ನಾಪೋಕ್ಲು ಏ.4 NEWS DESK : ಕೊಡವ ಕೌಟುಂಬಿಕ ಬೊಟ್ಟೋಳಂಡ ಕಪ್ ಹಗ್ಗ ಜಗ್ಗಾಟ-2024 ಕ್ರೀಡೋತ್ಸವದ ಮೈದಾನ ತಯಾರಿಗೆ ಭೂಮಿ ಪೂಜೆ ನೆರವೇರಿತು.
ಸ್ಥಳೀಯ ಕೆಪಿಎಸ್ ಶಾಲಾ ಆಟದ ಮೈದಾನ ದಲ್ಲಿ ಪೂಜಾ ವಿಧಿ ವಿಧಾನಗಳೊಂದಿಗೆ ಕ್ರೀಡಾ ಸಮಿತಿಯ ಪ್ರಮುಖರು ಹಾಗೂ ಕುಟುಂಬಸ್ಥರು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಕ್ರೀಡಾ ಸಮಿತಿಯ ಅಧ್ಯಕ್ಷ ಬೊಟ್ಟೋಳoಡ ಗಣೇಶ್ ಮಾತನಾಡಿ, ಕ್ರೀಡಾಕೂಟವು ಏ.18 ರಿಂದ 23 ವರೆಗೆ ಆಯೋಜಿಸಲಾಗಿದೆ. ಎಲ್ಲರ ಸಹಕಾರದಿಂದ ಕೆಲಸ ಕಾರ್ಯಗಳು ಸಾಂಗವಾಗಿ ಜರುಗುತ್ತಿದೆ. ಈಗಾಗಲೇ 150 ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ನೊಂದಾವಣಿಗೆ ಬಾಕಿ ಉಳಿದವರು ಈ ತಿಂಗಳ 10 ರ ವರೆಗೆ ಸಮಯಾವಕಾಶವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬಗಳು ನೋಂದಾಯಿಸಿ ಕ್ರೀಡೋತ್ಸವವನ್ನು ಯಶಸ್ಸಿಗೊಳಿಸಬೇಕೆಂದರು.
ಕ್ರೀಡಾ ಸಮಿತಿ ಸಂಚಾಲಕ ಬೊಟ್ಟೋಳಂಡ ಮಿಟ್ಟು ಪೂಣಚ್ಚ ಪ್ರಾರ್ಥನೆ ಸಲ್ಲಿಸಿ, ಯಾವುದೇ ತರದ ವಿಘ್ನಗಳಿಲ್ಲದೇ ಸುಸೂತ್ರವಾಗಿ ಕ್ರೀಡಾಕೂಟವು ಜರುಗಲೆಂದು ಪ್ರಾರ್ಥಿಸಿದರು.
ಪೂಜಾ ಕಾರ್ಯವನ್ನು ನಾಪೋಕ್ಲು ಶ್ರೀ ಭಗವತಿ ದೇವಾಲಯದ ಮುಖ್ಯ ಅರ್ಚಕ ಹರೀಶ್ ಭಟ್ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕೊಡವ ಕೌಟುಂಬಿಕ ಬೊಟ್ಟೋಳಂಡ ಕಪ್ ಹಗ್ಗ ಜಗ್ಗಾಟ -2024 ಕ್ರೀಡಾ ಸಮಿತಿಯ ಕಾರ್ಯದರ್ಶಿ ಬೊಟ್ಟೋಳಂಡ ಚೇತನ್, ಸಹ ಕಾರ್ಯದರ್ಶಿ ಪಳಂಗಪ್ಪ , ಖಜಾಂಚಿ ರಮೇಶ್ ಪೊನ್ನಯ್ಯ, ಹಿರಿಯರಾದ ಗಣೇಶ್, ಗಿರೀಶ್ ಮಂದಪ್ಪ, ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲ ಎಂ.ಎಸ್.ಶಿವಣ್ಣ ಸೇರಿದಂತೆ ಕ್ರೀಡಾ ಸಮಿತಿ ನಿರ್ದೇಶಕರು ಹಾಗೂ ಕುಟುಂಬಸ್ಥರು ಇನ್ನಿತರರು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.







