Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಏ.10 ರಿಂದ ಕೊಡವ ಲೆದರ್ ಬಾಲ್ ಕ್ರಿಕೆಟ್ ಲೀಗ್ ಮೂರನೇ ಆವೃತ್ತಿ ಆರಂಭ*
  • *ಸುಂಟಿಕೊಪ್ಪದಲ್ಲಿ ಶಾಂತಿ ಸಭೆ : ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ದಿನೇಶ್‍ಕುಮಾರ್ ಕರೆ*
  • *ಸೋಮವಾರಪೇಟೆ : ಕಾರ್ಮಿಕರಿಗೆ ಪೂರ್ವಭಾವಿ ಕಲಿಕಾ ತರಬೇತಿ ಕಾರ್ಯಾಗಾರ*
  • *ಯಡೂರಿನಲ್ಲಿ ವೈಸಿಸಿ ಕ್ರಿಕೆಟ್ ಕಪ್ ಪಂದ್ಯಾವಳಿ : ಗರಗಂದೂರಿನ ದಳಪತಿ ಕ್ರಿಕೆಟರ್ಸ್ ತಂಡ ಚಾಂಪಿಯನ್*
  • *ಕೂಡಿಗೆ ಪರೀಕ್ಷಾ ಕೇಂದ್ರದಲ್ಲಿ ಸುಗಮವಾಗಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆ* 
  • *ಪ್ರಸಿದ್ಧ ಎಮ್ಮೆಮಾಡು ಉರೂಸ್ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನ*
  • *ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ನವೀಕರಣ ಕಟ್ಟಡ ಉದ್ಘಾಟನೆ : ಗ್ರಾಹಕರ ಹಿತರಕ್ಷಿಸುವಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಲವು ಕ್ರಮ : ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ*
  • *ಮಾ.21 ರಂದು ಸಿಎನ್‌ಸಿಯಿಂದ “ವಿಚಾರ ಸಂಕಿರಣ” : ಡಾ.ಎಲ್.ಹನುಮಂತಯ್ಯ, ಕೆ.ಪಿ.ಬಾಲಸುಬ್ರಹ್ಮಣ್ಯ, ಎಂ.ಟಿ.ನಾಣಯ್ಯ, ರೇವತಿ ಪೂವಯ್ಯರಿಂದ ವಿಚಾರ ಮಂಡನೆ*
  • *ಜಮೀನು ತೆರವು ಕಾರ್ಯಾಚರಣೆ : ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಮಸಗೋಡು ಗ್ರಾಮಸ್ಥರ ಅಸಮಾಧಾನ*
  • *ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದಿನಿಂದ ಶುರು: 8.65 ಲಕ್ಷ ವಿದ್ಯಾರ್ಥಿಗಳಿಗೆ ಅಗ್ನಿಪರೀಕ್ಷೆ; ಪರೀಕ್ಷಾ ಕೇಂದ್ರಗಳ ಸುತ್ತ 144 ನಿಷೇಧಾಜ್ಞೆ ಜಾರಿ!*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಯುಗಾದಿ ಭವಿಷ್ಯ 2024 : ವರ್ಷಪೂರ್ತಿ ಯಾವ ರಾಶಿಗೆ ಶುಭಫಲ, ಯಾವ ರಾಶಿಗೆ ಅಶುಭ…*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಯುಗಾದಿ ಭವಿಷ್ಯ 2024 : ವರ್ಷಪೂರ್ತಿ ಯಾವ ರಾಶಿಗೆ ಶುಭಫಲ, ಯಾವ ರಾಶಿಗೆ ಅಶುಭ…*

ಏಪ್ರಿಲ್ 8, 20245 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

NEWS DESK : 8.04.2024 ಸೋಮವಾರದಂದು ಕಳೆದ ವರ್ಷದ ಶೋಭಕೃತ್ ಸಂವತ್ಸರಕ್ಕೆ ವಿದಾಯ ಹೇಳಿ ಹಿಂದು ಪಂಚಾಂಗದ ಪ್ರಕಾರ ಚೈತ್ರ ಮಾಸದ ಶುಕ್ಲ ಪಕ್ಷದ ವಸಂತ ಋತುವಿನ ಪ್ರಥಮ ದಿನವನ್ನು (ಪಾಡ್ಯ) ಯುಗಾದಿ ಹೊಸ ವರ್ಷವೆಂದು ಹೇಳಲಾಗುತ್ತದೆ. ಹೊಸ ಸಂವತ್ಸರ ಆರಂಭ ಎಂದು ಕರೆಯಲ್ಪಡುತ್ತದೆ.
ದಿನಾಂಕ 09.04.2024 ಮಂಗಳವಾರದಂದು ಕ್ರೋಧಿನಾಮ ಸಂವತ್ಸರ ಆರಂಭವಾಗಲಿದೆ. ಈ ಕ್ರೋಧಿ ಸಂವತ್ಸರದಲ್ಲಿ ಪ್ರಾಕೃತಿಕ, ಸಾಮಾಜಿಕ, ವೈಯಕ್ತಿಕ, ದೈನಂದಿನ ಪರಿಸ್ಥಿತಿ ಹೇಗೆ ಇರುತ್ತದೆ ಎಂಬುವುದನ್ನು ಸಂಕ್ಷಿಪ್ತ ನೋಟದಲ್ಲಿ ತಿಳಿಯೋಣ.
ಈ ಸಂವತ್ಸರದಲ್ಲಿ ಎರಡು ಚಂದ್ರಗ್ರಹಣ ಮತ್ತು ಎರಡು ಸೂರ್ಯಗ್ರಹಣ ಘಟಿಸಲಿದ್ದು, ಈ ನಾಲ್ಕು ಗ್ರಹಣಗಳು ಭಾರತದಲ್ಲಿ ಗೋಚರಿಸದೆ ಇರುವುದು ವಿಶೇಷವಾಗಿದೆ.
ಈ ಸಂವತ್ಸರದಲ್ಲಿ ಕುಜ ರಾಜನ ಸ್ಥಾನದಲ್ಲಿದ್ದರೆ, ಶನಿ ಮಂತ್ರಿಯ ಸ್ಥಾನದಲ್ಲಿದ್ದಾರೆ. ಕುಜನ ಅವಕೃಪೆಯಿಂದ ದೊಡ್ಡ ದೊಡ್ಡ ರಾಜಕಾರಣಿಗಳ ಸಾವು, ನೋವು ನಡೆಯಲಿದೆ. ಅತಿ ವ್ಯಸನದಿಂದ ಮಾನಹಾನಿಯಾಗಲಿದೆ, ಅಧಿಕಾರ ಕಳೆದುಕೊಳ್ಳಲಿದ್ದಾರೆ, ಅಲ್ಲಲ್ಲಿ ಅಸ್ಥಿರ ರಾಜಕಾರಣ ನಡೆಯಲಿದೆ.
ಶನಿಯು ಮಂತ್ರಿ ಸ್ಥಾನದಲ್ಲಿರುವುದರಿಂದ ನೌಕರ ವರ್ಗದವರಿಗೆ ತುಂಬಾ ಆಪತ್ತು ಬರಲಿದೆ. ಕ್ರಿಮಿಕೀಟಗಳ ಹಾವಳಿ, ಬೆಳೆನಾಶ, ಅಲ್ಲಲ್ಲಿ ನೀರಿನ ಕೊರತೆ ಕಂಡು ಬರಲಿದ್ದು, ಮುಂಗಾರು ಮಳೆ ಕಡಿಮೆಯಾಗಲಿದೆ. ಹಿಂಗಾರು ಮಳೆ ಚೆನ್ನಾಗಿ ಆಗಲಿದೆ. ಒಟ್ಟಾರೆ ಈ ವರ್ಷದ ಆದಾಯ ನಾಲ್ಕು ಖರ್ಚು, ಏಳು ಆಗಿದೆ.
ಕ್ರೋಧಿನಾಮ ಸಂವತ್ಸರದಲ್ಲಿ ಯಾವ ಯಾವ ರಾಶಿಯವರಿಗೆ ಉತ್ತಮ ಫಲ, ಯಾವ ಯಾವ ರಾಶಿಯವರಿಗೆ ಅಶುಭ ಫಲ ಎಂಬುವುದನ್ನು ಸಂಕ್ಷಿಪ್ತವಾಗಿ ತಿಳಿಯೋಣ.                                                                     ::: ಯುಗಾದಿ ವರ್ಷ ಭವಿಷ್ಯ :::

