Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಸಂಭ್ರಮದ ದಿನ ಈದ್ ಉಲ್ ಫಿತರ್
ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಸಂಭ್ರಮದ ದಿನ ಈದ್ ಉಲ್ ಫಿತರ್

ಏಪ್ರಿಲ್ 10, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

NEWS DESK :ಪುಣ್ಯ ಮಾಸ ರಂಜಾನ್ ತಿಂಗಳು ವಿದಾಯ ಹೇಳುತ್ತಿದೆ  ರಮ್ಜಾನ್ ಸತ್ಯ ವಿಶ್ವಾಸಿಗಳಿಗೆ ಪುಣ್ಯಗಳ ಕೊಯ್ಲು ದಿನವಿಡೀ ಹಸಿವಿನಿಂದಿ ದ್ದು  ಸೃಷ್ಟಿಕರ್ತನ ಸ್ತುತಿ ಸ್ತೋತ್ರಗಳನ್ನು ಮಾಡುತ್ತಾ ಕಳೆಯುವ ಸತ್ಯ ವಿಶ್ವಾಸಿಗೆ ಶವ್ವಾಲ್ ತಿಂಗಳ ಮೊದಲ ದಿನ ಹಬ್ಬವಾಗಿರುತ್ತದೆ. ರಂಜಾನ್ ತಿಂಗಳಲ್ಲಿ ಅವನು ಹಲವು ಅನುಭವ ಗಳನ್ನು ಪಡೆದಿರುತ್ತಾನೆ. ನಿತ್ಯ ಆರಾಧನೆ ಮತ್ತು ಪಾಪ ಕಾರ್ಯಗಳಿಂದ ದೂರವಿರುತ್ತಾ ಸಿಗುವ ಆಧ್ಯಾತ್ಮಿಕ ಅನುಭೂತಿ ಒಂದೆಡೆಯಾದರೆ ರಂಜಾನಿನ ದಿನವಿಡೀ ಹಸಿದಿರುವುದರಿಂದ ದೈಹಿಕ ಇಚ್ಛೆಗಳಿಂದ ದೂರವಿರುವುದರಿಂದ ಬಿಡುವಿಲ್ಲದ ಹೊರತಾಗಿಯೂ ಬಿಡುವು ಮಾಡಿಕೊಂಡು ಆರಾಧನೆಗಾಗಿ ಸಮಯವನ್ನು ನಿಗದಿ ಪಡಿಸುವುದರಿಂದ ತ್ಯಾಗ ಮನೋಭಾವ ಸಮಯ ಪಾಲನೆ ಯ ಶಿಸ್ತು ಆತನಲ್ಲಿ ಬೆಳೆದಿರುತ್ತದೆ. ಹೀಗೆ ಒಂದು ತಿಂಗಳ ನಿರಂತರ ಉಪವಾಸದಿಂದ ಒಬ್ಬ ಮನುಷ್ಯನು ಸಂಪೂರ್ಣವಾಗಿ ಪರಿಶುದ್ಧನಾಗಿರುತ್ತಾನೆ ಅವನ ಬದುಕಿನಲ್ಲಿಯೂ ಬದಲಾವಣೆಯಾಗಿರುತ್ತದೆ ಅವನ ಶರೀರ ಮತ್ತು ಮನಸ್ಸು ಎರಡು ಎಲ್ಲಾ ರೀತಿಯ ಕೆಡುಕು ರೋಗಗಳಿಂದ ದುಶ್ಚಟತನದಿಂದ ಶುದ್ದಿಯಾಗಿರುತ್ತದೆ. ರಂಜಾನ್ ಸಮಾಜಕ್ಕೆ ದೊಡ್ಡ ಪರಿವರ್ತನೆಯ ಸುಧಾರಣೆಯ ಪಾಠವನ್ನೇ ಕಲಿಸಿಕೊಟ್ಟಿರುತ್ತದೆ. ಹಸಿವೆಯಲ್ಲಿ ಯಾವುದೇ ಭೇದವಿಲ್ಲ ದನಿಕನಾಗಿದ್ದರೂ ಬಡವನಾಗಿದ್ದರೂ ಅದರ ರುಚಿ ಒಂದೇ ಆಗಿರುತ್ತದೆ ಜಗತ್ತಿನಲ್ಲಿ ಮೂರು ಹೊತ್ತು ಸರಿಯಾಗಿ ಊಟಕ್ಕಿಲ್ಲದ ನಿರ್ಗತಿಕ ಅನುಭವಿಸುವ ಅದೇ ಹಸಿವನ್ನು ರಂಜಾನಿನ ಹಗಲಿನಲ್ಲಿ ಎಲ್ಲಾ ಐಷಾರಾಮವು ಇರುವ ಓರ್ವ ಧನಿಕ ಮುಸ್ಲಿಂ ವಿಶ್ವಾಸಿಯು ಅನುಭವಿಸಬೇಕಾಗುತ್ತದೆ ಇದು ಇಸ್ಲಾಂ ಪ್ರತಿಯೋರ್ವ ಮುಸ್ಲಿಮನಿಗೆ ಕಲಿಸುವ ಒಂದು ಶಿಸ್ತು ಆಗಿದೆ ಮಾನವನು ಕೆಡುಕಿನಿಂದ ದೂರವಿರಲು ಮತ್ತು ಒಳಿತಿನ ಹತ್ತಿರವಿರಲು ನೈಸರ್ಗಿಕವಾಗಿ ಬಯಸುತ್ತಾನೆ.  ಇದು ಮನುಷ್ಯನ ಹೊಣೆ ಎಂದು ಕುರಾನ್ ಆತನಿಗೆ ಮಾರ್ಗದರ್ಶನ ನೀಡಿದೆ ಈ ಹೊಣೆಗಾರಿಕೆಯನ್ನು ಆತ ತನ್ನ ಇಡೀ ಜೀವನದಲ್ಲಿ ಅಳವಡಿಸಿಕೊಂಡರೆ ಆತ ಭಯ ಭಕ್ತಿ ಉಳ್ಳವನು ಉತ್ತಮ ಮಾನವನು ಎನಿಸಿಕೊಳ್ಳುತ್ತಾನೆ. ಇದುವೇ ರಂಜಾನಿನ ಉಪವಾಸದ ಮೂಲಕ ಇರುವ ಮುಖ್ಯ ಉದ್ದೇಶ  ಅದೇ ರೀತಿ ಈ ಜೀವನದಲ್ಲಿ ದುರ್ವಿಚಾರ ಹಾಗೂ ದುಷ್ಕೃತ್ಯದಿಂದ ರಕ್ಷಣೆ ಹೊಂದ ಬಯಸುವ ಮಾನವನು ತನ್ನ ಆರಾಧನೆಯನ್ನು ಅಲ್ಲಾಹನಿಗೆ ಮೀಸಲಿಡುವ ಮೂಲಕ ಪರಲೋಕ ಜೀವನದಲ್ಲಿ ಅಲ್ಲಾಹನ ಶಿಕ್ಷೆ ಯಿಂದ ಪಾರಾಗಬೇಕೆಂದು ಬಯಸುತ್ತಾನೆ ಈ ರೀತಿಯ ಆರಾಧನೆ ಕೂಡ ಆತನನ್ನು ಉತ್ತಮ ಮಾನವನಾಗಿ ಪರಿವರ್ತನೆ ಮಾಡುತ್ತದೆ. ಹಿಜ್ರಾ ಎರಡನೆ ವರ್ಷದ ರಂಜಾನ್ ತಿಂಗಳು ವಿದಾಯ ಪಡೆದಾಗ ಅಲ್ಲಾಹನು ಮುಸ್ಲಿಂ ಜಗತ್ತಿಗೆ ಆಚರಣೆ ಮತ್ತು ಹಬ್ಬವಾಗಿ ಈದುಲ್ ಫಿತರನ್ನು ಕರುಣಿಸುತ್ತಾನೆ ಅಂದು ಮುಸ್ಲಿಂ ವಿಶ್ವಾಸಿಗಳಾದವರೆಲ್ಲರೂ ಮುಂಜಾನೆ ಬೇಗನೆ ಎದ್ದು ಸ್ನಾನ ಮಾಡುತ್ತಾರೆ ಹೊಸ ಬಟ್ಟೆಗಳನ್ನು ಧರಿಸಿ ಸುಗಂಧ ದ್ರವ್ಯಗಳನ್ನು ಸಿಂಪಡಿಸಿ ಇಂಪಾಗಿ ತಕ್ಬೀರ್ ಮೊಳಗಿ ಸುತ್ತ ಕುಟುಂಬ ಸಮೇತ ಮಸೀದಿಗೆ ಈದ್ಗಾ ಮೈದಾನದತ್ತ ತೆರಳುತ್ತಾರೆ ಮಾಲೀಕನು ತನ್ನ ಆಳಿನ ಮಗ್ಗುಲಲ್ಲಿ ನಿಂತು ಆಡಳಿತ ಗಾರೆನು