರಿಲ್ 1, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಏ.1 NEWS DESK :  ಇಂದಿನ ತಾಂತ್ರಿಕ ಯುಗದಲ್ಲಿ ಗುರು ಶಿಷ್ಯರ ಸಂಬಂಧವನ್ನು ಮರೆಯುವಂತ ಪರಿಸ್ಥಿಯಾಗಿದ್ದು, ಶಾಲೆಗಳಲ್ಲಿ ಮೊದಲು ಗುರು ಶಿಷ್ಯರ ಸಂಬಂಧ ಗಟ್ಟಿಯಾಗುವಂತೆ ಮಾಡಬೇಕೆಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಹೇಳಿದರು.
ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ 25ನೇ ವರ್ಷದ ಬೆಳ್ಳಿಮಹೋತ್ಸವ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆರ್ಟಿಫಿಶಲ್ ಇಂಟಲಿಜೆಂಟ್ ತಂತ್ರಜ್ಞಾನ ಬಳಕೆ ಒಂದೆಡೆಯಾದರೆ ಮಕ್ಕಳಲ್ಲಿ ಮೊಬೈಲ್‍ಗಳ ಬಳಕೆ ಹೆಚ್ಚಾಗುತ್ತಿರುವುದು ವಿಷಾದನೀಯ ಎಂದರು.
25ನೇ ಸಂಭ್ರಮದಲ್ಲಿರುವ ಜನರಲ್ ತಿಮ್ಮಯ್ಯ ಶಾಲೆಯು ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಹೆಸರನ್ನು ಎಲ್ಲೆಡೆ ಅಜರಾಮರ ವಾಗಿರುವಂತೆ ಮಾಡುತ್ತಿದ್ದು, ಶಾಲೆಯು ಉತ್ತುಂಗಕ್ಕೆ ಏರಲೆಂದು ಆರೈಸಿದರು.
ಮಡಿಕೇರಿಯ ಮುಖ್ಯ ರಸ್ತೆಯಲ್ಲಿ 1973ರಲ್ಲಿ ಪ್ರತಿಷ್ಠಾಪಿಸಲಾದ ಜನರಲ್ ತಿಮ್ಮಯ್ಯ ಪ್ರತಿಮೆ ಕಳೆದ ನಾಲ್ಕೈದು ತಿಂಗಳ ಹಿಂದೆ ಹಾನಿಗೊಳಗಾಗಿದ್ದು, ಅದನ್ನು ಮರುಸ್ಥಾಪನೆ ಮಾಡಲಾಗಿರುವುದು ಶ್ಲಾಘನೀಯ ಎಂದರು.
ಕಾಫಿ ಬೆಳೆಗಾರ ಹಾಗೂ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ನಡಿಕೇರಿಯಂಡ ಬೋಸ್ ಮಂದಣ್ಣ ಮಾತನಾಡಿ, ಜನರಲ್ ತಿಮ್ಮಯ್ಯ ಅವರ ಸೇವೆಯನ್ನು ಸ್ಮರಿಸಿದರು. ಹಿಂದಿನ ಇತಿಹಾಸವನ್ನು ಕಲಿಯುವ ಬದಲು ಬದುಕಿನಲ್ಲಿ ಶಿಸ್ತು, ಸಂಯಮ ಹಾಗೂ ಭಾರತೀಯ ಸಂಸ್ಕೃತಿಯ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ, ಶಾಲೆಗೆ ಜನರಲ್ ತಿಮ್ಮಯ್ಯ ಅವರ ಹೆಸರಿಡುವ ಮೂಲಕ ವಿದ್ಯಾರ್ಥಿಗಳನ್ನು ಶಿಸ್ತು, ದೇಶ ಸೇವೆ ಹಾಗೂ ದೇಶದ ಮೇಲೆ ಅಭಿಮಾನ ಮೂಡಿಸುವ ಸಲುವಾಗಿ ಪ್ರೇರೆಪಿಸಲಾಗುತ್ತಿದೆ. ಇದೀಗ ಈ ಶಾಲೆ 25 ವರ್ಷ ಪೂರೈಸಿದ್ದು,ವೀರ ಸೇನಾನಿಯ ಹೆಸರು ಅಜರಾಮರವಾಗುವಂತೆ ಶಾಲೆಯೊಳಗೆ ಜನರಲ್ ತಿಮ್ಮಯ್ಯನವರ ಪುತ್ತಳಿಯನ್ನು ಪ್ರತಿಷ್ಠಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಹಾಗೂ ಸೇವೆಸಲ್ಲಿಸುತ್ತಿರುವ ಅಧ್ಯಕ್ಷರು, ಕಾರ್ಯದ್ಯಕ್ಷರು, ಕರೆಸ್ಪಾಂಡೆಂಟ್, ನಿರ್ದೇಶಕರುಗಳು, ಶಾಲಾ ಮುಖ್ಯೋಪಧ್ಯಾಯರು, ಶಿಕ್ಷಕರು ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭ ಮಾಜಿ ಸಚಿವ ಎಂ.ಸಿ.ನಾಣಯ್ಯ, ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ನಡಿಕೇರಿಯಂಡ ಬೋಸ್ ಮಂದಣ್ಣ ಶಾಲೆಯ ಬೆಳ್ಳಿ ಮಹೋತ್ಸವದ ಸ್ಮರಣ ಸಂಚಿಕೆ ಹಾಗೂ ಶಾಲಾ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ಮೊದಲಿಗೆ ಅತಿಥಿಗಳಾಗಿ ಭಾಗವಹಿಸಿದ ಎಂ.ಸಿ.ನಾಣಯ್ಯ ಹಾಗೂ ಬೋಸ್ ಮಂದಣ್ಣ ಜನರಲ್ ತಿಮ್ಮಯ್ಯ ಪುತ್ತಳಿಗೆ ಪುಪ್ಪಾರ್ಚಣೆ ಮಾಡಿ, ಗೌರವ ಸಲ್ಲಿಸಿದರು. ವಿವಿಧ ಪಠ್ಯ ಹಾಗೂ ಪಠ್ಯೇತರ ವಿಷಯಗಳ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮಡಿಕೇರಿ ಕೊಡವ ಸಮಾಜದ ಕಾರ್ಯಧ್ಯಕ್ಷ ಕೇಕಡ ವಿಜು ದೇವಯ್ಯ, ಸಂಚಾಲಕರಾದ ಕನ್ನಂಡ ಕವಿತಾ ಬೊಳ್ಳಪ್ಪ, ನಿರ್ದೇಶಕರಾದ ಕನ್ನಂಡ ಸಂಪತ್, ನಂದಿನೆರವಂಡ ದಿನೇಶ್, ಪುತ್ತರಿರ ಕರುಣ್ ಕಾಳಯ್ಯ, ನಂದಿನೆರವಂಡ ರವಿಬಸಪ್ಪ, ಕಾಳಚಂಡ ಅಪ್ಪಣ್ಣ, ಮೂವೆರ ಜಯರಾಂ, ಮಂಡಿರ ಸದಾಮುದ್ದಪ್ಪ, ಬೊಪ್ಪಂಡ ಸರಳಾ ಕರುಂಬಯ್ಯ, ಶಾಂತೆಯಂಡ ವಿಶಾಲ್ ಕಾರ್ಯಪ್ಪ, ಕಾಂಡೇರ ಲಲ್ಲುಕುಟ್ಟಪ್ಪ, ಆಡಳಿತಾಧಿಕಾರಿಗಳಾದ ಮುಕ್ಕಾಟಿರ ಪೊನ್ನಮ್ಮ, ಚೌರಿರ ಕಾವೇರಿ ಪೂವಯ್ಯ, ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಹಾಜರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಪ್ರಾಂಶುಪಾಲೆ ಕಲ್ಮಾಡಂಡ ಸರಸ್ವತಿ ಸುಬ್ಬಯ್ಯ ಸ್ವಾಗತಿಸಿದರು. ಶಿಕ್ಷಕಿಯರಾದ ಸವಿ, ದಿವ್ಯಾ, ಹೇಮಾವತಿ, ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.