ಮೇಷ ರಾಶಿ : ಈ ರಾಶಿಯಲ್ಲಿ ವರ್ಷಾರಂಭದಲ್ಲಿ ಗುರು ಸ್ವಸ್ಥಾನದಲ್ಲಿ ಇರುವುದರಿಂದ ಮೊದಲು ಒಂದೂವರೆಗೆ ತಿಂಗಳು ಮಾನಸಿಕ ನೆಮ್ಮದಿ, ಆರೋಗ್ಯ ಭಾಗ್ಯ, ಪ್ರವಾಸ, ಹೊಸ ಸ್ನೇಹಿತರ ಪರಿಚಯ, ಹಣಕಾಸು ಅಭಿವೃದ್ಧಿ ಎಲ್ಲವೂ ಶುಭಕರ ಸಮಾಚಾರ ನಡೆಯುವುದು. ನಂತರ ಅನಾರೋಗ್ಯ, ಮನೆಯಲ್ಲಿ ಕಿರಿಕಿರಿ, ಸ್ಥಾನ ಪಲ್ಲಟ, ಹಣವು ನೀರಿನಂತೆ ಖರ್ಚಾಗುವುದು, ಕೆಲಸ ಕಾರ್ಯವು ಮಂದಗತಿಯಲ್ಲಿ ಸಾಗುವುದು, ಹಳೆಯ ದ್ವೇಷಿಗಳು ಪುನಃ ಕಿರಿಕಿರಿ ಉಂಟು ಮಾಡುವರು. ಆದರೂ ಆಕಸ್ಮಿಕವಾಗಿ ಹಣ ಕೈಗೆ ಸೇರುವುದು. ಮೇಷ ರಾಶಿಯವರಿಗೆ ಈ ವರ್ಷದ ಆದಾಯ, ಖರ್ಚು ಸಮ ಸಮವಾಗಿ ಇರುತ್ತದೆ. (ಪರಿಹಾರ : ಗುರು ಗಣಪತಿಯ ಆರಾಧನೆ ಮಾಡಿ.)

ವೃಷಭ ರಾಶಿ :ವರ್ಷಾರಂಭದಲ್ಲಿ ಈ ರಾಶಿಯವರಿಗೆ ಮಿತಿ-ಮೀರಿ ಹಣ ಖರ್ಚಾಗುವುದು, ಸುತ್ತಾಟ, ಬಂಧುಗಳ ಕಿರಿಕಿರಿ, ನಂತರ ಗುರುವು ವೃಷಭರಾಶಿಗೆ ಬಂದ ಮೇಲೆ ಮಾನಸಿಕ ಸಂತೋಷ, ಆರೋಗ್ಯ ಅಭಿವೃದ್ಧಿಯಾಗಲಿದೆ. ಹೊಸದಾಗಿ ಸ್ನೇಹಿತರು ಸಿಗುವರು, ಸದಾ ಸುಖ ಭೋಜನ ದೊರಕುವುದು, ದಾಂಪತ್ಯ ಜೀವನ ಉತ್ತಮ, ಹಣಕಾಸು ಸಂಬಂಧ ಉತ್ತಮ, ಪ್ರಗತಿ, ವ್ಯಾಪಾರ, ವಹಿವಾಟುಗಳು ಕುದುರುವಿಕೆ, ಲಾಟರಿ, ಚೀಟಿ ಫಂಡ್ ನಿಂದ ಉತ್ತಮ ಲಾಭ, ಕೃಷಿಕರಿಗೆ ಕೃಷಿ ಸಂಬಂಧ ಉತ್ತಮ ಫಲ, ಒಡವೆ, ಬಂಗಾರ ಹಾಗೂ ಗೃಹ ಅಲಂಕಾರ ವಸ್ತುಗಳ ಖರೀದಿ ಹೀಗೆ ಅನೇಕ ವಿಚಾರಗಳಲ್ಲಿ ಸಂತೋಷ ಪಡುವಿರಿ. ಒಟ್ಟಾರೆ ನಿಮಗೆ ಉತ್ತಮ ಫಲ, ಆದಾಯ 7, ಖರ್ಚು 5. (ಪರಿಹಾರ : ಶುಕ್ರವಾರ ದೇವಿ ದೇವಾಲಯಕ್ಕೆ ಭೇಟಿ ನೀಡಿ)  