ತನ್ನ ಪ್ರಜೆಯ ಮಗ್ಗುಲಲ್ಲಿ ನಿಂತು ಧನಿಕನು ನಿರ್ಗತಿಕನ ಮಗ್ಗುಲಲ್ಲಿ ನಿಂತು ಕರಿಯನು ಬಿಳಿಯನ ಮಗ್ಗುಲಲ್ಲಿ ನಿಂತು ರೋಗಿಯು ಆರೋಗ್ಯವಂತನ ಮಗ್ಗುಲಲ್ಲಿ ನಿಂತು ತನ್ನ ಸೃಷ್ಟಿಕರ್ತನಾದ ಅಲ್ಲಾಹನ ಮುಂದೆ ತಲೆಬಾಗುತ್ತಾನೆ ಅಂದು ಎಲ್ಲರ ಬಾಯಿಯಿಂದಲೂ ಮೊಳಗುವ ಶಬ್ದ ಒಂದೇ ಅಲ್ಲಾಹು ಅಕ್ಬರ್ ಅಲ್ಲಾಹು ಅಥವಾ ದೇವರು ಸರ್ವಶ್ರೇಷ್ಠನು ಎಂಬುದು ಈ ಶಬ್ದಗಳು ನಿಜವಾಗಿ ಮೊಳಗಬೇಕಾಗಿರುವುದು ಹೃದಯಗಳಿಂದ ಕಾರಣ ಮನಸುಗಳಲ್ಲಿರುವ ಅಹಂಕಾರ ಶ್ರೇಷ್ಠತೆ ನಿಷ್ಕೃಷ್ಟತೆಯ ಬಾಬವು ಹೊಡೆದೋಡಿಸಲ್ಪಡುತ್ತದೆ. ದೇವರ ಮುಂದೆ ಮನುಷ್ಯರೆಲ್ಲರೂ ಸಮಾನರು ಎಂಬ ಭಾವನೆ ಮೂಡಿ ಬರುತ್ತದೆ. ನಿರ್ಗತಿಕನು ತನ್ನ  ಬಡತನದ ಕಾರಣದಿಂದಾಗಿ ಹಬ್ಬವನ್ನು ಆಚರಿಸುವುದರಿಂದ ವಂಚಿತನಾಗಬಾರದೆಂಬ ಉದ್ದೇಶದಿಂದ ಸಮರ್ಥರು ಆಹಾರ ಧಾನ್ಯಗಳನ್ನು ಅರ್ಹರಿಗೆ ಹಂಚುವುದನ್ನು ಇಸ್ಲಾಂ ಕಡ್ಡಾಯಗೊಳಿಸಿದೆ ಹಸಿದವನನ್ನು ಉಣಿಸುವುದು ಅತ್ಯುತ್ತಮ ಆಚರಣೆಯಾಗಿದೆ ಮತ್ತು ಅದರಲ್ಲಿ ಸಿಗುವ ಸಂತಸವು ಅತಿ ಶ್ರೇಷ್ಠವಾದದು ಪವಿತ್ರ ರಂಜಾನಿನ ಉಪವಾಸವನ್ನು ಭಯ ಭಕ್ತಿಯಿಂದ ಆಚರಿಸಿದ ಸಹೋದರ ಸಹೋದರಿಯರು ಅಲ್ಲಾಹನು ನೀಡಿದ ಈದುಲ್ ಫಿತರ್ ದಿನವನ್ನು ಕುಟುಂಬದೊಂದಿಗೆ ಸೇರಿಕೊಂಡು ಸಂತೋಷದಿಂದ ಆಚರಿಸಿ ಆ ಮೂಲಕ ಅಲ್ಲಾಹನು ನೀಡಿದ ಅನುಗ್ರಹವನ್ನು ಸಂಪೂರ್ಣವಾಗಿ ಅನುಭವಿಸಲಿ ಮಾನವ ಮೌಲ್ಯಗಳ ಶ್ರೇಷ್ಠತೆಗಳನ್ನು ಪರಸ್ಪರ ಸಾರುವ ರಂಜಾನಿನ ಸಂದೇಶಗಳು ನಮ್ಮ ದೇಶದಲ್ಲಿರುವ ಸರ್ವ ಜನಾಂಗದವರಿಗೂ ಸಮೃದ್ಧಿಯ ಸಂತೋಷದ ಸಹಬಾಳ್ವೆಯ ಸಂದೇಶವಾಗಲಿ ಎಂದು ಈದುಲ್ ಫಿತರಿನ ಸುಂದರ ಸಂದೇಶವನ್ನು ಸರ್ವ ಜನಾಂಗಕ್ಕೂ ಹಾರೈಸುತ್ತೇನೆ. (ಬರಹ : ಸಿಎಂ ಅಬ್ದುಲ್ ಹಮೀದ್ ಮೌಲವಿ, ಸುಂಟಿಕೊಪ್ಪ)