ವರದಿ : ಕರುಣ್ ಕಾಳಯ್ಯ  

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸೆ.25 ರಂದು ಅಣಬೆ ಕೃಷಿ ಕುರಿತು ಪ್ರದರ್ಶನ ಮತ್ತು ತರಬೇತಿ ಕಾರ್ಯಕ್ರಮ*

ಸೆಪ್ಟೆಂಬರ್ 24, 2026

*ಕಾರ್ಮಿಕ ಹಕ್ಕು, ಕಾಯ್ದೆಗಳ ಕುರಿತು ಜಾಗೃತಿ ಕಾರ್ಯಕ್ರಮ : ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಅರಿವು ಮೂಡಿಸಿದ ಕಾರ್ಮಿಕ ಇಲಾಖೆ ಅಧಿಕಾರಿಗಳು*

ಸೆಪ್ಟೆಂಬರ್ 24, 2026

*ಕರಿಕೆ ಗ್ರಾಮದಲ್ಲಿ ಪೋಷಣಯುಕ್ತ ಉತ್ಪನ್ನ ಮತ್ತು ಸ್ಥಳೀಯ ಆಹಾರಗಳ ಪ್ರದರ್ಶನ : ಉತ್ತಮ ಆರೋಗ್ಯಕ್ಕೆ ಸ್ಥಳೀಯ ಆಹಾರ ಪದ್ಧತಿ ಅಗತ್ಯ*

ಸೆಪ್ಟೆಂಬರ್ 24, 2026

*ಕಾರ್ಮಿಕ ಹಕ್ಕು, ಕಾಯ್ದೆಗಳ ಕುರಿತು ಜಾಗೃತಿ ಕಾರ್ಯಕ್ರಮ : ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಅರಿವು ಮೂಡಿಸಿದ ಕಾರ್ಮಿಕ ಇಲಾಖೆ ಅಧಿಕಾರಿಗಳು*

ಸೆಪ್ಟೆಂಬರ್ 24, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಸೆ.24 NEWS DESK : ಕಾರ್ಮಿಕ ಕಾಯ್ದೆಗಳ ಕುರಿತು ಜಿಲ್ಲಾ ಕಾರ್ಮಿಕ ಅಧಿಕಾರಿ ಯತ್ನಟ್ಟಿ ಮತ್ತು ತಂಡದವರು ಜಿಲ್ಲೆಯ…

*ಕರಿಕೆ ಗ್ರಾಮದಲ್ಲಿ ಪೋಷಣಯುಕ್ತ ಉತ್ಪನ್ನ ಮತ್ತು ಸ್ಥಳೀಯ ಆಹಾರಗಳ ಪ್ರದರ್ಶನ : ಉತ್ತಮ ಆರೋಗ್ಯಕ್ಕೆ ಸ್ಥಳೀಯ ಆಹಾರ ಪದ್ಧತಿ ಅಗತ್ಯ*

ಸೆಪ್ಟೆಂಬರ್ 24, 2026

*ಕೈಲ್ ಮುಹೂರ್ತ ಜಂಬರಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಆಹ್ವಾನ*

ಸೆಪ್ಟೆಂಬರ್ 24, 2026

*ವಿಶ್ವದ ಪ್ರತಿಷ್ಠಿತ ಎಲೆಕ್ಟ್ರೋಕೆಮಿಕಲ್ ಸೊಸೈಟಿಯ ‘ಟಾಪ್ ರಿವ್ಯೂವರ್’ ಗೌರವಕ್ಕೆ ಡಾ. ಜೆ.ಜಿ. ಮಂಜುನಾಥ್*

ಸೆಪ್ಟೆಂಬರ್ 24, 2026

*ವಿರಾಜಪೇಟೆಯಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ; ಸ್ವಯಂ ಸೇವೆ ಎಂಬುದು ಎಂದಿಗೂ ಮುಗಿಯದ ನಿರಂತರ ಪ್ರಕ್ರಿಯೆ: ಮಾರ್ಚಂಡ ಗಣೇಶ್ ಪೊನ್ನಪ್ಪ*

ಸೆಪ್ಟೆಂಬರ್ 24, 2026

*ವಿಪತ್ತು ನಿರ್ವಹಣೆಯ ತರಬೇತಿ ಹಾಗೂ ಶಿಕ್ಷಣ ಪ್ರತಿಯೊಬ್ಬರಿಗೂ ಅವಶ್ಯಕ: ರೆ. ಫಾ. ಮದಲೈ ಮುತ್ತು*

ಸೆಪ್ಟೆಂಬರ್ 24, 2026

*ಸಣ್ಣ ಆದಿಮಸಂಜಾತ ಸಮುದಾಯಗಳಿಗೆ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತದ ಹಕ್ಕು ಇದೆ : ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ*

ಸೆಪ್ಟೆಂಬರ್ 24, 2026

*ಶಾಂತಳ್ಳಿ ವಿಶೇಷ ಗ್ರಾಮಸಭೆ: ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ತಿರಸ್ಕಾರ*

ಸೆಪ್ಟೆಂಬರ್ 24, 2026

*ದೊಡ್ಡಮಳ್ತೆ ವಿಶೇಷ ಗ್ರಾಮಸಭೆ: ಕಸ್ತೂರಿ ರಂಗನ್ ವರದಿಗೆ ತೀವ್ರ ಆಕ್ಷೇಪ*

ಸೆಪ್ಟೆಂಬರ್ 24, 2026

*ಬೆಟ್ಟದಳ್ಳಿ, ಶಾಂತಳ್ಳಿ ವಿಶೇಷ ಗ್ರಾಮಸಭೆ: ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ ನಿರ್ಣಯ*

ಸೆಪ್ಟೆಂಬರ್ 24, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.