ಮಿಥುನ ರಾಶಿ : ಈ ರಾಶಿಯವರುಗೆ ಮೊದಲು ಅರ್ಧ ತಿಂಗಳು ಉತ್ತಮ ಫಲವನ್ನು ನೀಡಿದರು, ನಂತರ ಹಣಕಾಸಿನ ಒತ್ತಡ, ಅನಾರೋಗ್ಯದಿಂದ ಶಸ್ತ್ರ ಚಿಕಿತ್ಸ ಆಗುವ ಸಾಧ್ಯತೆಗಳು, ಬಂಧು ಕಲಹ, ಹಿರಿಯರಿಗೆ ಅಸಹಾಕಾರ, ಮಕ್ಕಳಿಂದ ವಿರೋಧ, ಸಾಮಾಜಿಕ ಕಾರ್ಯ ಕ್ಷೇತ್ರದಲ್ಲಿ ಪದೇ ಪದೇ ಮಾನಹಾನಿ, ಕೈಮೀರಿ ಸಾಲವಾಗಲಿದೆ. ಹಿರಿಯರ ಮಾರ್ಗದರ್ಶನವನ್ನು ಪಡೆದು ಮುಂದೆ ಸಾಗುವ ಅಗತ್ಯತೆ ಇದ್ದು, ಸಣ್ಣಪುಟ್ಟ ಸಂಪಾದನೆಯು ಆಗಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುವ ಸಮಯವಾಗಿರುತ್ತದೆ. ಆದಾಯ 3, ಖರ್ಚು 8. (ಪರಿಹಾರ :: ಆಂಜನೇಯ ಸ್ವಾಮಿ ದೇವಾಲಯಕ್ಕೆ ಗುರುವಾರ ಆಗಾಗ ದರ್ಶನ ಪಡೆಯಿರಿ.)

ಕರ್ಕಾಟಕ ರಾಶಿ : ಈ ರಾಶಿಯವರಿಗೆ ಮೊದಲು ಅರ್ಧ ತಿಂಗಳು ತುಂಬಾ ಕಠಿಣವಾಲಿದ್ದು, ನಂತರ ಅತುತ್ತಮಯೋಗ ಕೂಡಿ ಬರಲಿದೆ. ವಿವಿಧ ಕ್ಷೇತ್ರದಲ್ಲಿ ಈ ಹಿಂದೆಯೆಂದೂ ಕಾಣದ ಅಭಿವೃದ್ಧಿಯನ್ನು ಕಾಣಬಹುದು. ಮುಟ್ಟಿದ್ದೆಲ್ಲ ಬಂಗಾರವಾಗಲಿದೆ. ದಾಂಪತ್ಯ ಜೀವನ ಉತ್ತಮ, ಕೆಲಸದ ಸ್ಥಳದಲ್ಲಿ ಮುಂಬಡ್ತಿ, ವಿವಾಹ ಆಕಾಂಕ್ಷಿಗಳಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಸದಾಕಾಲ ಬೇರೆಯವರ ಬಗ್ಗೆ ಚಿಂತಿಸುವ ನೀವು ನಾಲಿಗೆ ಹರಿಬಿಟ್ಟು ಸಮಸ್ಯೆಯನ್ನು ಸೃಷ್ಟಿ ಮಾಡಿಕೊಳ್ಳುವಿರಿ. ಅದರ ಕುರಿತು ಎಚ್ಚರಿಕೆ ವಹಿಸಬೇಕಾಗಿದೆ. ಅನಿರೀಕ್ಷಿತ ಹಣಕಾಸು ಒದಗಿ ಬಂದರು ಕೂಡ ಕೈಯಲ್ಲಿ ನಿಲ್ಲುವುದಿಲ್ಲ. ಆದಾಯ 4, ಖರ್ಚು 4 (ಪರಿಹಾರ : ದೇವಿ ದೇವಾಲಯಕ್ಕೆ ಶುಕ್ರವಾರ ದರ್ಶನ ಪಡೆಯಿರಿ.)

ಸಿಂಹ ರಾಶಿ : ಈ ರಾಶಿಯವರಿಗೆ ಈ ವರ್ಷದಲ್ಲಿ ತುಂಬಾ ಸುತ್ತಾಟವಿರುತ್ತದೆ. ಯಾವುದೇ ಸಮಸ್ಯೆ ಬಂದರು ಎದುರಿಸುತ್ತೇನೆ ಎಂಬ ಮನೋಭಾವನೆ ಇರುವ ನೀವು ಈ ವರ್ಷ ಮಾನಸಿಕ ಚಂಚಲಗೊಳ್ಳುವಿರಿ. ಹಣಕಾಸು ಕೊಡು-ತೆಗೆದುಕೊಳ್ಳುವುದರಲ್ಲಿ ಹೆಚ್ಚು ಕಾಲಹರಣವಾಗುವುದು. ದೂರ ಪ್ರಯಾಣ, ಸ್ಥಳ ಬದಲಾವಣೆ ಹೀಗೆ ಕೆಲವು ಅನಿರೀಕ್ಷಿತ ಸಂದರ್ಭಗಳು ಒದಗಿ ಬರಬಹುದು. ಆರ್ಥಿಕವಾಗಿ ತುಂಬಾ ಏರುಪೇರು ಉಂಟಾಗಲಿದ್ದು, ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ಆದಾಯ 3, ಖರ್ಚು 14 (ಪರಿಹಾರ : ಮಹಾವಿಷ್ಣುವಿನ ಆರಾಧನೆ ಮಾಡಿ.)

