ಮಡಿಕೇರಿ ಏ.6 NEWS DESK : ಲೋಕಸಭಾ ಚುನಾವಣಾ ಸಂಬಂಧ ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿ ಸ್ಥಾಪಿಸಲಾಗಿರುವ ಭದ್ರತಾ ಕೊಠಡಿ ಮತ್ತು ಮತಗಟ್ಟೆ ಅಧಿಕಾರಿಗಳಿಗೆ ನೀಡುವ ತರಬೇತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಭೇಟಿ ನೀಡಿ, ಪರಿಶೀಲಿಸಿದರು.
ತಾಲೂಕು ಕಚೇರಿಯಲ್ಲಿ ಚುನಾವಣೆ ಕರ್ತವ್ಯದ ಬಗ್ಗೆ ಕೈಕೊಂಡ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿದರು. ಅಲ್ಲದೇ ತಾಲೂಕು ಕಚೇರಿ ರೆಕಾರ್ಡ್ ಶಾಖೆಯಲ್ಲಿ ನಡೆಯುತ್ತಿರುವ ಕಡತಗಳ ಡಿಜಿಟಲೀಕರಣ ಕಾರ್ಯದ ಬಗ್ಗೆ ಮಾಹಿತಿ ಪಡೆದರು.
ತಹಶಿಲ್ದಾರರಾದ ರಾಮಚಂದ್ರ ಹಾಗೂ ಇತರರು ಇದ್ದರು.





