Follow us Follow us
Share. WhatsApp Facebook Twitter Email Telegram Copy Link

Related Posts

ಶಿರಂಗಾಲದಲ್ಲಿ ಎಸ್.ವಿ. ನಂಜುಂಡಪ್ಪ ಅವರಿಗೆ ನುಡಿನಮನ; ನಿಸ್ವಾರ್ಥ ಸಾಮಾಜಿಕ ಸೇವೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಮಾಜ ಮನ್ನಣೆ ನೀಡಲಿ: ಅರಮೇರಿ ಸ್ವಾಮೀಜಿ

ಅಕ್ಟೋಬರ್ 16, 2026

ರೋಟರಿ ಮಿಸ್ಟಿ ಹಿಲ್ಸ್‌ನ 13ನೇ ವರ್ಷದ ಮಕ್ಕಳ ದಸರಾ ಯಶಸ್ವಿ; ಮಂಟಪ ನಿರ್ಮಾಣ ಸ್ಪರ್ಧೆಯಲ್ಲಿ ಟೀಮ್ ಅಗ್ನಿಗೆ ಪ್ರಥಮ ಬಹುಮಾನ; ಸತತ ಮೂರು ವರ್ಷಗಳ ಹ್ಯಾಟ್ರಿಕ್ ಸಾಧನೆ