ಕನ್ಯಾ ರಾಶಿ : ಈ ರಾಶಿಯವರು ಸ್ಥಳ ಬದಲಾವಣೆ ಹೊಂದಲಿದ್ದು, ಗುರು-ಹಿರಿಯರ ಪ್ರಸಂಶೆಗೆ ಪಾತ್ರರಾಗಲಿದ್ದೀರಿ. ಹೊಸಮನೆ ನಿರ್ಮಾಣ ಮಾಡುವ ಸಾಧ್ಯತೆ, ಸಂತಾನ ನಿರೀಕ್ಷೆಯಲ್ಲಿರುವವರಿಗೆ ಸಂತಾನಭಾಗ್ಯ ದೊರೆಯಲಿದೆ. ಕೆಲವು ಕಿಡಿಗೇಡಿಗಳಿಂದ ನಿಂಧನೆಗೊಳಗಾಗಿ ಕೆಲವರಲ್ಲಿ ಸಂಬಂಧವನ್ನು ಕಳೆದುಕೊಳ್ಳಲಿದ್ದೀರಿ. ಆಹಾರ ವ್ಯತ್ಯಾಸದಿಂದ ಉದರ ಭಾಗದ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಮನಸ್ಸಿಗೆ ಬಂದ ವಿಚಾರವನ್ನು ಯಾರ ಬಗ್ಗೆ ನಾಲಿಗೆ ಹರಿ ಬಿಡಬೇಡಿ, ಇದರಿಂದ ಅಪಾಯವಿದೆ. ಹಣಕಾಸು ಎಷ್ಟು ಲಾಭವೋ ಅಷ್ಟೇ ನಷ್ಟ ಆದಾಯ 3, ಖರ್ಚು 3. (ಪರಿಹಾರ : ಶಿವಾರಾಧನೆ ಮಾಡಿ.)

ತುಲಾ ರಾಶಿ : ಸದಾ ಗೊಂದಲದಲ್ಲಿರುವ ಈ ರಾಶಿಯವರು “ಕಾಯಕವೇ ಕೈಲಾಸ”ವೆಂದು ಈ ವರ್ಷ ದುಡಿಮೆಯನ್ನು ಹೆಚ್ಚು ಮಾಡುವಿರಿ. ಆದರೆ ಗುರು ಬಲವಿಲ್ಲದ ನೀವು ಯಾವ ಸಾಧನೆಯನ್ನೂ ಈ ವರ್ಷ ಮಾಡಲು ಸಾಧ್ಯವಾಗದು. ಯಥಾಸ್ಥಿತಿಯನ್ನು ಕಾಯ್ದುಕೊಂಡು ಹೋಗುವಿರಿ. ಆದರೂ ಕೋರ್ಟು, ಕಚೇರಿ, ವ್ಯಾಜ್ಯ ಈ ಮೊದಲೇ ಇದ್ದವರಿಗೆ ಸೋಲು ಉಂಟಾಗುವುದು. ಹಣಕಾಸು ವಿಚಾರದಲ್ಲಿ ಪ್ರತಿ ದಿನ ಚಿಂತೆಗೊಳಗಾಗುವಿರಿ. ಈ ವರ್ಷದ ಆದಾಯ 2, ಖರ್ಚು 3. (ಪರಿಹಾರ : ಸದಾ ಶಿನಿಮಹಾತ್ಮನ ಆರಾಧನೆ ಮಾಡಿ.)

