ಮಡಿಕೇರಿ ಏ.4 NEWS DESK : ಮತದಾನ ಜಾಗೃತಿ ಅಭಿಯಾನ ಅಂಗವಾಗಿ ಭಾರತೀಯ ಚುನಾವಣಾ ಆಯೋಗ ಜಿಲ್ಲಾಡಳಿತ ಕೊಡಗು ಜಿಲ್ಲೆ ಹಾಗೂ ಮಡಿಕೇರಿ ನಗರಸಭೆಯ ವತಿಯಿಂದ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನಲ್ಲಿ ರಂಗೋಲಿ ಮತ್ತು ಚಿತ್ರಕಲೆ ಸ್ಪರ್ಧೆ ನಡೆಯಿತು.
ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಮುಖ್ಯ ಲೆಕ್ಕಾಧಿಕಾರಿಗಳಾದ ಜ಼ುವೆಲ್ ಖಾನ್ , ನಗರಸಭೆಯ ಪೌರಾಯುಕ್ತ ವಿಜಯ , ಎಇಇ ಸೌಮ್ಯ , ಕಂದಾಯ ಅಧಿಕಾರಿಗಳಾದ ಎಂ.ಎ.ತಾಹಿರ್
ಹಾಗೂ ಬೂತ್ ಮಟ್ಟದ ಅಧಿಕಾರಿಗಳು, ನಗರಸಭೆ ಸಿಬ್ಬಂದಿಗಳು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭ ಕಾಲೇಜಿನ ವತಿಯಿಂದ ಪ್ರಾಂಶುಪಾಲ ಮೇಜರ್ ಪ್ರೊ. ಬಿ.ರಾಘವ, ಸಹ ಪ್ರಠ್ಯ ಚಟುವಟಿಕೆಯ ಸಂಯೋಜಕರಾದ ಡಾ.ರೇಣುಶ್ರೀ, ಕಾಲೇಜಿನ ಅಧ್ಯಾಪಕ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಮತದಾನ ಪ್ರತಿಜ್ಞಾವಿಧಿಯನ್ನು ನಗರಸಭೆಯ ಪೌರಾಯುಕ್ತ ವಿಜಯ ಬೋಧಿಸಿದರು. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.
:: ರಂಗೋಲಿ ಸ್ಪರ್ಧೆ ವಿಜೇತರು ::
ಶಿವ – ದ್ವಿತೀಯ ಎಂ.ಕಾಂ ( ಪ್ರಥಮ)
ಯೋಗಿನಿ ದ್ವಿತೀಯ ಬಿ.ಕಾಂ ( ದ್ವಿತೀಯ)
ಯಶೋಧ ದ್ವಿತೀಯ ಎಂ.ಎ ( ತೃತೀಯ)
:: ಚಿತ್ರಕಲೆ ಸ್ಪರ್ಧೆ ::
ರೋಹಿತ್ ಪಿ.ವಿ – ದ್ವಿತೀಯ ಬಿಸಿಎ (ಪ್ರಥಮ)
ಭೀಮಾ- ಪ್ರಥಮ ಬಿ.ಎ ( ದ್ವಿತೀಯ)
ಮೋನಿಕಾ – ದ್ವಿತೀಯ ಬಿಸಿಎ ( ತೃತೀಯ)