ಅಕ್ಟೋಬರ್ 16, 2026

ಅ.17 ರಂದು ಕೊಡಗು ಜಿಲ್ಲೆಯಲ್ಲಿ ಕಾವೇರಿ ತುಲಾ ಸಂಕ್ರಮಣದ ರಜೆ

ಅಕ್ಟೋಬರ್ 16, 2026

ರೋಟರಿ ಮಿಸ್ಟಿ ಹಿಲ್ಸ್‌ನ 13ನೇ ವರ್ಷದ ಮಕ್ಕಳ ದಸರಾ ಯಶಸ್ವಿ; ಮಂಟಪ ನಿರ್ಮಾಣ ಸ್ಪರ್ಧೆಯಲ್ಲಿ ಟೀಮ್ ಅಗ್ನಿಗೆ ಪ್ರಥಮ ಬಹುಮಾನ; ಸತತ ಮೂರು ವರ್ಷಗಳ ಹ್ಯಾಟ್ರಿಕ್ ಸಾಧನೆ

ಅಕ್ಟೋಬರ್ 16, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಅ. 16: ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದಲ್ಲಿ ಆಯೋಜಿಸಲಾದ…

ಅ.17 ರಂದು ಕೊಡಗು ಜಿಲ್ಲೆಯಲ್ಲಿ ಕಾವೇರಿ ತುಲಾ ಸಂಕ್ರಮಣದ ರಜೆ

ಅಕ್ಟೋಬರ್ 16, 2026

ಅ.17ಕ್ಕೆ ಕೊಡಗು ಜಿಲ್ಲೆಯಲ್ಲಿ ತುಲಾ ಸಂಕ್ರಮಣದ ರಜೆ

ಅಕ್ಟೋಬರ್ 16, 2026

ಕಡಗದಾಳಿನಲ್ಲಿ ಎನ್‌ಎಸ್‌ಎಸ್ ಶಿಬಿರದ ಸಮಾರೋಪ : ಸಮಾಜದ ಅಭಿವೃದ್ಧಿಗೆ ವಿದ್ಯಾರ್ಥಿಗಳು ಕೊಡುಗೆ ನೀಡಲಿ : ಮೇಜರ್ ಪ್ರೊ. ರಾಘವ ಬಿ.

ಅಕ್ಟೋಬರ್ 15, 2026

ಅ.17 ರಂದು ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಕೊಡಗಿಗೆ ಭೇಟಿ

ಅಕ್ಟೋಬರ್ 15, 2026

ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5860 ಪ್ರಕರಣಗಳು ಇತ್ಯರ್ಥ

ಅಕ್ಟೋಬರ್ 15, 2026

ಅ.16 ರಂದು ಮಕ್ಕಳ ದಸರಾ ಸಂಭ್ರಮ: ಮಕ್ಕಳಿಂದ ವೈವಿದ್ಯಮಯ ಸ್ಪರ್ಧೆಗಳು

ಅಕ್ಟೋಬರ್ 15, 2026

ಗೋಣಿಕೊಪ್ಪಲು : ಅ.16 ರಂದು ವಿದ್ಯುತ್ ವ್ಯತ್ಯಯ

ಅಕ್ಟೋಬರ್ 15, 2026

ಮಡಿಕೇರಿ ನಗರ ದಸರಾ ಬಹುಭಾಷಾ ಕವಿಗೋಷ್ಠಿ : ಭಾವನೆ ಕಟ್ಟಿಕೊಡುವಲ್ಲಿ ಕಥೆ, ಕವನ, ಕವಿತೆ ಸಹಕಾರಿ : ಡಾ.ಎನ್.ಕೆ.ಲೋಲಾಕ್ಷಿ

ಅಕ್ಟೋಬರ್ 15, 2026

ಕುಶಾಲನಗರದಲ್ಲಿ ಮಾಜಿ ಸೈನಿಕರ 84ನೇ ಇಎಂಇ ಕಾರ್ಪ್ಸ್ ದಿನಾಚರಣೆ ಸಂಭ್ರಮ

ಅಕ್ಟೋಬರ್ 15, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.