ವೃಶ್ಚಿಕ ರಾಶಿ : ಈ ರಾಶಿಯವರು ಈ ವರ್ಷ ಉತ್ತಮ ಫಲವನ್ನು ಪಡೆಯುವರು. ವರ್ಷಾರಂಭದ ಎರಡು ತಿಂಗಳ ನಂತರ ಉತ್ತಮ ಗುರು ಬಲವನ್ನು ಹೊಂದಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು ಹೊಂದುವಿರಿ. ಸಂಬಂಧಗಳು ವೃದ್ಧಿಸುವುದು, ವಿವಿಧ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ಕೊಡುವಿರಿ, ವಸ್ತ್ರ, ಒಡವೆ ಹೆಚ್ಚಾಗಿ ಸಂಪಾದಿಸುವಿರಿ, ಒಟ್ಟಾರೆ ಈ ವರ್ಷ ಉತ್ತಮ ಫಲವನ್ನು ಹೊಂದುವಿರಿ. ಹಣಕಾಸು ಸಮಸ್ಯೆ ಪರಿಹಾರವಾಗುವುದು. ಆದಾಯ 4, ಖರ್ಚು 3
ಧನು ರಾಶಿ : ಈ ರಾಶಿಯವರು ಮಿತಿ ಮೀರಿಯೋಜನೆಯನ್ನು ಹಾಕುವವರಾಗಿದ್ದಾರೆ. ಈ ವರ್ಷದ ಯೋಜನೆಯನ್ನು ಸಂಪೂರ್ಣಗೊಳಿಲು ಹರಸಹಾಸ ಪಡಬೇಕಾಗುತ್ತದೆ. ಆಗಾಗ ಬೆನ್ನಿಗೆ ಸಂಬಂಧಪಟ್ಟ ಕಾಯಿಲೆಗಳು ಪೀಡಿಸಲಿದೆ. ಆದರೂ ಕೀರ್ತಿ ಹೆಚ್ಚಾಗಲಿದ್ದು, ಪ್ರಯಾಣ ಹಾಗೂ ಸ್ಥಳ ಬದಲಾವಣೆ ಕಂಡು ಬರುತ್ತದೆ. ರಾಜಕಾರಣಿಗಳಿಗೆ ಉತ್ತಮ ಯೋಗವಿದೆ. ಹಣಕಾಸು ವಿಚಾರದಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಆದಾಯ 4, ಖರ್ಚು 9 (ಪರಿಹಾರ : ಕುಲದೇವ ಆರಾಧನೆ ಮಾಡಿ)

ಧನು ರಾಶಿ : ಈ ರಾಶಿಯವರು ಯಾವಾಗಲು ಮಿತಿ ಮೀರಿಯೋಜನೆಯನ್ನು ಹಾಕುವರಾಗಿದ್ದು, ಈ ವರ್ಷ ಇಟ್ಟುಕೊಂಡು ಯೋಜನೆಯು ಸಂಪೂರ್ಣಗೊಳಿಲು ಹರಸಹಾಸ ಪಡಬೇಕಾಗುತ್ತದೆ. ಆಗಾಗ ಬೆನ್ನಿಗೆ ಸಂಬಂಧಪಟ್ಟ ಕಾಯಿಲೆಗಳು ಪೀಡಿಸಲಿದೆ. ಆದರೂ ಕೀರ್ತಿ ಹೆಚ್ಚಾಗಲಿದ್ದು, ಪ್ರಯಾಣ ಹಾಗೂ ಸ್ಥಳ ಬದಲಾವಣೆ ಕಂಡು ಬರುತ್ತದೆ. ರಾಜಕರಣಿಗಳಿಗೆ ಉತ್ತಮ ಯೋಗವಿದೆ. ಹಣಕಾಸುವಿನಲ್ಲಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ ಆದಾಯ 4, ಖರ್ಚು 9 (ಪರಿಹಾರ : ಕುಲದೇವ ಆರಾಧನೆ ಮಾಡಿ)

ಮಕರ ರಾಶಿ : ಈ ರಾಶಿಯವರು ಸಾಡೆಸಾತ್ (ಅರ್ಧ ಶನಿ) ಶನಿಯ ಬಾಧೆಯಲ್ಲಿ ತತ್ತರಿಸಿರುವ ಇವರಿಗೆ ವರ್ಷಾರ್ಧದಲ್ಲಿ ಉತ್ತಮ ಫಲ ದೊರಕಲಿದ್ದು, ಬಂಧು ಬಾಂಧವರ ಪ್ರೀತಿ-ವಿಶ್ವಾಸ ಗಳಿಸಲಿದ್ದೀರಿ. ಹೊಸ ಸಂಬಂಧ ಕೂಡಿ ಬರಲಿದೆ. ಹೊಸ ಸ್ಥಾನಮಾನ, ತಕ್ಕಮಟ್ಟಿಗೆ ಆರೋಗ್ಯ ಸುಧಾರಣೆ ಹೀಗೆ ವಿವಿಧ ಕ್ಷೇತ್ರದಲ್ಲಿ ಉತ್ತಮ ಫಲವನ್ನು ಹೊಂದಲಿದ್ದೀರಿ, ಹಣಕಾಸಿನ ಆದಾಯ ತಕ್ಕಮಟ್ಟಿಗೆ ಸುಧಾರಿಸಿ, ಹಳೇ ಸಾಲವನ್ನು ತೀರಿಸುವಿರಿ. ಆದಾಯ 8, ಖರ್ಚ 8.

ಕುಂಭ ರಾಶಿ : ಈ ರಾಶಿಯವರು ಜನ್ಮ ಶನಿಯಿಂದ ತತ್ತರಿಸಿ ಹೋದವರಿಗೆ ಕಳೆದುಹೋದ ಸಂಬಂಧಗಳು ಮರಳಿ ಕೂಡಿ ಬರಲಿದೆ. ಉದ್ಯೋಗ ಸ್ಥಳಗಳಲ್ಲಿ ಅಲ್ಪ ಸಮಾಧಾನವನ್ನು ಹೊಂದುವಿರಿ. ಗುರು ಬಲವಿಲ್ಲದ ಈ ರಾಶಿಯವರಿಗೆ ಮೇಲಾಧಿಕಾರಿಗಳ ಒತ್ತಡ ಹೆಚ್ಚುತ್ತದೆ. ಆದರೂ ಸಂಯಮ ಉಳ್ಳ ನೀವು ನಿಧಾನವಾಗಿ ಸಾಧಿಸುವಿರಿ. ಆಕಾಶಕ್ಕೆ ಏಣಿ ಹಾಕಲು ಹೋಗಿ, ಪಾತಾಳಕ್ಕೆ ಇಳಿಯುವ ಸಾಧ್ಯತೆ ಹೆಚ್ಚಾಗಿ ಕಂಡು ಬರುತ್ತದೆ. ಈ ವರ್ಷವು ಆದಾಯಕ್ಕಿಂತ ಖರ್ಚು ಹೆಚ್ಚು. ಆದಾಯ 3, ಖರ್ಚು 5 (ಪರಿಹಾರ : ಆಂಜನೇಯ ದೇವಾಲಯಕ್ಕೆ ಗುರುವಾರ, ಶನಿವಾರ ಭೇಟಿ ನೀಡಿ, ಆರಾಧನೆ ಮಾಡಿ)

ಮೀನಾ ರಾಶಿ : ಸದಾ ಚಂಚಲ ಸ್ವಭಾವದಿಂದ ಇರುವ ಈ ರಾಶಿಯವರಿಗೆ ವರ್ಷಾರಂಭದಲ್ಲಿ ಗುರುವಿನ ಬಲ ಇದ್ದರು ಗುರು ಹಸ್ತದಿಂದ ಹಾಗೂ ವರ್ಷದ ಮಧ್ಯದಲ್ಲಿ ಶನಿ ಮಹಾತ್ಮನನ್ನು ನಿಮ್ಮ ರಾಶಿಗೆ ಬರುವುದರಿಂದ ಕಷ್ಟ-ದುಃಖ, ಮಾನಸಿಕ ಒತ್ತಡ ಹೆಚ್ಚಾಗಲಿದೆ. ತಾವೇ ಮಾಡಿಕೊಂಡ ಪ್ರಮಾದದಿಂದ ವೈರಿಗಳ ಎದುರಿಗೆ ತಲೆ ತಗ್ಗಿಸಿ ನಿಲ್ಲುವ ಸಂದರ್ಭ ಬರಲಿದೆ. ಆರೋಗ್ಯ ಉತ್ತಮವಾಗಿರುವುದು. ಹಳೆಯ ಕೆಲವು ಸಂಬಂಧಿಕರು ಹಾಗೂ ಸ್ನೇಹಿತರು ದೂರವಾಗಿ ಹೊಸ ಸಂಬಂಧ ಹಾಗೂ ಸ್ನೇಹಿತರು ಬರುವ ಸಾಧ್ಯತೆಯಿದೆ. ಹೆಚ್ಚಾಗಿ ಎಣ್ಣೆಯ ಪದಾರ್ಥಗಳನ್ನು ಸ್ವೀಕರಿಸುವುದರಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದಾಯ ಹೆಚ್ಚು, ಖರ್ಚು ಕಡಿಮೆ. ಆದಾಯ 7, ಖರ್ಚು 3 (ಪರಿಹಾರ : ಗುರುವಾರ ಹಾಗೂ ಶನಿವಾರ ಶ್ರೀ ರಾಮನ ದರ್ಶನ ಮಾಡಿ.)

                                                                                       “ಸರ್ವೇ ಜನಂ ಸುಖಿನೊ ಭವಂತು”

ಡಾ.ಮಹಾಬಲೇಶ್ವರ ಭಟ್, ಮೂರ್ನಾಡು
 ಮೊ.8105634429 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಏ.10 ರಿಂದ ಕೊಡವ ಲೆದರ್ ಬಾಲ್ ಕ್ರಿಕೆಟ್ ಲೀಗ್ ಮೂರನೇ ಆವೃತ್ತಿ ಆರಂಭ*

ಮಾರ್ಚ್ 18, 2026

*ಸುಂಟಿಕೊಪ್ಪದಲ್ಲಿ ಶಾಂತಿ ಸಭೆ : ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ದಿನೇಶ್‍ಕುಮಾರ್ ಕರೆ*

ಮಾರ್ಚ್ 18, 2026

*ಸೋಮವಾರಪೇಟೆ : ಕಾರ್ಮಿಕರಿಗೆ ಪೂರ್ವಭಾವಿ ಕಲಿಕಾ ತರಬೇತಿ ಕಾರ್ಯಾಗಾರ*

ಮಾರ್ಚ್ 18, 2026

*ಸುಂಟಿಕೊಪ್ಪದಲ್ಲಿ ಶಾಂತಿ ಸಭೆ : ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ದಿನೇಶ್‍ಕುಮಾರ್ ಕರೆ*

ಮಾರ್ಚ್ 18, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸುಂಟಿಕೊಪ್ಪ ಮಾ.18 NEWS DESK : ಹಬ್ಬದ ದಿನದಂದು ಶಾಂತಿ, ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಕುಶಾಲನಗರ ವೃತ್ತ ನಿರೀಕ್ಷಕರಾದ…

*ಸೋಮವಾರಪೇಟೆ : ಕಾರ್ಮಿಕರಿಗೆ ಪೂರ್ವಭಾವಿ ಕಲಿಕಾ ತರಬೇತಿ ಕಾರ್ಯಾಗಾರ*

ಮಾರ್ಚ್ 18, 2026

*ಯಡೂರಿನಲ್ಲಿ ವೈಸಿಸಿ ಕ್ರಿಕೆಟ್ ಕಪ್ ಪಂದ್ಯಾವಳಿ : ಗರಗಂದೂರಿನ ದಳಪತಿ ಕ್ರಿಕೆಟರ್ಸ್ ತಂಡ ಚಾಂಪಿಯನ್*

ಮಾರ್ಚ್ 18, 2026

*ಕೂಡಿಗೆ ಪರೀಕ್ಷಾ ಕೇಂದ್ರದಲ್ಲಿ ಸುಗಮವಾಗಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆ* 

ಮಾರ್ಚ್ 18, 2026

*ಪ್ರಸಿದ್ಧ ಎಮ್ಮೆಮಾಡು ಉರೂಸ್ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನ*

ಮಾರ್ಚ್ 18, 2026

*ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ನವೀಕರಣ ಕಟ್ಟಡ ಉದ್ಘಾಟನೆ : ಗ್ರಾಹಕರ ಹಿತರಕ್ಷಿಸುವಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಲವು ಕ್ರಮ : ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ*

ಮಾರ್ಚ್ 18, 2026

*ಮಾ.21 ರಂದು ಸಿಎನ್‌ಸಿಯಿಂದ “ವಿಚಾರ ಸಂಕಿರಣ” : ಡಾ.ಎಲ್.ಹನುಮಂತಯ್ಯ, ಕೆ.ಪಿ.ಬಾಲಸುಬ್ರಹ್ಮಣ್ಯ, ಎಂ.ಟಿ.ನಾಣಯ್ಯ, ರೇವತಿ ಪೂವಯ್ಯರಿಂದ ವಿಚಾರ ಮಂಡನೆ*

ಮಾರ್ಚ್ 18, 2026

*ಜಮೀನು ತೆರವು ಕಾರ್ಯಾಚರಣೆ : ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಮಸಗೋಡು ಗ್ರಾಮಸ್ಥರ ಅಸಮಾಧಾನ*

ಮಾರ್ಚ್ 18, 2026

*ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದಿನಿಂದ ಶುರು: 8.65 ಲಕ್ಷ ವಿದ್ಯಾರ್ಥಿಗಳಿಗೆ ಅಗ್ನಿಪರೀಕ್ಷೆ; ಪರೀಕ್ಷಾ ಕೇಂದ್ರಗಳ ಸುತ್ತ 144 ನಿಷೇಧಾಜ್ಞೆ ಜಾರಿ!*

ಮಾರ್ಚ್ 18, 2026

*ಕೊಡಗಿನಲ್ಲಿ ವನ್ಯಜೀವಿ ಉಪಟಳ : ಅರಣ್ಯ ಸಚಿವರಿಂದ ಮಹತ್ವದ ಸಭೆ : ಶಾಸಕದ್ವಯರು ಭಾಗಿ*

ಮಾರ್ಚ್ 18, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.